ಬಾಲ್ಯದಿಂದಲೇ ನಿರೂಪಕಿಯಾಗಿ ಅರಳು ಉರಿದಂತೆ ಮಾತನಾಡುತ್ತಿದ್ದ, ಮಂಗಳೂರಿನ ಬೆಡಗಿ ಅನುಶ್ರೀ (Anushree), ಇದೀಗ ತಮ್ಮ ಸ್ಪಷ್ಟ ಮಾತು, ನಗುವಿನ ಮೂಲಕ ರಾಜ್ಯದ ಮನಗೆದ್ದ ಜನಪ್ರಿಯ ನಿರೂಪಕಿ ಹೌದು.
ನಟಿಯಾಗಿ ಒಂದೆರಡು ಸಿನಿಮಾಗಳಲ್ಲಿ ನಟಿಸಿ ನಿರೂಪಕಿಯಾಗಿ (Anchor )ರಾಜ್ಯಾದ್ಯಂತ ಮನೆ ಮಾತಾಗಿರುವ ಅನುಶ್ರೀ ಇತ್ತೀಚೆಗೆ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು, ಸೆಲೆಬ್ರೇಶನ್ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಈ ವರ್ಷದ ಹುಟ್ಟು ಹಬ್ಬ ತುಂಬಾ ವಿಶೇಷ ...ಮೊದಲ ಬಾರಿಗೆ ... ಹೊರಗಡೆ ಆಚರಿಸಿದ್ದು ನಿಮ್ಮೆಲ್ಲರ ಪ್ರೀತಿಗೆ ನಾ ಸದಾ ಚಿರಋಣಿ ...ನಿನ್ನೆ ನಡೆದ ಸಂಭ್ರಮದ ಕ್ಷಣಗಳನ್ನು ಸದ್ಯದಲ್ಲೇ ಹಂಚಿಕೊಳ್ತೀನಿ ಎಂದು ಕ್ಯಾಪ್ಶನ್ ಬರೆದಿದ್ದು, ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಅನುಶ್ರೀ ಬೆಟ್ಟಗುಡ್ಡಗಳು ತುಂಬಿದ ಊರಲ್ಲಿ ಎಂಜಾಯ್ ಮಾಡುತ್ತಿರುವಂತೆ ಕಾಣಿಸುತ್ತಿದೆ. ಅನುಶ್ರೀ ಬರ್ತ್ ಡೇ ಗೆ ರೂಮ್ ತುಂಬಾ ಬಲೂನ್ ಗಳಿಂದ ಡೆಕೊರೇಶನ್ ಮಾಡಿ, ರೆಡ್ ವೆಲ್ವೆಟ್ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
ಇನ್ನು ಅನುಶ್ರೀ ಹುಟ್ಟು ಹಬ್ಬಕ್ಕೆ ಸೆಲೆಬ್ರಿಟಿಗಳು, ಅಭಿಮಾನಿಗಳು ವಿಶ್ ಮಾಡಿದ್ದು, ನಟಿ ಅದಿತಿ ಪ್ರಭುದೇವ (Adithi Prabhudeva) ಹುಟ್ಟು ಹಬ್ಬದ ಶುಭಾಶಯಗಳು ಅನು. ನಿಮ್ಮ ನಿಷ್ಕಲ್ಮಶ ನಗು ಸದಾ ಜೊತೆಯಾಗಿರಲಿ. ನಿನ್ನೆಲ್ಲಾ ಪ್ರೀತಿಯ ಆಸೆಗಳು, ಹಾರೈಕೆಗಳು ಈಡೇರಲಿ..ಮತ್ತೊಮ್ಮೆ ಹುಟ್ಟುಹಬ್ಬದ ಶುಭಾಶಯಗಳು ಗೆಳತಿ ಎಂದು ವಿಶ್ ಮಾಡಿದ್ದಾರೆ.
ಇನ್ನು ಫೋಟೋ ನೋಡಿ, ಅಭಿಮಾನಿಗಳು ಯಾರು ಇಷ್ಟೊಂದು ಡೆಕೋರೇಶನ್ ಮಾಡಿದ್ದು, ಎಷ್ಟನೇ ವರ್ಷದ ಹುಟ್ಟು ಹಬ್ಬ ಅದನ್ನೂ ಹೇಳಿ, ಮದುವೆ ಆಗೋದಿಲ್ವಾ ಹೀಗೆ ಇದ್ದು ಬಿಡ್ತೀರಾ ಎಂದೆಲ್ಲಾ ಪ್ರಶ್ನೆಗಳನ್ನು ಕೇಳಿದ್ದಾರೆ.
ಈ ವರ್ಷ ಅನುಶ್ರೀ ಬರ್ತ್ ಡೇ ಸಿಕ್ಕಾಪಟ್ಟೆ ಸ್ಪೆಷಲ್ ಆಗಿದ್ದು, ಅಭಿಮಾನಿಯೊಬ್ಬರು ನ್ಯೂಯಾರ್ಕ್ ಸ್ಕ್ವೇರ್ ನಲ್ಲಿ (NewYork Square) ಅಪ್ಪು ಜೊತೆ ಅನುಶ್ರೀ ಇರೋ ಫೋಟೋ ಹಾಕಿ ವಿಶ್ ಮಾಡಿದ್ದಾರೆ. ಇನ್ನು ನಿನ್ನೆ ಶಿವರಾಜ್ ಕುಮಾರ್- ಗೀತಾ ಅವರು ಸಹ ಅನುಶ್ರೀಗೆ ಸರ್ ಪ್ರೈಸ್ ಬರ್ತ್ ಡೇ ಪಾರ್ಟಿ ನೀಡಿದ್ದರು.