ಹಸಿರು ಸೀರೆಯಲ್ಲಿ ಛಾಯಾ ಸಿಂಗ್… ಯಾರೇ ನೀನು ಸುಂದರ ಚೆಲುವೆ ಎಂದು ಹಾಡು ಹಾಡಿದ ಅಭಿಮಾನಿ

Published : Feb 27, 2025, 12:28 PM ISTUpdated : Feb 27, 2025, 12:46 PM IST

ಅಮೃತಧಾರೆ ನಟಿ ಛಾಯಾ ಸಿಂಗ್ ಸುಂದರವಾದ ಹಸಿರು ಬಣ್ಣದ ಸೀರೆಯುಟ್ಟು ಪೋಸ್ ಕೊಟ್ಟಿದ್ದು, ನಟಿಯ ಸೀರೆ ಲುಕ್ ನ್ನು ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ಈ ಲುಕ್ ನಿಮಗೂ ಇಷ್ಟ ಆಯ್ತಾ?   

PREV
16
ಹಸಿರು ಸೀರೆಯಲ್ಲಿ ಛಾಯಾ ಸಿಂಗ್… ಯಾರೇ ನೀನು ಸುಂದರ ಚೆಲುವೆ ಎಂದು ಹಾಡು ಹಾಡಿದ ಅಭಿಮಾನಿ

ಅಮೃತಧಾರೆಯಲ್ಲಿ (Amruthadare Serial) ನಾಯಕಿ ಭೂಮಿಕಾ ಆಗಿ ನಟಿಸುತ್ತಿರುವ ನಟಿ ಛಾಯಾ ಸಿಂಗ್ ಧಾರಾವಾಹಿಯಲ್ಲಿ ಯಾವಾಗಲೂ ಸೀರೆಯಲ್ಲಿಯೇ ಕಾಣಿಸಿಕೊಳ್ಳುತ್ತಿರುತ್ತಾರೆ. ಅವರ ಸೀರೆಯ ಆಯ್ಕೆ, ಅವರ ಸ್ಟೈಲ್ ಎಲ್ಲವೂ ಜನರಿಗೆ ತುಂಬಾನೆ ಇಷ್ಟ. ಇದೀಗ ಮತ್ತೆ ಸೀರೆಯುಟ್ಟು ಫೋಟೊ ಶೂಟ್ ಮಾಡಿಸಿಕೊಂಡಿದ್ದಾರೆ. 
 

26

ಹೌದು ನಟಿ ಛಾಯಾ ಸಿಂಗ್ (Chaya Singh) ಕೆಂಪು ಬಾರ್ಡರ್ ಇರುವಂತಹ ಹಸಿರು ಬಣ್ಣದ ಸಿಲ್ಕ್ ಸೀರೆಯುಟ್ಟು, ಅದಕ್ಕೆ ಮ್ಯಾಚ್ ಆಗುವಂತೆ ಕೆಂಪು ಬ್ಲೌಸ್ ಧರಿಸಿದ್ದಾರೆ. ಛಾಯಾ ಸಿಂಗ್ ಈ ಲುಕ್ ಇಷ್ಟಪಟ್ಟಿರುವ ಅಭಿಮಾನಿಗಳು ಬೇರೆ ಬೇರೆ ರೀತಿಯಲ್ಲಿ ಕಾಮೆಂಟ್ ಮಾಡುವ ಮೂಲಕ ನಟಿಯ ಅಂದವನ್ನು ಹೊಗಳಿದ್ದಾರೆ. 
 

36

ಒಬ್ಬರು ಈ ಸೀರೆಯಲ್ಲಿ ನೀವು ತುಂಬಾನೆ ಚೆನ್ನಾಗಿ ಕಾಣಿಸುತ್ತೀರಿ ಎಂದರೆ, ಮತ್ತೊಬ್ಬರು ಯಾರೇ ನೀನು ಸುಂದರ ಚಲುವೆ ಒಬ್ಬಳೇ ನಿಂತಿರುವೆ ಹಸಿರು ಸೀರೆ ಮಲ್ಲಿಗೆ ಮುಡಿದು ಯಾರಿಗೆ ಕಾದಿರುವೆ!? ಎಂದು ಕೇಳಿದ್ದಾರೆ. ಚಿನ್ನ, ನಿಮ್ಮಿಂದ ಆ ಸೀರೆಗೆ ಕಳೆ ಬಂದಿದೆ. ನಿಜಕ್ಕೂ ನೀವು ಸೌಂದರ್ಯದ ಗಣಿ, ನನ್ನ ಮುದ್ದು ಅರಗಿಣಿ ಎಂದು ಹಾಡಿ ಹೊಗಳಿದ್ದಾರೆ. 
 

46

ಅಷ್ಟೇ ಅಲ್ಲ ಮತ್ತೊಬ್ಬ ಅಭಿಮಾನಿ ಈ ಸೀರೆಯಲ್ಲಿ ನಿಮ್ಮ ಅಂದವನ್ನು ನೋಡಿ ನನ್ನ ಉಸಿರು ನಿಂತೋಗಿದೆ, ಅಷ್ಟೊಂದು ಚೆನ್ನಾಗಿ ಕಾಣಿಸುತ್ತಿದ್ದೀರಿ ಎಂದಿದ್ದಾರೆ. ಅಲ್ಲಾ ಅದೇಗೆ ನೀವು ಯಾವ ಸೀರೆ ಹಾಕ್ಕೊಂಡ್ರು ಅಷ್ಟು ಬ್ಯೂಟಿಫುಲ್ ಆಗಿ ಕಾಣ್ತೀರ ಅಂತಾನೂ ಕೇಳಿದ್ದಾರೆ. 
 

56

ಇನ್ನೊಬ್ಬರು ದೇವತೆ ಅಂದ್ರೆ, ಮತ್ತೊಬ್ಬರು ಲಕ್ಷ್ಮೀ ದೇವಿ ಎಂದಿದ್ದಾರೆ. ಸಿರೆಯುಟ್ಟರೇ ಅಪ್ಸರೇಯ ನಾಚಿಸುವರು...ದೆವತೆ ಭೂಮಿಗೆ ಬಂದು ನಿಂತಿವರು ಅದು ನೀವೆ ಮೇಡಂ ಅಂತಾನೂ ಹೇಳಿದ್ದಾರೆ. ಅಷ್ಟೇ ಆಲ್ಲ ಛಾಯಾ ಸಿಂಗ್ ಗಾಗಿ ಕವಿತೆಗಳನ್ನು ಸಹ ಗೀಚಿದ್ದಾರೆ. ಜೊತೆಗೆ ಅತ್ತಿಗೆ ಸೂಪರೋ ಸೂಪರ್ ಎಂದು ಹಾಡಿ ಬೇರೇ ಹೊಗಳಿದ್ದಾರೆ. 
 

66

ಅಮೃತಧಾರೆ ಧಾರಾವಾಹಿಯಲ್ಲಿ ಇವರು ಲುಕ್ ಎಲ್ಲರಿಗೂ ಇಷ್ಟ. ಸಿಂಪಲ್ ಸೀರೆಯುಟ್ಟರೂ ಅದಕ್ಕೆ ಮ್ಯಾಚ್ ಆಗುವ ಇಯರಿಂಗ್ಸ್, ಸೀರೆಗೆ ಪರ್ಫೆಕ್ಟ್ ಆಗಿ ಮ್ಯಾಚ್ ಆಗುವ ಬಳೆ ಧರಿಸಿ, ಜಡೆ ಹಾಕಿದರೆ, ವಾವ್ ಎನಿಸುವಷ್ಟು  ಸುಂದರಿ. ನಿಮಗೆ ಭೂಮಿಕಾ ಅಥವಾ ಛಾಯಾ ಸಿಂಗ್ ಯಾವ ಲುಕ್ ಇಷ್ಟ? 
 

Read more Photos on
click me!

Recommended Stories