ಕಷ್ಟದಲ್ಲಿರುವ ಸಹಸ್ಪರ್ಧಿಗೆ ಸಹಾಯ ಹಸ್ತ ಚಾಚಿದ ಕಾವ್ಯ ಶೈವ… ಶಿವರಾಜ್ ಕುಮಾರ್ ಏನಂದ್ರು ಗೊತ್ತಾ?

Published : Aug 03, 2024, 05:41 PM IST

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಅದ್ಭುತವಾಗಿ ಹೆಜ್ಜೆ ಹಾಕಿ ಜನಪ್ರಿಯತೆ ಗಳಿಸುತ್ತಿರುವ ನಟಿ ಕಾವ್ಯ ಶೈವ ಇದೀಗ ತಮ್ಮ ಸಹ ಸ್ಪರ್ಧಿಗೆ ನೆರವಿನ ಹಸ್ತ ಚಾಚಿ ಭೇಷ್ ಅನಿಸಿಕೊಂಡಿದ್ದಾರೆ.   

PREV
17
ಕಷ್ಟದಲ್ಲಿರುವ ಸಹಸ್ಪರ್ಧಿಗೆ ಸಹಾಯ ಹಸ್ತ ಚಾಚಿದ ಕಾವ್ಯ ಶೈವ… ಶಿವರಾಜ್ ಕುಮಾರ್ ಏನಂದ್ರು ಗೊತ್ತಾ?

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (Dance Karnataka) ಕಾರ್ಯಕ್ರಮದಲ್ಲಿ ಕೆಂಡಸಂಪಿಗೆಯಲ್ಲಿ ಸುಮನಾ ಆಗಿ ನಟಿಸಿದ್ದ ನಟಿ ಕಾವ್ಯ ಶೈವ ಸ್ಪರ್ಧಿಯಾಗಿ ಭಾಗವಹಿಸಿದ್ದು, ತಮ್ಮ ಡ್ಯಾನ್ಸ್ ಮೂಲಕ ಜನಮನ ಗೆದ್ದಿದ್ದಾರೆ. 
 

27

ಅತ್ಯುತ್ತಮ ಡ್ಯಾನ್ಸ್ ಪರ್ಫಾರ್ಮನ್ಸ್ ಮೂಲಕ ಗಮನ ಸೆಳೆದ ಕಾವ್ಯ (Kavya Shaiva) ಇದೀಗ ತಮ್ಮ ಸಹ ಸ್ಪರ್ಧಿ, ಡ್ಯಾನ್ಸ್ ಪಾರ್ಟ್ನರ್ ಶಶಾಂಕ್ ಕಷ್ಟಕ್ಕೆ ಮರುಗಿದ್ದು, ಅವನಿಗೊಂದು ಮುದ್ದಾದ ಸರ್ಪ್ರೈಸ್ ನೀಡಿದ್ದಾರೆ. 
 

37

ಡ್ಯಾನ್ಸರ್ ಶಶಾಂಕ್ (Shashank) ಕೋಲಾರದ ಶೀಡ್ಲಘಟ್ಟದ ಹುಡುಗ. ಆತನ ಮನೆಯಲ್ಲಿ ತುಂಬಾನೆ ಬಡತನ. ಹಾಗಾಗಿ ಕೆಲಸದ ಸಲುವಾಗಿ ಶಶಾಂಕ್ ಬೆಂಗಳೂರಲ್ಲೇ ಇದ್ದು, ಕಳೆದ ಎರಡು ವರ್ಷಗಳಿಂದ ಊರಿಗೆ ಹೋಗಿಯೇ ಇರಲಿಲ್ಲ. ಇದೀಗ ಕಾವ್ಯ ಅವನನ್ನು ಆತನ ಮನೆಗೆ ಕಾರಿನಲ್ಲಿ ಕರೆದುಕೊಂಡು ಹೋಗುವ ಮೂಲಕ ಮೊದಲ ಸರ್ ಪ್ರೈಸ್ ನೀಡಿದ್ದಾರೆ. 
 

47

ಇನ್ನು ಕಷ್ಟದಿಂದ ಕೂಡಿದ ಆ ಕುಟುಂಬಕ್ಕೆ ನೆರವಾಗೋದಕ್ಕೆ ಕಾವ್ಯಾ ಶಶಾಂಕ್ ತಾಯಿಗೆ ಮೊಬೈಲ್ ಫೋನ್ ಗಿಫ್ಟ್ ಆಗಿ ನೀಡಿದ್ದಾರೆ. ಜೊತೆಗೆ ಇನ್ಮುಂದೆ ನೀವು ಶಶಾಂಕ್‌ ಜೊತೆಗೆ ಫೋನ್‌ನಲ್ಲಿಯೆ ಮಾತನಾಡಿ, ವಿಡಿಯೋ ಕಾಲ್ ಕೂಡ ಮಾಡಬಹುದು ಎಂದಿದ್ದಾರೆ. ಕಾವ್ಯಾ ಅವರ ಈ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. 
 

57

ಈ ವಿಡಿಯೋ ಡಿಕೆಡಿ ಸ್ಟೇಜ್ ಮೇಲೆ ಪ್ರಸಾರವಾಗುತ್ತಿದ್ದಂತೆ ಜಡ್ಜ್ ಗಳಿಂದ ಹಿಡಿದು, ಎಲ್ಲರಿಂದಲೂ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivaraj Kumar) ಅವರು 'ಒಳ್ಳೆಯ ಮನಸ್ಸು ಇರೋರಿಗೆ ಮಾತ್ರ ಒಳ್ಳೆಯ ಗುಣ ಇರೋದು‘ ಎಂದು ಕಾವ್ಯರನ್ನು ಹಾಡಿ ಹೊಗಳಿದ್ದಾರೆ.
 

67

ನಟಿ ರಕ್ಷಿತಾ ಸಹ ಕಾವ್ಯ ಗುಣವನ್ನು ಕೊಂಡಾಡಿದ್ದು, ಕಾವ್ಯಾ ನೀವು ಒಳ್ಳೆಯ ಕೆಲಸವನ್ನೇ ಮಾಡಿದ್ದೀರಿ. ನಿಮ್ಮ ಬಗ್ಗೆ ನಮಗೆ ಹೆಮ್ಮೆ ಅನಿಸುತ್ತಿದೆ ಎಂದಿದ್ದಾರೆ. ನಿರೂಪಕಿ ಅನುಶ್ರೀ ಸಹ ಕಾವ್ಯ ಕೆಲಸವನ್ನು ಮೆಚ್ಚಿ ಗಟ್ಟಿಯಾಗಿ ಅಪ್ಪಿಕೊಂಡಿದ್ದಾರೆ. 
 

77

ಶಶಾಂಕ್ ನನ್ನ ತಮ್ಮನ ತರ ಎಂದು ಹೇಳಿ ಕಾವ್ಯ ಮಾಡಿರುವ ಕೆಲಸವನ್ನು ವೀಕ್ಷಕರು ಸಹ ಮೆಚ್ಚಿಕೊಂಡಿದ್ದು, ಆ ಹಳ್ಳಿ ಹುಡುಗ ಬಡ ಕುಟುಂಬಕ್ಕೆ ತೋರಿದ ಪ್ರೀತಿ ವಿಶ್ವಾಸ ಸೂಪರ್, ನಿಮ್ದು ತಾಯಿ ಹೃದಯ ಆಕ್ಕಾ ಎಂದು ಹೇಳಿದ್ದಾರೆ. 
 

Read more Photos on
click me!

Recommended Stories