ನಾವಿಬ್ರೂ ಗಂಡ ಹೆಂಡ್ತಿ, ರೊಮ್ಯಾಂಟಿಕ್‌ ಸೀನ್‌ ಮಾಡ್ಬೇಕು, ಹಾಗ್‌ ಮಾತ್ರ ಕರಿಬೇಡ; ಛಾಯಾ ಸಿಂಗ್‌ಗೆ ರಾಜೇಶ್‌ ಮನವಿ

Published : May 03, 2026, 08:15 AM IST

Jodi No 1 Show: ಜೋಡಿ ನಂ 1 ರಿಯಾಲಿಟಿ ಶೋನಲ್ಲಿ ಅಮೃತಧಾರೆ ಧಾರಾವಾಹಿ ನಟ ರಾಜೇಶ್‌ ನಟರಂಗ, ಛಾಯಾ ಸಿಂಗ್‌ ಕೂಡ ಜಡ್ಜ್‌ ಆಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಅಮೃತಧಾರೆ ಧಾರಾವಾಹಿ ಶೂಟಿಂಗ್‌ ತೆರೆ ಹಿಂದಿನ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

PREV
16
ಗೌತಮ್‌, ಭೂಮಿ ಅದಲು ಬದಲು

ನಿರೂಪಕಿ ಶ್ವೇತಾ ಚೆಂಗಪ್ಪ ಅವರು ಅಮೃತಧಾರೆ ಧಾರಾವಾಹಿಯಲ್ಲಿ ನಿಮ್ಮ ಪಾತ್ರಗಳನ್ನು ಅದಲು ಬದಲು ಮಾಡಿ ತೋರಿಸಿ ಎಂದು ರಾಜೇಶ್‌, ಛಾಯಾಗೆ ಹೇಳಿದ್ದರು. ಆಗ ಒಂದಿಷ್ಟು ವಿಷಯಗಳು ರಿವೀಲ್‌ ಆಗಿವೆ.

26
ಭೂಮಿಕಾ ಹೆಸರು ನೆನಪೇ ಇರೋದಿಲ್ಲ

ಎಲ್ಲರ ಪಾತ್ರದ ಹೆಸರುಗಳನ್ನು ಸರಿಯಾಗಿ ಹೇಳುವ ರಾಜೇಶ್‌ ನಟರಂಗ ಅವರು, ಭೂಮಿಕಾ ಹೆಸರನ್ನು ಮಾತ್ರ ಸರಿಯಾಗಿ ಹೇಳೋದಿಲ್ವಂತೆ. ಆಗ ದೀಪಿಕಾ ಎಂದು ಹೇಳುತ್ತಾರೆ ಎಂದು ಛಾಯಾ ಸಿಂಗ್‌ ಅವರು ಹೇಳಿದ್ದಾರೆ. ದೀಪಿಕಾ ಯಾರು ಎಂದು ಕುರಿ ಪ್ರತಾಪ್‌ ಅವರು ಕಂಡು ಹಿಡಿಯಲಿದ್ದಾರಂತೆ.

36
ತೆರೆ ಹಿಂದೆ ರಾಜೇಶ್‌ರನ್ನು ಅಣ್ಣಾ ಎನ್ನುವ ಛಾಯಾ ಸಿಂಗ್

ಇನ್ನು ರಾಜೇಶ್‌ ನಟರಂಗ ಕೂಡ ಈ ಬಗ್ಗೆ ಮಾತನಾಡಿದ್ದು, “ಈ ಸೀರಿಯಲ್‌ನ ಆರಂಭದ ದಿನಗಳಲ್ಲಿ ಛಾಯಾ ನನಗೆ ರಾಜೇಶ್‌ ಅಣ್ಣ ಎಂದು ಕರೆಯುತ್ತಿದ್ದಳು” ಎಂದು ಹೇಳುತ್ತಿದ್ದಾರೆ.

46
ಹಾಗೆಲ್ಲ ಕರೆಯಬೇಡ

ಆಗ ರಾಜೇಶ್‌ ನಟರಂಗ ಅವರು ಛಾಯಾಗೆ, “ನಾನು ನೀನು ಗಂಡ ಹೆಂಡ್ತಿ ಪಾತ್ರ ಮಾಡಬೇಕು, ಸ್ವಲ್ಪ ರೊಮ್ಯಾಂಟಿಕ್‌ ಸೀನ್‌ ಇರುತ್ತೆ, ನೀನು ನನಗೆ ಅಣ್ಣಾ ಅಂತ ಕರೆಯಬೇಡ, ಹೋಗೋ, ಬಾರೋ, ರಾಜೇಶ್‌ ಅಂದರೂ ನನಗೆ ಪರವಾಗಿಲ್ಲ ಎಂದು ಹೇಳಿದ್ದೆ” ಎಂದು ಹೇಳಿದ್ದರಂತೆ.

56
ಈ ಹಿಂದೆಯೂ ನಟಿಸಿದ್ರು

ಮೂರು ನಾಲ್ಕು ವಾರಗಳ ಕಾಲ ಛಾಯಾ ಮಾತ್ರ ರಾಜೇಶ್‌ಗೆ ಅಣ್ಣಾ ಎಂದೇ ಕರೆಯುತ್ತಿದ್ದರಂತೆ. ಅಂದಹಾಗೆ ಇವರಿಬ್ಬರು ಈ ಹಿಂದೆ ಒಂದು ಪ್ರಾಜೆಕ್ಟ್‌ನಲ್ಲಿ ಒಟ್ಟಿಗೆ ಭಾಗವಹಿಸಿದ್ದರು. ತುಂತುರು ಎನ್ನುವ ಧಾರಾವಾಹಿಯಲ್ಲಿ ಅಣ್ಣ-ತಂಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ಛಾಯಾ ಅವರು ರಾಜೇಶ್‌ಗೆ ಅಣ್ಣ ಎಂದು ಕರೆದಿದ್ದರು.

66
ಸಾವಿರ ಎಪಿಸೋಡ್‌ನತ್ತ ದಾಪುಗಾಲು

ಅಮೃತಧಾರೆ ಧಾರಾವಾಹಿ ಈಗಾಗಲೇ ಸಾವಿರ ಎಪಿಸೋಡ್‌ನತ್ತ ದಾಪುಗಾಲು ಹಾಕಿದೆ. ಸೀರಿಯಲ್‌ ನೋಡಿದ್ರೆ ಮುಗಿಯುವ ಲಕ್ಷಣ ಕಾಣ್ತಿದೆ ಎಂದು ವೀಕ್ಷಕರು ಸೋಶಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಹಾಕುತ್ತಿದ್ದಾರೆ. ಈ ಬಗ್ಗೆ ವಾಹಿನಿಯಾಗಲೀ, ಧಾರಾವಾಹಿ ತಂಡದವರಾಗಲೀ ಉತ್ತರ ಕೊಟ್ಟಿಲ್ಲ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories