ದರ್ಶನ್​ ವಿಷ್ಯದಲ್ಲಿ ಹಲ್​ಚಲ್ ಸೃಷ್ಟಿಸಿದ್ದ ಸೋನು ಶೆಟ್ಟಿ ವಿರುದ್ಧ ದೂರು: ಲೈವ್​ಗೆ ಬಂದು ಸೋನು ಹೇಳಿದ್ದೇನು?

Published : Nov 29, 2025, 12:58 PM IST

ದರ್ಶನ್ ಪ್ರಕರಣದಲ್ಲಿ ಸುದ್ದಿಯಾಗಿದ್ದ ಕಂಟೆಂಟ್ ಕ್ರಿಯೇಟರ್ ಸೋನು ಶೆಟ್ಟಿ ವಿರುದ್ಧ ಇದೀಗ ಸಾಮಾಜಿಕ ಹೋರಾಟಗಾರ್ತಿ ಸಂಧ್ಯಾ ಪವಿತ್ರಾ ಅವರು ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ. ಸೋನು ಪರಾರಿಯಾಗಿದ್ದಾರೆ ಎಂಬ ಸುದ್ದಿ ಹಬ್ಬಿದ್ದು, ಲೈವ್​ ಮೂಲಕ ಸ್ಪಷ್ಟನೆ ನೀಡಿದ್ದಾರೆ.

PREV
18
ಸುದ್ದಿಯಲ್ಲಿ ಸೋನು ಶೆಟ್ಟಿ

ಕಳೆದ ಕೆಲವು ತಿಂಗಳುಗಳಿಂದ ಕಂಟೆಂಟ್​ ಕ್ರಿಯೇಟರ್​ ಇನ್​ಫ್ಲುಯೆನ್ಸರ್​ ಸೋನು ಶೆಟ್ಟಿ (Sonu Shetty) ಸುದ್ದಿಯಲ್ಲಿದ್ದಾರೆ. ದರ್ಶನ್​ ಅವರು ರೇಣುಕಾಸ್ವಾಮಿ ಕೇಸ್​ನಲ್ಲಿ ಜೈಲಿಗೆ ದಾಖಲಾಗುತ್ತಿದ್ದಂತೆಯೇ, ದರ್ಶನ್​ ಮತ್ತು ಸುದೀಪ್ ಫ್ಯಾನ್ಸ್​ ನಡುವೆ ಕೆಲವು ವಾಕ್ಸಮರಗಳು ನಡೆದ ಸಂದರ್ಭದಲ್ಲಿ ಸೋನು ಶೆಟ್ಟಿ ಎಂಟ್ರಿಯಾಗಿತ್ತು!

28
ದರ್ಶನ್​​ ವಿರುದ್ಧ ಮಾತು

‘ದರ್ಶನ್ ರೌಡಿ ಆಗಬೇಕಿತ್ತು, ಅಪ್ಪಿ ತಪ್ಪಿ ಹೀರೋ ಆಗಿದ್ದಾರೆ’ ಎಂದಿದ್ದ ಸೋನು ಶೆಟ್ಟಿ ದರ್ಶನ್​ ವಿರುದ್ಧ ಮಾತನಾಡಿದ್ದರು. ಇದರಿಂದ ದರ್ಶನ್​ ಅವರ ಅಭಿಮಾನಿಗಳು ಸೋನು ಅವರಿಗೆ ತೀರಾ ಕೆಟ್ಟ ಶಬ್ದಗಳಿಂದ ನಿಂದಿಸಿದ್ದರು. ಅಲ್ಲಿಂದ ಫೇಮಸ್​ ಆದವರು ಈ ಸೋನು ಶೆಟ್ಟಿ.

38
ಕಮೆಂಟ್​ ಬಗ್ಗೆ ಸೋನು

ತಮಗೆ ಬಂದಿರುವ ಕಮೆಂಟ್ಸ್​ ಬಗ್ಗೆ ಆಗ ಮಾತನಾಡಿದ್ದ ಸೋನು ಶೆಟ್ಟಿ, ನನ್ನ ಮೇಲೆ ಪದಗಳನ್ನು ಹೇಳಲು ಕೂಡ ಸಾಧ್ಯವಾಗದಷ್ಟರ ಮಟ್ಟಿಗೆ ಕೆಟ್ಟದಾಗಿ ಕಾಮೆಂಟ್‌ ಮಾಡುತ್ತಿದ್ದಾರೆ. ಇದನ್ನು ಸಹಿಸಲು ಆಗುವುದಿಲ್ಲ ಎಂದಿದ್ದರು. ಅಷ್ಟಕ್ಕೂ ಇವರ ಬಗ್ಗೆ ಕಮೆಂಟ್​ ಮಾಡಿದವರೆಲ್ಲಾ ಇವರ ಬಟ್ಟೆಯ ಬಗ್ಗೆನೇ ಹೇಳಿದವರು ಹೆಚ್ಚು.

48
ಸ್ನಾನ ಮಾಡಿ ಬನ್ನಿ

“ನೀನು ಸರಿಯಾಗಿ ಬಟ್ಟೆ ಹಾಕೋದು ಕಲಿತುಕೋ, ಆ ರೀತಿ ಬಟ್ಟೆ ಹಾಕಿ ಯಾಕೆ ವಿಡಿಯೋ ಮಾಡ್ತೀಯಾ” ಅಂತೆಲ್ಲ ಕಾಮೆಂಟ್‌ ಮಾಡ್ತಾರೆ. ನಾನು ಏನಾದರೂ ಬಟ್ಟೆ ಹಾಕಿಕೊಳ್ತೀನಿ, ನನ್ನ ಬಗ್ಗೆ ಕಾಮೆಂಟ್‌ ಮಾಡೋ ಮುನ್ನ ಹತ್ತು ಬಾರಿ ಸ್ನಾನ ಮಾಡಿ ಬನ್ನಿ ಎಂದು ಸೋನು ಹೇಳಿದ್ದರು.

58
ದಾಖಲಾಯ್ತು ದೂರು

ಇದೀಗ , ಸೋನು ಅವರ ವಿರುದ್ಧ ಸಾಮಾಜಿಕ ಹೋರಾಟಗಾರ್ತಿ ಸಂಧ್ಯಾ ಪವಿತ್ರಾ ಅವರು, ದೂರನ್ನು ದಾಖಲು ಮಾಡಿದ್ದಾರೆ. ಬೇಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

68
ಅವಾಚ್ಯ ಶಬ್ದಗಳಿಂದ ನಿಂದನೆ

ಅದರಲ್ಲಿ ಇರುವುದು ಏನೆಂದರೆ, ಸೋನು ಶೆಟ್ಟಿ ಎನ್ನುವವರು ತಮ್ಮ ಫೇಸ್​ಬುಕ್​ ಮತ್ತು ಇನ್​ಸ್ಟಾಗ್ರಾಮ್​ ಖಾತೆಯಿಂದ ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಸುಳ್ಳು ಆರೋಪ ಮಾಡುತ್ತಿದ್ದಾರೆ. ಅರ್ಜಿದಾರರ ಮೇಲೆ ನಡೆದಿರುವ ಲೈಂ*ಗಿಕ ದೌರ್ಜನ್ಯ ಮಾಡಿರುವ ಹಳೆಯ ವಿಡಿಯೋ ಇಟ್ಟುಕೊಂಡು ಹೀಗೆ ಮಾಡುತ್ತಿದ್ದಾರೆ. ಅರ್ಜಿದಾರರು ಹೋರಾಟದ ಹೆಸರಿನಲ್ಲಿ ಎಲ್ಲರ ಹತ್ತಿರ ಹಣವನ್ನು ಪೀಕಿಕೊಂಡು ಬದುಕುತ್ತಿದ್ದಯಾ ಎಂದು ನಿಂದಿಸಿ ಸಅಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡುತ್ತಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

78
ಅರ್ಜಿದಾರರಿಗೆ ಬೆದರಿಕೆ

ದಿನಾಂಕ 26.11.2025ರಂದು ಸೋನು ಶೆಟ್ಟಿ ಅವರು ಅರ್ಜಿದಾರರಿಗೆ ಕರೆ ಮಾಡಿ ಬೆದರಿಕೆ ಹಾಕಿರುತ್ತಾರೆ. ಸದರಿ ವಿಚಾರದಲ್ಲಿ ಅರ್ಜಿದಾರರಿಗೆ ಮುತ್ತುರಾಜ್ ಎನ್ನುವವರ ಮೇಲೆ ಅನುಮಾನವಿದೆ. ಆದ್ದರಿಂದ ಇವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ.

88
ಲೈವ್​ಗೆ ಬಂದ ಸೋನು ಶೆಟ್ಟಿ

ದೂರು ದಾಖಲಾಗುತ್ತಿದ್ದಂತೆಯೇ ಸೋನು ಶೆಟ್ಟಿ ಪರಾರಿಯಾಗಿರುವುದಾಗಿ ವರದಿಯಾಗಿತ್ತು. ಇದರಿಂದ ಕೆಂಡಾಮಂಡಲವಾಗಿರುವ ಸೋನು, ಲೈವ್​ಗೆ ಬಂದು ನಾನು ಎಲ್ಲಿಯೂ ಪರಾರಿಯಾಗಿಲ್ಲ, ಇಲ್ಲಿಯೇ ಇದ್ದೇನೆ. ಇಂಥ ಸುದ್ದಿ ಕೇಳಿ ನಗು ಬರುತ್ತಿದೆ ಎಂದಿದ್ದಾರೆ. ನಾನು ಏನೂ ಮಾಡಿಲ್ಲ, ನನ್ನಲ್ಲಿ ಬೇಕಾದಷ್ಟು ಸಾಕ್ಷಿಗಳಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories