ಜಾನಕಿ ಸಂಸಾರದ ಮೂಲಕ ಕಿರುತೆರೆಗೆ ಮತ್ತೆ ಕಾವ್ಯಾ ಶಾಸ್ತ್ರಿ ಎಂಟ್ರಿ… ಈ ಬಾರಿ ವಿಲನ್

First Published | Apr 29, 2024, 6:09 PM IST

ನಾಯಕಿಯಾಗಿ ಹಲವು ಸೀರಿಯಲ್ ಗಳಲ್ಲಿ ನಟಿಸಿದ್ದ ಕಾವ್ಯಾ ಶಾಸ್ತ್ರಿ ಇದೀಗ ವರ್ಷಗಳ ಬಳಿಕ ಮತ್ತೆ ಸೀರಿಯಲ್‌ಗೆ ಎಂಟ್ರಿ ಕೊಟ್ಟಿದ್ದಾರೆ, ಅದು ವಿಲ್ಲನ್ ಆಗಿ ನಟಿಸುತ್ತಿದ್ದಾರೆ. 
 

ಸೀರಿಯಲ್ ಲೋಕದಲ್ಲಿ ಜನಪ್ರಿಯತೆ ಗಳಿಸಿದ ನಟಿಯರಲ್ಲಿ ಕಾವ್ಯಾ ಶಾಸ್ತ್ರೀ (Kavya Shastry) ಕೂಡ ಒಬ್ಬರು. ಶುಭ ವಿವಾಹ ಸೀರಿಯಲ್ ಮೂಲಕ ನಟನೆಗೆ ಎಂಟ್ರಿ ಕೊಟ್ಟು, ಆ ಸೀರಿಯಲ್ ಮೂಲಕ ಕರ್ನಾಟಕದ ಮನೆ ಮನ ತಲುಪಿದ ನಟಿ ಕಾವ್ಯಾ. 
 

ಶುಭವಿವಾಹ (SHubha Vivaha) ಸೀರಿಯಲ್ ಜನಪ್ರಿಯತೆಯ ಬಳಿಕ ಕಾವ್ಯಾ ನಂತರ ಸೀರಿಯಲ್ ಗಳಿಂದ ದೂರ ಉಳಿದು, ನಿರೂಪಣೆ ಮಾಡುವುದಕ್ಕೆ ಇಳಿದರು. ಅವಾರ್ಡ್ ಕಾರ್ಯಕ್ರಮ, ದೊಡ್ಡ ದೊಡ್ಡ ಕಾರ್ಯಕ್ರಮಗಳಿಗೆ ಕಾವ್ಯಾ ಶಾಸ್ತ್ರೀ ನಿರೂಪಣೆ ಮಾಡುತ್ತಿದ್ದರು. 
 

Tap to resize

ಇನ್ನು ಕೊರೋನಾ ಬಳಿಕ ಕಾವ್ಯಾ ಮತ್ತೆ ಸೀರಿಯಲ್‌ಗೆ ಕಮ್ ಬ್ಯಾಕ್ ಮಾಡಿದ್ದರು. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧೈರ್ಯವಂತೆ ಹೆಣ್ಣುಮಗಳ ಕಥೆ ರಾಧಿಕಾದಲ್ಲಿ ರಾಧಿಕಾ (Radhika) ಪಾತ್ರದಲ್ಲಿ ಕಾವ್ಯಾ ನಟಿಸಿದ್ದರು. 
 

ವರ್ಷಗಳ ಹಿಂದೆ ಕಾರಾಣಾಂತರಗಳಿಂದ ಕಾವ್ಯಾ ಶಾಸ್ತ್ರೀ ಆ ಸೀರಿಯಲ್ ನಿಂದ ಹೊರಬಂದರು. ಸದ್ಯ ತೇಜಸ್ವಿನಿ ಶೇಖರ್ ಈ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸೀರಿಯಲ್ ತಂಡವೇ ನಾನು ಆ ಸೀರಿಯಲ್‌ನಿಂದ ಹೊರ ಬರುವಂತೆ ಮಾಡಿತು ಎಂದು ವಿಡಿಯೋ ಒಂದರಲ್ಲಿ ಕಾವ್ಯಾ ಶಾಸ್ತ್ರಿ ತಿಳಿಸಿದ್ದರು. 
 

ಇದೀಗ ಹಲವು ಸಮಯದ ಬಳಿಕ ಕಾವ್ಯಾ ಮತ್ತೆ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಸ್ಟಾರ್ ಸುವರ್ಣದಲ್ಲಿ  (Star Suvarna) ಪ್ರಸಾರವಾಗುತ್ತಿರುವ ಜಾನಕಿ ಸಂಸಾರ ಸೀರಿಯಲ್‌ನಲ್ಲಿ ಕಾವ್ಯಾ ಶಾಸ್ತ್ರೀ ಮೊದಲ ಬಾರಿಗೆ ವಿಲ್ಲನ್ ಆಗಿ ನಟಿಸುತ್ತಿದ್ದಾರೆ. 
 

ಜಾನಕಿ ಸಂಸಾರ (Janaki Samsara) ದೊಡ್ಡದಾದ ಫ್ಯಾಮಿಲಿ. ಈ ಕುಟುಂಬವನ್ನು ಗಟ್ಟಿಯಾಗಿ ಜೋಡಿಸಿ ನಿಲ್ಲಿಸಿರೋದೆ ಜಾನಕಿ ಮತ್ತು ಆಕೆಯ ಗಂಡ, ಮನೆಯ ಹಿರಿಯ ಮಗ. ಅಂಜನಾ ಮತ್ತು ಸೂರಜ್ ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಮನೆಗೆ ಹೊಸದಾಗಿ ಬರುವ ಸೊಸೆಯ ಪಾತ್ರದಲ್ಲಿ ಕಾವ್ಯಾ ನಟಿಸುತ್ತಿದ್ದಾರೆ. ಇವರ ಪಾತ್ರದ ಹೆಸರು ಅನಾಮಿಕ. 
 

ಮದುವೆಗೂ ಮುನ್ನ ಮನೆಗೆ ಕಾಲಿಡುತ್ತಲೇ ಕುಟುಂಬ ಒಡೆದು ಹೋಗುವ ಬಗ್ಗೆ ಮಾತನಾಡುವ ಹುಡುಗಿಯಾಗಿ ಅಂದರೆ ವಿಲನ್ ಆಗಿ ಕಾವ್ಯಾ ಶಾಸ್ತ್ರೀ ನಟಿಸುತ್ತಿದ್ದಾರೆ. ಎರಡನೆ ಸೊಸೆಯಾಗಿ ಮನೆಗೆ ಬರುವ ಹುಡುಗಿಗೆ, ಮತ್ತೊಬ್ಬ ತಮ್ಮ ಅಜ್ಜಿಯ ಕಾಲು ಹಿಡಿಯುವಂತೆ ಹೇಳಿದಾಗ, ಸಿಟ್ಟಾಗುವ ಅನಾಮಿಕ, ಅವನ ಕಾಲನ್ನು ಬೇಕಂತಲೇ ಮೆಟ್ಟಿ ಅವನ ಕೈಯಲ್ಲಿರುವ ಕುಟುಂಬದ ಫೋಟೋ ಬೀಳುವಂತೆ ಮಾಡ್ತಾಳೆ. ಯಾವ ರೀತಿ ಜಾನಕಿ ಮತ್ತು ಆಕೆಯ ಗಂಡ ಸಂಸಾರವನ್ನು ಒಂದಾಗಿ ಇಡುತ್ತಾರೆ ಕಾದು ನೋಡಬೇಕು. 
 

Latest Videos

click me!