Bhagyalakshmi Serial ಮುಗಿಸಿ ದಿಢೀರ್​ ಲೈವ್​ಗೆ ಬಂದು ನಟಿ ಸುಷ್ಮಾ ಕೊಟ್ಟರೊಂದು ಗುಡ್​ನ್ಯೂಸ್​

Published : Jun 07, 2026, 12:59 PM IST

ನಾಲ್ಕು ವರ್ಷಗಳ ಯಶಸ್ವಿ ಓಟದ ನಂತರ 'ಭಾಗ್ಯಲಕ್ಷ್ಮಿ' ಧಾರಾವಾಹಿ ಅಂತ್ಯಗೊಂಡಿದೆ. ಇದರ ಬೆನ್ನಲ್ಲೇ, ಪ್ರಮುಖ ಪಾತ್ರಧಾರಿ ಸುಷ್ಮಾ ಕೆ. ರಾವ್ ಅವರು 'ಕ್ವಾಟ್ಲೆ ಕಿಚನ್-02' ಎಂಬ ಹೊಸ ಅಡುಗೆ ಕಾರ್ಯಕ್ರಮದ ನಿರೂಪಕಿಯಾಗಿ ಹೊಸ ಪಯಣ ಆರಂಭಿಸಿದ್ದು, ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

PREV
16
ಭಾಗ್ಯಲಕ್ಷ್ಮಿ ಮುಕ್ತಾಯ

ಕಳೆದ ನಾಲ್ಕು ವರ್ಷಗಳಿಂದ ಎಲ್ಲರನ್ನೂ ರಂಜಿಸಿದ್ದ, ಹಲವು ಮಹಿಳೆಯರಿಗೆ ಸ್ಫೂರ್ತಿ ನೀಡಿದ್ದ ಭಾಗ್ಯಲಕ್ಷ್ಮಿ ಸೀರಿಯಲ್​ (Bhagyalakshmi Serial) ಕೊನೆಗೂ ಅಂತ್ಯಕಂಡಿದೆ. ನಾಲ್ಕು ವರ್ಷ ಜೊತೆಯಾಗಿ ಇದ್ದ ಟೀಮ್​ ಒಂದು ಒಂದೇ ಕುಟುಂಬದ ರೀತಿಯಲ್ಲಿಯೇ ಸೆಟ್​ನಲ್ಲಿ ಇರುವಾಗ, ಅದು ಅಂತ್ಯಗೊಂಡಾದ ಸಹಜವಾಗಿ ಬೇಸರ ಆಗುವುದು ಇದೆ. ಅದೇ ರೀತಿ ಭಾಗ್ಯ ಪಾತ್ರಧಾರಿ ಸುಷ್ಮಾ ಸೇರಿದಂತೆ ಇಡೀ ಟೀಮ್​ ಜನರು ಕೊನೆಯ ದಿನದ ಚಿತ್ರೀಕರಣದ ವೇಳೆ ಕಣ್ಣೀರಾಗಿರುವ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.

26
ಲೈವ್​ಗೆ ಬಂದ ನಟಿ ಸುಷ್ಮಾ

ಇದರ ನಡುವೆಯೇ, ಭಾಗ್ಯ ಉರ್ಫ್​ ಸುಷ್ಮಾ ಕೆ. ರಾವ್​ (Sushma K. Rao) ಅವರು, ಇನ್​ಸ್ಟಾಗ್ರಾಮ್​ ಲೈವ್​ಗೆ ಬಂದು ಒಂದು ಗುಡ್​ನ್ಯೂಸ್​ ಕೊಟ್ಟಿದ್ದಾರೆ. ಅದೇನೆಂದರೆ ಇದಾಗಲೇ ಟಿವಿ ವೀಕ್ಷಕರಿಗೆ ತಿಳಿದಿರುವಂತೆ ಸುಷ್ಮಾ ಕೆ.ರಾವ್​ ಅವರು ಕ್ವಾಟ್ಲೆ ಕಿಚನ್​-02ನಲ್ಲಿ ಆ್ಯಂಕರಿಂಗ್​ ಮಾಡುತ್ತಿದ್ದಾರೆ. ಕಳೆದ ಸೀಸನ್​ನಲ್ಲಿ ಅನುಪಮಾ ಗೌಡ ಅವರು ಆ್ಯಂಕರ್​ ಆಗಿದ್ದರು. ಈ ಬಾರಿ ಸುಷ್ಮಾ ಅದನ್ನು ನಡೆಸಿಕೊಡುತ್ತಿದ್ದಾರೆ.

