ಕನ್ನಡ ಕಿರುತೆರೆಯಲ್ಲಿ 'ಹರ ಹರ ಮಹದೇವ' ಧಾರಾವಾಹಿ ಖ್ಯಾತಿಯ ವಿನಯ್ ಗೌಡ 'ಬಿಗ್ ಬಾಸ್' ರಿಯಾಲಿಟಿ ಶೋ ಮನೆಯಲ್ಲಿ ಆನೆ ಎಂದು ಖ್ಯಾತಿಯಾಗಿದ್ದರು. ಬಿಗ್ ಬಾಸ್ ಕನ್ನಡ ಸೀಸನ್ 10ರ ಫೈನಲಿಸ್ಟ್ ಇಬ್ಬರ ಪೈಕಿ ನಾನೂ ಒಬ್ಬನಾಗಿರುತ್ತೇನೆ ಎಂಬ ದೃಢ ವಿಶ್ವಾಸವನ್ನು ಹೊಂದಿದ್ದ ವಿನಯ್‌ಗೆ ಅಭಿಮಾನಿಗಳು ಕೈ ಕೊಟ್ಟಿದ್ದಾರೆ.
ಬಿಬಿಕೆ-10ರಲ್ಲಿ 3ನೇ ರನ್ನರ್ ಅಪ್ ಸ್ಥಾನ ವಿನಯ್ ಅವರು ಮನೆಯಲ್ಲಿ ನೇರ ನುಡಿ ಹಾಗೂ ಖಡಕ್ ಮಾತುಗಳೊಂದಿದೆ ಎಲ್ಲರೊಂದಿಗೂ ನಿಷ್ಠುರತೆಯಿಂದ ನಡೆದುಕೊಳ್ಳುತ್ತಿದ್ದರು. ಜೊತೆಗೆ, ಎದುರಾಳಿ ಕಂಟೆಸ್ಟೆಂಟ್‌ಗಳೊಂದಿಗೆ ಕಟಿಬದ್ಧ ವೈರಿಯಂತಿದ್ದ ವಿನಯ್ ಅವರನ್ನು ಅಭಿಮಾನಿಗಳು ಕೈ ಹಿಡಿಯಲಿಲ್ಲ.
ವಿನಯ್ ಅವರು ಟಾಪ್-2ನಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದೇ ಅಗ್ರ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಆದರೆ, ಬಿಗ್ ಬಾಸ್ ಮನೆಯಿಂದ ವಿನಯ್ ಹೊರಗೆ ಬಂದ ನಂತರ ಅವರ ಸಂದರ್ಶನ ನೋಡಿ ಅಭಿಮಾನಿಯೊಬ್ಬ ಸಾರಿ ವಿನಯ್ ಕೇಳಿಕೊಂಡಿದ್ದಾರೆ.
ಮತ್ತೊಬ್ಬ ಅಭಿಮಾನಿ ವ್ಯಕ್ತಿಗಿಂತ ವ್ಯಕ್ತಿತ್ವ ದೊಡ್ಡದು ಎಂಬುದನ್ನು ನೀವು ಪ್ರೂವ್ ಮಾಡಿಬಿಟ್ಟಿರಿ. ಇಂತಹ ವ್ಯಕ್ತಿಯನ್ನು ಯಾಕಾದ್ರೂ ಸೋಲಿಸಿದೆವು ಎಂದು ಪಶ್ಚಾತ್ತಾಪವನ್ನೂ ವ್ಯಕ್ತಪಡಿಸಿದ್ದಾರೆ. ಡ್ರೋನ್ ಪ್ರತಾಪ್ ಬದಲು ನಿಮಗಾದರೂ ಓಟ್ ಹಾಕಿ ರನ್ನರ್ ಅಪ್ ಮಾಡಬೇಕಿತ್ತು ಎಂದು ಹೇಳಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಮಾಧ್ಯಮಗಳಿಗೆ ನೀಡಿದ ಸಂದರ್ಶನ ಮಾತನಾಡಿದ ವಿನಯ್, ತಮ್ಮ ಪೋಷಕರ ಬಗ್ಗೆಯೂ ಮೊದಲ ಬಾರಿಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ತಾವು 16 ವರ್ಷದಿಂದಲೂ ತಂದೆ-ತಾಯಿಂದ ದೂರವೇ ಇದ್ದ ವಿಚಾರವನ್ನು ಹೇಳಿಕೊಂಡಿದ್ದಾರೆ.
ವಿನಯ್ ಅವರ ತಂದೆ ತಾಯಿ ಇಬ್ಬರೂ ವಿಚ್ಛೇದಿತರಾಗಿದ್ದಾರೆ. ಇನ್ನು ವಿನಯ್ 16 ವರ್ಷಗಳ ಹಿಂದೆ ಮನೆ ಬಿಟ್ಟು ಹೋದವರು ಅವರ ತಂದೆ ತಾಯಿಯಿಂದ ದೂರವಿದ್ದು ಸ್ವಂತವಾಗಿ ಜೀವನ ಕಟ್ಟಿಕೊಂಡಿದ್ದಾರೆ.
ಮನೆ ಬಿಟ್ಟು ಹೋದ ಹದಿನಾರು ವರ್ಷಗಳ ನಂತರ ತಂದೆಯನ್ನು 2ನೇ ಮದುವೆಯಾಗಿದ್ದ ಪತ್ನಿ ಅವರನ್ನು ಅನಾರೋಗ್ಯದ ಕಾರಣ ಬೀದಿಗೆ ಬಿಟ್ಟಿದ್ದರು. ಆದರೆ, ತಂದೆ ಅನಾರೋಗ್ಯದಿಂದ ಬಳಲುತ್ತಿದ್ದಾಗ ಪಕ್ಕದ ಮನೆಯವರೊಬ್ಬರು ತಂದೆಯನ್ನು ಆಸ್ಪತ್ರೆಗೆ ದಾಖಲಿಸಿ ನನಗೆ ಮಾಹಿತಿ ನೀಡಿದ್ದರು.
ಆಗ ನಾನೊಂದು ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದರಿಂದ ದಿಢೀರನೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ರಿಯಾಲಿಟಿ ಶೋ ಮುಕ್ತಾಯ ಆಗುತ್ತಿದ್ದಂತೆಯೇ ಆಸ್ಪತ್ರೆಗೆ ಧಾವಿಸಿ ಬಂದು ತಂದೆಯನ್ನು ನೊಡಬೇಕು ಎನ್ನುವಷ್ಟರಲ್ಲಿ ಅವರ ಪ್ರಾಣವೇ ಇರಲಿಲ್ಲ ಎಂಬ ನೋವನ್ನು ಹಂಚಿಕೊಂಡಿದ್ದಾರೆ.
ಇನ್ನು ತಾಯಿಯ ಬಗ್ಗೆಯೂ ಹೇಳಿದ ವಿನಯ್ ತನ್ನ ತಾಯಿ ತಂದೆಯಿಂದ ಡಿವೋರ್ಸ್ ಪಡೆದು ಬೇರೊಬ್ಬರೊಂದಿಗೆ ಜೀವನ ಕಟ್ಟಿಕೊಂಡು, ಮಕ್ಕಳನ್ನು ಮಾಡಿಕೊಂಡು ಎಲ್ಲೋ ಆರಾಮವಾಗಿದ್ದಾರೆ. ಅವರು ಚೆನ್ನಾಗಿರಲಿ ಎಂದು ಬಯಸುತ್ತೇನೆ ಎಂದು ಹಾರೈಸಿದ್ದಾರೆ.