ಬಿಗ್‌ಬಾಸ್ ಬಳಿಕ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡ ಗೌತಮಿ ಜಾಧವ್!

Published : Jun 22, 2025, 02:13 PM IST

Actress Gauthami Jadhav: ಕಿರುತೆರೆಯ ಲೇಡಿ ರಾಮಾಚಾರಿ ಖ್ಯಾತಿಯ ಗೌತಮಿ ಜಾಧವ್ ಹೊಸ ಧಾರಾವಾಹಿಯಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. 

PREV
15

ಕಿರುತೆರೆಯ ಮಾಸ್ ಹೀರೋಯಿನ್, ಲೇಡಿ ರಾಮಾಚಾರಿ ಅಂತಾನೇ ಗುರುತಿಸಿಕೊಂಡಿರುವ ನಟಿ ಗೌತಮಿ ಜಾಧವ್ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿಯಲ್ಲಿ ಗೌತಮಿ ಜಾಧವ್ ಕಾಣಿಸಿಕೊಂಡಿದ್ದರು.

25

ಜೀ ಕನ್ನಡ ಸೀರಿಯಲ್‌ನಲ್ಲಿ ಪ್ರಸಾರವಾಗುತ್ತಿದ್ದ ಸತ್ಯ ಧಾರಾವಾಹಿ ಗೌತಮಿ ಜಾಧವ್‌ಗೆ ದೊಡ್ಡಮಟ್ಟದ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಸತ್ಯ ಸೀರಿಯಲ್ ಮುಗಿಯುತ್ತಿದ್ದಂತೆ ಬಿಗ್‌ಬಾಸ್ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದರು.

35

ಸತ್ಯ ಸೀರಿಯಲ್‌ ಲುಕ್‌ನಲ್ಲಿಯೇ ಬಿಗ್‌ಬಾಸ್‌ಗೆ ಗೌತಮಿ ಜಾಧವ್ ಎಂಟ್ರಿ ಕೊಟ್ಟಿದ್ದು ವಿಶೇಷವಾಗಿತ್ತು. ಗೌತಮಿ ಅವರ ಬಿ ಪಾಸಿಟಿವ್ ಡೈಲಾಗ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸಹಸ್ಪರ್ಧಿಯಾಗಿದ್ದ ಧನರಾಜ್‌ ಆಚಾರ್, ಗೌತಮಿ ಮುಂದೆಯೇ ಬಿ ಪಾಸಿಟಿವ್ ಎಂದು ಹೇಳಿ ತಮಾಷೆ ಮಾಡಿದ್ದರು.

45

ಇದೀಗ ಬಿಗ್‌ಬಾಸ್‌ನಿಂದ ಬಂದ ಬಳಿಕ ಗೌತಮಿ ಜಾಧವ್ ಹೊಸ ಧಾರಾವಾಹಿ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಉದಯ ಟಿವಿಯ ಸೇವಂತಿ ಸೀರಿಯಲ್‌ನಲ್ಲಿ ಗೌತಮಿ ಜಾಧವ್ ನಟಿಸಲಿದ್ದಾರೆ ಎಂಬ ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

55

ಸುಮಾರು 15 ವರ್ಷದ ಬಳಿಕ ಗೌತಮಿ ಜಾಧವ್ ಉದಯ ಟಿವಿಗೆ ಹಿಂದಿರುಗುತ್ತಿದ್ದಾರೆ. ಆದ್ರೆ ಈ ಬಗ್ಗೆ ಗೌತಮಿ ಜಾಧವ್ ಅಧಿಕೃತವಾಗಿ ಯಾವುದೇ ಹೇಳಿಕೆ ಅಥವಾ ಪೋಸ್ಟ್ ಹಂಚಿಕೊಂಡಿಲ್ಲ.

Read more Photos on
click me!

Recommended Stories