ಡೈವೋರ್ಸ್ ಆಗಿದ್ದ ವ್ಯಕ್ತಿಯನ್ನ ಮದುವೆಯಾಗಿ ತಪ್ಪು ಮಾಡ್ಬಿಟ್ಟೆ: ಹೊಸ ಹುಡ್ಗ ಸಿಕ್ಕಿದ ಮೇಲೆ ಬೆಂಗಳೂರು ನಟಿಯ ಮಾತು!

First Published | May 18, 2024, 2:37 PM IST

ಬೆಂಗಳೂರು ಮೂಲದ ನಟಿ ನಿಧಿ ಸೇಥ್‌ ಮತ್ತೊಂದು ಮದುವೆಯಾಗೋಕೆ ರೆಡಿ ಆಗಿದ್ದಾರೆ. ಟಿವಿ ಸ್ಟಾರ್‌ ಕರಣ್‌ ವೀರ್‌ ಮೆಹ್ರಾ ಜೊತೆ ವಿಚ್ಛೇದನ ಪಡೆದ ಬಳಿಕ ಹೊಸ ಸಂಗಾತಿಯನ್ನು ಅವರು ಹುಡುಕಿಕೊಂಡಿದ್ದಾರೆ.

ಬೆಂಗಳೂರು ಮೂಲದ ಕಿರುತೆರೆ ನಟಿ ನಿಧಿ ಸೇಥ್‌ ಮತ್ತೊಮ್ಮೆ ಮದುವೆಯಾಗೋಕ ರೆಡಿಯಾಗಿದ್ದಾರೆ. ಇತ್ತೀಚೆಗೆ ಅವರು ಸೋಶಿಯಲ್‌ ಮೀಡಿಯಾದಲ್ಲಿ ಈ ಸುದ್ದಿಯನ್ನ ಹಂಚಿಕೊಂಡಿದ್ದಾರೆ.

ಹಿಂದಿ ಧಾರವಾಹಿಯಲ್ಲಿ ಪಾರ್ವತಿ ಪಾತ್ರದಲ್ಲಿ ನಟಿಸಿದ್ದ ನಿಧಿ ಸೇಥ್‌, ಪತಿ ಕರಣ್‌ ವೀರ್‌ ಮೆಹ್ರಾ ಅವರೊಂದಿಗೆ ಕಳೆದ ವರ್ಷ ಅವರು ವಿಚ್ಛೇದನ ಪಡೆದುಕೊಂಡಿದ್ದರು.

Tap to resize

ವಿಚ್ಛೇದನ ಪಡೆದುಕೊಂಡ ಬಳಿಕ ಮುಂಬೈನಿಂದ ಬೆಂಗಳೂರಿಗೆ ಶಿಫ್ಟ್‌ ಆಗಿದ್ದ ನಿಧಿ ಸೇಥ್‌, ಇತ್ತೀಚೆಗೆ ಹೊಸ ಪ್ರೀತಿಯನ್ನು ಕಂಡುಕೊಂಡಿದ್ದಾಗಿ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ನಿಧಿ ಸೇಥ್‌, ಅದಾಗಲೇ ಮದುವೆಯಾಗಿ ವಿಚ್ಛೇದನ ಪಡೆದುಕೊಂಡಿದ್ದ ವ್ಯಕ್ತಿಯನ್ನು ಮದುವೆ ಮಾಡಿಕೊಂಡು ನನ್ನ ಜೀವನದಲ್ಲಿ ಅತೀದೊಡ್ಡ ತಪ್ಪು ಮಾಡಿದೆ ಎಂದು ಹೇಳಿದ್ದಾರೆ.

ನಮ್ಮಿಬ್ಬರ ನಡುವೆ ತಾಳಮೇಳ ಇಲ್ಲದೇ ಇರುವುದು ಗೊತ್ತಾದಾಗ ನಾನು ಈ ಸಂಬಂಧದಿಂದ ಹೊರಬರಬೇಕು ಎಂದು ತೀರ್ಮಾನ ಮಾಡಿದೆ. ಈ ವೇಳೆ ನನ್ನ ಕುಟುಂಬ ಕೂಡ ನನ್ನ ಬೆಂಬಲಕ್ಕೆ ನಿಂತಿತ್ತು ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿಯೇ ಸ್ವಂತ ಮನೆ ಹೊಂದಿರುವ ನಿಧಿ ಸೇಥ್‌, ತನ್ನ ತಂದೆ-ತಾಯಿಯ ಜೊತೆ ಉದ್ಯಾನನಗರಿಗೆ ಶಿಫ್ಟ್‌ ಆಗಿದ್ದರು. ಅದರೊಂದಿಗೆ ಇಂಟೀರಿಯರ್‌ ಡಿಸೈನ್‌ ಅಭ್ಯಾಸವನ್ನೂ ಮಾಡ್ತಾ ಇದ್ದರು.