36
ಕ್ವಾಟ್ಲೆ ಕಿಚನ್​ ಕುರಿತು ಮಾಹಿತಿ

ಈ ಬಗ್ಗೆ ಮಾಹಿತಿ ನೀಡಲು ಸುಷ್ಮಾ ಅವರು ನೇರಪ್ರಸಾರಕ್ಕೆ ಬಂದರು. ಕ್ವಾಟ್ಲೆ ಕಿಚನ್​ ಮೊದಲ ಸೀಸನ್​ ನೋಡುತ್ತಾ ಸಿಕ್ಕಾಪಟ್ಟೆ ಪ್ರಶ್ನೆಗಳು ಬಂದಿದ್ದವು. ಇದನ್ನೆಲ್ಲಾ ಹೇಗೆ ಮ್ಯಾನೇಜ್​ ಮಾಡ್ತಾರೆ ಎಂದು ಅಚ್ಚರಿಯಾಗಿತ್ತು. ಆದರೆ ಇದೀಗ ನನಗೇ ಆ್ಯಂಕರಿಂಗ್​ ಮಾಡುವ ಅವಕಾಶ ಸಿಕ್ಕಿದ್ದು ತುಂಬಾ ಖುಷಿಯಾಗಿದೆ ಎಂದಿದ್ದಾರೆ.

46
ಪ್ರೀಪ್ಲ್ಯಾನ್ಡ್​ ಆಗಿ ಇರುವುದಿಲ್ಲ

ಈ ಷೋನಲ್ಲಿ ಯಾವುದೂ ಪ್ರೀಪ್ಲ್ಯಾನ್ಡ್​ ಆಗಿ ಇರುವುದಿಲ್ಲ. ಎಲ್ಲವೂ ಸ್ಥಳದಲ್ಲಿಯೇ ಆಗುವುದು. ಹೀಗೆ ಕಾಟ ಕೊಡಬೇಕು, ಹಾಗೆ ಮಾಡಬೇಕು ಎಂದು ಹೇಳಿರುವುದಿಲ್ಲ. ಆದ್ದರಿಂದ ಸಕತ್​ ಮಜಾ ಬರುತ್ತದೆ ಎಂದಿದ್ದಾರೆ.

56
ಎಂಟರ್​ಟೈನ್​ಮೆಂಟ್​ ಪ್ಲಸ್​ ಕುಕ್ಕಿಂಗ್​

ಈ ಷೋನಲ್ಲಿ ಎಂಟರ್​ಟೈನ್​ಮೆಂಟ್​ ಜೊತೆಗೆ ಕುಕ್ಕಿಂಗ್​ ಕೂಡ ಕಲಿಯಬಹುದು. ಎಷ್ಟು ಜೋಕ್​ ನಡೆಯುತ್ತದೆ ಎಂದರೆ ನಕ್ಕೂ ನಕ್ಕೂ ಕಣ್ಣಲ್ಲಿ ನೀರು ಬರುತ್ತದೆ. ಇದನ್ನು ನೀವೂ ಎಂಜಾಯ್​ ಮಾಡಿ ಎಂದು ನಟಿ ಹೇಳಿದ್ದಾರೆ.

66
ಈ ಷೋ ಕಾನ್ಸೆಪ್ಟ್​ ಏನು?

ಅಡುಗೆಯ ಜೊತೆ ನಗುವಿನ ಔತಣವನ್ನೂ ಉಣಬಡಿಸುವ ವಿಶಿಷ್ಟ ಕಾರ್ಯಕ್ರಮ ಇದಾಗಿದೆ. ಇದರಲ್ಲಿ ಜೋಡಿಗಳ ಜೊತೆಯಾಟವಿರುತ್ತದೆ. ಜೋಡಿಯಲ್ಲಿ ಒಬ್ಬರಿಗೆ ಅಡುಗೆ ಬಂದ್ರೆ, ಇನ್ನೊಬ್ಬರಿಗೆ ಪಾಕಶಾಸ್ತ್ರದ ಅ..ಆ..ಇ..ಈ ಕೂಡ ತಿಳಿದಿರೋದಿಲ್ಲ. ಐವರು ನಳಪಾಕ ಪ್ರವೀಣರಿಗೆ ಸಹಾಯಕರಾಗಿ ಮತ್ತೈದು ನಗೆಪಾಕ ಪ್ರವೀಣರು ಇರತ್ತಾರೆ. 'ಕುಕ್ʼ ಮತ್ತು 'ಕ್ವಾಟ್ಲೆ'ಗಳು ಸೇರಿ ಅಡುಗೆ ಮಾಡುವಾಗ ಹುಟ್ಟುವ ತಮಾಷೆ, ತರ್ಲೆಗಳೇ ಈ ಶೋನ ಬ್ಯೂಟಿ. ಚಕಚಕ ಅಡುಗೆ ಮಾಡಿ ಮುಗಿಸಲು ಹೊರಡುವ ಪಾಕಪ್ರವೀಣರಿಗೆ ಅಡ್ಡಗಾಲಾಗಿ ನಿಲ್ಲುವುದೇ ಈ ʼಕ್ವಾಟ್ಲೆʼ ಸಹಾಯಕರು. ಟಾರ್ಚರ್‌ ಕೊಡಲಿಕ್ಕೆಂದೇ ಬಂದಿರುವ ಕ್ವಾಟ್ಲೆಗಳು ಸ್ವತಃ ಜೋಕರ್‌ಗಳಾಗುವ ಪರಿಹಾಸ್ಯವನ್ನು ನೋಡಿಯೇ ಆನಂದಿಸಬೇಕು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories