ಚಂದನ ಅನಂತಕೃಷ್ಣ ಭರತನಾಟ್ಯ ರಂಗಪ್ರವೇಶದ ಸುಂದರ ಫೋಟೋಗಳು

First Published | Feb 17, 2024, 5:47 PM IST

ಕಿರುತೆರೆ ನಟಿ, ಬಿಗ್ ಬಾಸ್ ಸ್ಪರ್ಧಿ ಚಂದನ ಅನಂತಕೃಷ್ಣ ಭರತನಾಟ್ಯ ರಂಗಪ್ರವೇಶ ಮಾಡಿದ್ದು, ಅದರ ಸುಂದರವಾದ ಫೋಟೋಗಳನ್ನು ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಕಿರುತೆರೆಯಲ್ಲಿ ಹಲವು ಸೀರಿಯಲ್ ಗಳಲ್ಲಿ ನಟಿಸಿ, ಬಿಗ್ ಬಾಸ್ ಕನ್ನಡ ಸೀಸನ್ 7 ರ ಮೂಲಕ ತಮ್ಮ ಮುಗ್ಧತೆಯಿಂದಲೇ ಜನರಿಗೆ ಮತ್ತಷ್ಟು ಹತ್ತಿರವಾದ ನಟಿ ಚಂದನ ಅನಂತಕೃಷ್ಣ (Chandana Ananthakrishna). 

ಚಂದನ ತಮ್ಮ ನಟನಾ ಜರ್ನಿ ಆರಂಭಿಸಿದ್ದು ರಾಜಾ ರಾಣಿ ಸೀರಿಯಲ್ (serial) ಮೂಲಕ. ಈ ಸೀರಿಯಲ್ ನಲ್ಲಿ ಎಡವಟ್ಟು ರಾಣಿ ಚುಕ್ಕಿಯಾಗಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದರು ಈ ನಟಿ, ಬಳಿಕ ಹೂಮಳೆ ಸೀರಿಯಲ್ ನಲ್ಲಿ ನಟಿಸಿದ್ದರು. 

Tap to resize

ಬಳಿಕ ಬಿಗ್ ಬಾಸ್ ಸೀಸನ್ 7 (Bigg Boss Season 7)ನಲ್ಲಿ ಸ್ಪರ್ಧಿಯಾಗಿ ಗುರುತಿಸಿಕೊಂಡು, ಅಲ್ಲಿಂದ ಹೊರ ಬಂದ ಮೇಲೆ ಹಾಡು ಕರ್ನಾಟಕ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದರು. ಇತ್ತೀಚೆಗೆ ಭರ್ಜರಿ ಬ್ಯಾಚುಲರ್ಸ್ ನಲ್ಲೀ ಸಹ ಭಾಗವಹಿಸಿದ್ದರು. 

ಭರ್ಜರಿ ಬ್ಯಾಚುಲರ್ ಅರ್ಧದಲ್ಲೇ ಬಿಟ್ಟ ಬಳಿಕ ನಟನೆಯಿಂದ ದೂರವೇ ಉಳಿದಿದ್ದ ಚಂದನಾ, ತಮ್ಮ ಕನಸಾಗಿದ್ದ ಭರತನಾಟ್ಯದಲ್ಲಿ ಹೈಯರ್ ಸ್ಟಡೀಸ್ ಮಾಡೋದನ್ನು ಮುಂದುವರೆಸಿದ್ದರು. ಅದಕ್ಕಾಗಿ ಕಿರುತೆರೆ, ಹಿರಿತೆರೆಯಿಂದ ದೂರ ಉಳಿದಿದ್ದರು. 

ಚಂದನ ಅನಂತಕೃಷ್ಣ ಬಾಲ್ಯದಿಂದಲೇ ಕ್ಲಾಸಿಕಲ್ ಡ್ಯಾನ್ಸರ್. ಭರತನಾಟ್ಯದಲ್ಲಿ ತರಬೇತಿ ಪಡೆದಿರುವ ಇವರು ಗಾಯಕಿ ಕೂಡ ಹೌದು. ನಟಿಯಾಗೋ ಮುನ್ನವೇ ಭರತನಾಟ್ಯ ಕಲಾವಿದೆಯಾಗಿದ್ದ ಚಂದನ ಪರ್ಫಾರ್ಮಿಂಗ್ ಆರ್ಟ್ (performing art) ನಲ್ಲಿ ಸ್ನಾತ್ತಕೋತರ ಪದವಿ ಮಾಡುತ್ತಿದ್ದರು. 

ಇದೀಗ ಕೆಲದಿನಗಳ ಹಿಂದೆ ಚಂದನ ತಮ್ಮ ಬಹು ದಿನಗಳ ಬಹು ದೊಡ್ಡ ಕನಸಾಗಿರುವ ಭರತನಾಟ್ಯ ರಂಗಪ್ರವೇಶ (Bharatanatya Rangapravesha) ಮಾಡಿದ್ದು, ಆ ದಿನದ ತಮ್ಮ ನೃತ್ಯದ ಸುಂದರ ಫೋಟೋಗಳನ್ನು ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಚಂದನ ಅವರು ಸೌಂದರ್ಯ ಶ್ರೀವತ್ಸ ಅವರಿಂದ ಭರತನಾಟ್ಯ ಕಲಿಯುತ್ತಿದ್ದು, ಅವರ ಆಶೀರ್ವಾದದಿಂದ ತಾನು ರಂಗಪ್ರವೇಶ ಮಾಡುತ್ತಿರುವುದಾಗಿ ಹಾಗೂ ಇದಕ್ಕಾಗಿ ನನ್ನ ಹೃದಯ, ಆತ್ಮವನ್ನೇ ಮುಡಿಪಾಗಿಟ್ಟಿದ್ದೇನೆ, ಈ ದಿನಕ್ಕಾಗಿ ನಾನು ಜೀವಮಾನ ಪೂರ್ತಿ ಕಾದಿದ್ದೇನೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. 

ತಮ್ಮ ರಂಗಪ್ರವೇಶದಂದು ಚಂದನ ಶ್ರೀಕೃಷ್ಣ ದೇವರಾಯ ಸಿನಿಮಾದ ಶ್ರೀಚಾಮುಂಡೇಶ್ವರಿ ಮತ್ತು ಜಗದ್ಧೋದ್ಧಾರನ ಆಡಿಸಿದಳು ಯಶೋದೆ ಹಾಡಿಗೆ ಅದ್ಭುತವಾಗಿ ನೃತ್ಯ ಮಾಡಿದ್ದು, ಆ ಸುಂದರ ಕ್ಷಣಗಳ ವಿಡಿಯೋ ಮತ್ತು ಫೋಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. 

Latest Videos

click me!