ಬಿಗ್‌ಬಾಸ್‌ ಮನೆಯಲ್ಲಿರುವ ಮೊಬೈಲ್ ಚಾರ್ಜರ್ ತನ್ನದೆಂದು ಒಪ್ಪಿಕೊಂಡ ಮೈಕೆಲ್: ತರಾಟೆ ತೆಗೆದುಕೊಂಡ ನಟಿ ಶೃತಿ!

Published : Dec 23, 2023, 07:20 PM IST

ಬೆಂಗಳೂರು (ಡಿ.23): ಬಿಗ್‌ಬಾಸ್‌ ಮನೆಯಲ್ಲಿ ಮೊಬೈಲ್‌ ಬಳಸುತ್ತಿದ್ದಾರೆ ಎಂಬ ಫೋಟೋ ವೈರಲ್‌ ಆಗುತ್ತಿದ್ದಂತೆ ಈಬಗ್ಗೆ ನಟಿ ಶೃತಿ ಅವರು ಎಲ್ಲ ಕಂಟೆಸ್ಟಂಟ್‌ಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆಗ ಮೈಕೆಲ್ ಈ ಮೊಬೈಲ್ ಚಾರ್ಜರ್ ತನ್ನದೇ ಎಂದು ಒಪ್ಪಿಕೊಂಡಿದ್ದಾನೆ. 

PREV
110
ಬಿಗ್‌ಬಾಸ್‌ ಮನೆಯಲ್ಲಿರುವ ಮೊಬೈಲ್ ಚಾರ್ಜರ್ ತನ್ನದೆಂದು ಒಪ್ಪಿಕೊಂಡ ಮೈಕೆಲ್: ತರಾಟೆ ತೆಗೆದುಕೊಂಡ ನಟಿ ಶೃತಿ!

ಬಿಗ್‌ಬಾಸ್‌ 3ನೇ ಸೀಸನ್‌ ವಿನ್ನರ್ ಆಗಿರುವ  ನಟಿ ಶೃತಿ ಅವರು ಈಗ ಬಿಗ್‌ಬಾಸ್ ಮನೆಗೆ ಹೋಗಿದ್ದು, ಎಲ್ಲ ಕಂಟೆಸ್ಟಂಟ್‌ಗಳಿಗೆ ಮೊಬೈಲ್‌ ಚಾರ್ಜರ್‌ ಬಗ್ಗೆ ವಿಚಾರಣೆ ಮಾಡಿದ್ದಾರೆ. ಆಗ ಮೈಕೆಲ್ ಇದು ತನ್ನದೆಂದು ಒಪ್ಪಿಕೊಂಡಿದ್ದಾನೆ.

210

ಬಿಗ್‌ಬಾಸ್‌ ಮನೆಯೊಳಗೆ ಹೋಗಬೇಕಾದರೆ ಹಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. 108 ದಿನಗಳ ಕಾಲ ನಡೆಯುವ ಈ ರಿಯಾಲಿಟಿ ಶೋನಲ್ಲಿ ಹಲವು ಕಠಿಣ ನಿಯಮಗಳನ್ನು ಸ್ಪರ್ಧಿಗಳು ಪಾಲಿಸಲೇಬೇಕಾಗುತ್ತದೆ. 

310

ಈ ಬಗ್ಗೆ ಮೊದಲೇ ಸ್ಪರ್ಧಿಗಳಿಗೆ ತಿಳಿಸಲಾಗಿರುತ್ತದೆ. ಮಾತ್ರವಲ್ಲ ನಿಯಮದ ಬಗ್ಗೆ ಮೊದಲೇ ಬಾಂಡ್ ಬರೆಯಿಸಿ ಸ್ಪರ್ಧಿಗಳಿಂದ ಸೈನ್ ಮಾಡಿಸಿರುತ್ತಾರೆ. ಬಿಗ್‌ ಬಾಸ್‌ ಮನೆಯಲ್ಲಿ ಮುಖ್ಯವಾಗಿ ಪಾಲನೆಯಾಗುವ ನಿಯಮಗಳಲ್ಲೊಂದು ಇಲ್ಲಿ ಯಾವುದೇ ಮೊಬೈಲ್‌ ಬಳಕೆಗೆ ಅವಕಾಶವಿರುವುದಿಲ್ಲ. 

410

ಹೊರಗಿನ ಜಗತ್ತಿನೊಂದಿಗೆ ಪೋನ್ ಮೂಲಕ ಸಂಪರ್ಕ ಸಂಪೂರ್ಣ ನಿಷೇಧ ಮಾಡಲಾಗಿರುತ್ತದೆ. ಆದರೂ, ಬಿಗ್‌ಬಾಸ್‌ ಮನೆಯಲ್ಲಿ ಮೊಬೈಲ್ ಚಾರ್ಜರ್‌ ಕಂಡು ಜನರು ಬಿಗ್‌ಬಾಸ್‌ ಮನೆಯಲ್ಲಿ ನಡೆಯುತ್ತಿರುವುದೆಲ್ಲಾ ಸುಳ್ಳು ಎಂದು ಮೊಬೈಲ್ ಚಾರ್ಜರ್ ಬಳಸುವ ಫೋಟೋ ವೈರಲ್ ಮಾಡಿದ್ದರು.