ಇತ್ತೀಚೆಗೆ ಇನ್ಸ್‌ಟಾಗ್ರಾಮ್‌ನಲ್ಲಿ ಹೂವಿನ ಬೊಕ್ಕೆ ಹಿಡಿದುಕೊಂಡು ವ್ಯಕ್ತಿಯ ಜೊತೆ ನಿಧಿ ಪೋಸ್‌ ನೀಡಿದ್ದು, ಅವರನ್ನೇ ಮದುವೆಯಾಗುವುದಾಗಿ ತಿಳಿಸಿದ್ದಾರೆ. ಆದರೆ, ಹೊಸ ಹುಡುಗನ ಬಗ್ಗೆ ಹೆಚ್ಚಿನ ವಿವರ ನೀಡಲು ನಿರಾಕರಿಸಿದ್ದಾರೆ.

ಮತ್ತೊಮ್ಮೆ ಪ್ರೀತಿಯನ್ನು ಹುಡುಕಿಕೊಂಡಿದ್ದಕ್ಕೆ ಸಂತಸವಾಗಿದೆ. ನನ್ನ ಮೇಲೆ ದೇವರ ಪ್ರೀತಿ ಇದೆ ಎನ್ನುವುದು ಇದರಿಂದಗಿ ಗೊತ್ತಾಗಿದೆ ಎಂದು ನಿಧಿ ಹೇಳಿದ್ದಾರೆ.

ಹಿಂದಿಯಲ್ಲಿ ಮೇರೆ ಡ್ಯಾಡ್‌ ಕೀ ದುಲ್ಹನ್‌ ಹಾಗೂ ಕಿಸ್ಮತ್‌ ಕಾ ಖೇಲ್‌ ಧಾರಾವಾಹಿಗಳಲ್ಲಿ ನಿಧಿ ಸೇಥ್‌ ನಟಿಸಿದ್ದರು. ಮದುವೆಯಾದ ಬಳಿಕವೂ ನಟನೆಯನ್ನು ಮುಂದುವರಿಸೋದಾಗಿ ತಿಳಿಸಿದ್ದಾರೆ.

ನಿಧಿ ಸೇಥ್‌ ಹಾಗೂ ಕರಣ್‌ ವೀರ್‌ ಮೆಹ್ರಾ 2021ರಲ್ಲಿ ವಿವಾಹವಾಗಿದ್ದರು. ಆದರೆ, ಈ ಮದುವೆ ಹೆಚ್ಚು ಕಾಲ ಉಳಿಯಲಿಲ್ಲ. ಮದುವೆಯಾದ ಒಂದೇ ವರ್ಷದಲ್ಲಿ ಇವರು ಬೇರೆ ಬೇರೆಯಾಗಿದ್ದರು.

ಅದ್ದೂರಿಯಾಗಿ ವಿವಾಹವಾಗಿದ್ದ ಈ ಜೋಡಿ 2023ರಲ್ಲಿ ವಿಚ್ಛೇದನ ಪಡೆದುಕೊಂಡಿತ್ತು. ಈ ರಿಲೇಷನ್‌ಷಿಪ್‌ ಅತ್ಯಂತ ಟಾಕ್ಸಿಕ್‌ ಆಗಿತ್ತು ಎಂದು ನಿಧಿ ಹೇಳಿದ್ದರು.

ಮದುವೆಯಾದ ಕೆಲವೇ ದಿನಗಳಲ್ಲಿ ನಮ್ಮಿಬ್ಬರ ನಡುವೆ ಮನಸ್ತಾಪ ಕಾಣಿಸಿಕೊಂಡಿತ್ತು. ಒಂದಾಗಿ ಇರುವ ದಿನಗಳೇ ಇರಲಿಲ್ಲ ಎಂದು ನಿಧಿ ಹೇಳಿದ್ದರು.

ವಿಚ್ಛೇದನ ಪಡೆದುಕೊಂಡ 9 ತಿಂಗಳ ಬಳಿಕ ಬೆಂಗಳೂರಿಗೆ ಶಿಫ್ಟ್‌ ಆಗಿದ್ದ ನಿಧಿ ಸೇಥ್‌ ಅವರ ಬಾಳಿನಲ್ಲೀಗ ಹೊಸ ವ್ಯಕ್ತಿಯ ಆಗಮನವಾಗಿದೆ.

ನಾನು ಮದುವೆಯಾಗುತ್ತಿರುವ ಹುಡುಗ ಎಂಟರ್‌ಟೇನ್‌ಮೆಂಟ್‌ ಕ್ಷೇತ್ರದವನಲ್ಲ ಎಂದು ನಿಧಿ ಹೇಳಿದ್ದು, ಅವರ ವಿವರಗಳು ಮುಂದಿನ ದಿನಗಳಲ್ಲಿ ತಿಳಿಯಲಿದೆ ಎಂದಿದ್ದಾರೆ.

ಇನ್ನೊಂದೆಡೆ ನಿಧಿ ಸೇಥ್‌ನಿಂದ ವಿಚ್ಛೇದನ ಪಡೆದುಕೊಂಡಿರುವ ನಟ ಕರಣ್‌ ವೀರ್‌ ಮೆಹ್ರಾ ಖತ್ರೋನ್‌ ಕಾ ಕಿಲಾಡಿ 14ನೇ ಸೀಸನ್‌ನ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

Latest Videos

click me!