510

ಬಿಗ್‌ಬಾಸ್‌ ಮನೆಗೆ ಹೋಗುತ್ತಿದ್ದಂತೆ ಶೃತಿ ಎಲ್ಲ ಕಂಟೆಸ್ಟಂಟ್‌ಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಮೊಬೈಲ್ ಬಳಕೆ ಬಗ್ಗೆ ಜನರು ಮಾತನಾಡಿಕೊಳ್ಳುತ್ತಿದ್ದ ಬಗ್ಗೆಯೂ ವಿಚಾರಣೆ ಮಾಡಿದ್ದಾರೆ.
 

610

ಸಂಗೀತಾ ಶೃಂಗೇರಿ ಪಕ್ಕದಲ್ಲಿರುವ ಜಾರ್ಜರ್ ಫೋಟೋ ತೋರಿಸಿದ ಶೃತಿ: ಇತ್ತೀಚಿಗೆ ಸಂಗೀತ ಶೃಂಗೇರಿ ಬಿಗ್‌ಬಾಸ್‌ ಮನೆಯೊಳಗಿರುವ ಪೋಟೋ ವೈರಲ್ ಆಗಿದೆ. ಆದರೆ ಅಚ್ಚರಿಯ ವಿಚಾರ ಅಂದ್ರೆ ಈ ಫೋಟೋದಲ್ಲಿ ಸಂಗೀತ ಕುಳಿತಿರುವ ಸಮೀಪವೇ ಪ್ಲಗ್‌ನಲ್ಲಿ ಚಾರ್ಜರ್‌ ಕಾಣುತ್ತಿದೆ.

710

ಕೆಲವು ವಿಶೇಷ ಅಧಿಕಾರಗಳೊಂದಿಗೆ ನಟಿ ಶೃತಿ ಬಿಗ್‌ಬಾಸ್‌ ಮನೆಗೆ ಹೋಗಿ ವಾರದ ಕಥೆಯನ್ನು ಜನರ ಮುಂದೆ ತೆರೆದಿಟ್ಟು, ಒಬ್ಬರನ್ನು ಮನೆಯಿಂದ ಎಲಿಮಿನೇಟ್ ಕೂಡ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. 

810

ಸಂಗೀತಾ ಪಕ್ಕದಲ್ಲಿ ಕಾಣಿಸುತ್ತಿದ್ದ ಮೊಬೈಲ್ ಚಾರ್ಜರ್ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ವೈರಲ್‌ ಆದ ಫೋಟೋ ನೋಡಿದವರಿಗೆ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಗಳು ಗುಟ್ಟಾಗಿ ಮೊಬೈಲ್‌ ಬಳಸುತ್ತಾರಾ ಎಂಬ ಅನುಮಾನ ಉಂಟಾಗಿದೆ.
 

910

ಆದರೆ, ಇದನ್ನು ನಾನು ಶೇವಿಂಗ್ ಟ್ರಿಮ್ಮರ್‌ಗೆ ಚಾರ್ಜ್‌ ಹಾಕಲು ಬಳಸುತ್ತೇನೆ ಎಂದು ಹೇಳಿದ್ದಾರೆ. ಮತ್ತೊಂದೆಡೆ, ವಿನಯ್‌ ಕೂಡ ತನ್ನದೂ ಟ್ರಿಮ್ಮರ್‌ ಇದ್ದು ಅದನ್ನು ಚಾರ್ಜ್‌ ಮಾಡಲು ವಿದ್ಯುತ್ ಸಾಕೆಟ್‌ಗೆ ಚಾರ್ಜರ್‌ ಹಾಕಿಕೊಳ್ಳುತ್ತಿದ್ದೇವೆ.
 

1010

ಈ ಫೋಟೋವನ್ನು ಕಂಟೆಸ್ಟಂಟ್‌ಗಳಿಗೆ ತೋರಿಸಿದಾಗ ಬಿಗ್‌ಬಾಸ್‌ ಸ್ಟ್ರಾಂಗ್ ಕಂಟೆಸ್ಟಂಟ್‌ಗಳಲ್ಲಿ ಒಬ್ಬರಾಗಿರುವ ಮೈಕೆಲ್ ತನ್ನದೇ ಮೊಬೈಲ್ ಚಾರ್ಜರ್‌ ಎಂಬುದನ್ನು ಒಪ್ಪಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories