'ಮಾಂಗಲ್ಯಂ ತಂತುನಾನೇನ' ಖ್ಯಾತಿಯ ನಟ ಆರ್.ಕೆ.ಚಂದನ್, 'ಶ್ರೀ ಗೌರಿ' ಧಾರಾವಾಹಿ ಮತ್ತು ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ತಮ್ಮ ಕಾಲೇಜು ದಿನಗಳ ತರ್ಲೆಗಳನ್ನು ಹಂಚಿಕೊಂಡಿದ್ದು, ಶಿಕ್ಷಕರಿಗೆ ತೊಂದರೆ ಕೊಡುತ್ತಿದ್ದ ಬಗ್ಗೆ ಮಾತನಾಡಿದ್ದಾರೆ.
ಮಾಂಗಲ್ಯಂ ತಂತುನಾನೇನ ಸೀರಿಯಲ್ ಮೂಲಕ ಫೇಮಸ್ ಆದವರು ನಟ ಆರ್.ಕೆ.ಚಂದನ್. ಈ ಸೀರಿಯಲ್ ಜೋಡಿಯಾದ ತೇಜಸ್ವಿ -ಶ್ರಾವಣಿ ಭಾರಿ ಜನಪ್ರಿಯತೆ ಪಡೆದಿದ್ದರು. ಇಬ್ಬರ ಮುದ್ದಾದ ಜೋಡಿಗೆ ಜನ ಫಿದಾ ಆಗಿದ್ದರು. ಆದರೆ ಕೊರೋನಾ ಕಾರಣದಿಂದ ಸೀರಿಯಲ್ ಶಾಶ್ವತವಾಗಿ ಪ್ರಸಾರ ನಿಲ್ಲಿಸಿದ್ದು, ಜನರಿಗೆ ಭಾರಿ ಬೇಸರ ತಂದಿತ್ತು.
26
ಶ್ರೀಗೌರಿಗೆ ಎಂಟ್ರಿ
ಇದಾದ ಹಲವು ವರ್ಷಗಳ ಬಳಿಕ ಶ್ರೀ ಗೌರಿ ಸೀರಿಯಲ್ ಮೂಲಕ ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟರು ನಟ ಚಂದನ್. ಮತ್ತೆ ಕಣ್ಮರೆಯಾಗಿದ್ದ ನಟ, ಬಳಿಕ ವಿರಾಟ್ ಆಗಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಶ್ರೀಗೌರಿ (Shree Gouri) ಸೀರಿಯಲ್ ಗೆ ಎಂಟ್ರಿ ಕೊಟ್ಟರು. ಗೌರಿ ಸೀರಿಯಲ್ ನಲ್ಲಿ ಬ್ಯುಸಿನೆಸ್ಮೆನ್ ಆಗಿ ಚಂದನ್ ನಟಿಸಿದ್ದರು.
36
ಸಿನಿಮಾಗಳಲ್ಲಿ ನಟನೆ
ಸೀರಿಯಲ್ಗಳಿಂದ ನಡು ನಡುವೆ ಕಾಣೆಯಾಗುತ್ತಿದ್ದ ನಟ, ಎಂಟ್ರಿ ಕೊಟ್ಟಿದ್ದು ಬೆಳ್ಳಿ ಪರದೆಗೆ. ಬಿಂಗೋ, ಕಟ್ಟಾರ, ಮೊದಲಾದ ಸಿನಿಮಾಗಳಲ್ಲಿ ಚಂದನ್ ಬಣ್ಣ ಹಚ್ಚಿದ್ದಾರೆ.
ಇಂತಿಪ್ಪ ಚಂದನ್ ಅವರು, ಇದೀಗ ಬಾಸ್ಟಿವಿ ನೀಡಿರುವ ಸಂದರ್ಶನದಲ್ಲಿ ತಾವು ಕಾಲೇಜು ದಿನಗಳಲ್ಲಿ ಎಷ್ಟು ತರ್ಲೆಯಾಗಿದ್ವಿ ಎನ್ನುವುದನ್ನು ವಿವರಿಸಿದ್ದಾರೆ. ಕಾಲೇಜು ದಿನಗಳಲ್ಲಿ ತುಂಬಾ ತರ್ಲೆ ಇದ್ದೆ. ಆದರೆ ಸ್ಟುಡೆಂಟ್ಸ್ಗೆ ಏನೂ ಮಾಡ್ತಿರಲಿಲ್ಲ. ಆದ್ರೆ ಮಾಡುತ್ತಿದ್ದುದೆಲ್ಲಾ ಟೀಚರ್ಸ್ಗೆ ಎಂದಿದ್ದಾರೆ.
56
ವಾಷ್ರೂಮ್ಗ ಹೋದಾಗ
ತುಂಬಾ ಬ್ರಿಲಿಯೆಂಟ್ ಸ್ಟುಡೆಂಟ್ ಆಗಿದ್ದೆ. ಅದಕ್ಕಾಗಿ ಹೋಮ್ವರ್ಕ್ಗೆಲ್ಲಾ ಬೈಸಿಕೊಳ್ತಿರಲಿಲ್ಲ. ಆದ್ರೆ ಟೀಚರ್ಸ್ ವಾಷ್ರೂಮ್ಗ ಹೋದಾಗ ಹೊರಗಿನಿಂದ ಬಾಗಿಲು ಹಾಕೋದು ಎಂದ್ರೆ ನನಗೆ ಸಿಕ್ಕಾಪಟ್ಟೆ ಖುಷಿ ಆಗಿತ್ತು. ಹೀಗೆ ಮಾಡ್ತಿದ್ದರಿಂದ ಪ್ರತಿದಿನವೂ ಪನಿಷ್ಮೆಂಟ್ ಸಿಕ್ತಿತ್ತು ಎಂದಿದ್ದಾರೆ.
66
ಏನೋ ಕಳೆದುಕೊಂಡಂತೆ ಆಗ್ತಿತ್ತು
ಈ ಪನಿಷ್ಮೆಂಟ್ಗೆ ಎಷ್ಟು ಒಗ್ಗಿಹೋಗಿದ್ದೆ ಎಂದ್ರೆ, ಒಂದು ದಿನ ಶಿಕ್ಷೆ ಇಲ್ಲಾ ಅಂದ್ರೆ ಏನನ್ನೋ ಕಳೆದುಕೊಂಡಂತೆ ಭಾಸವಾಗ್ತಿತ್ತು ಎಂದು ತಮ್ಮ ತರ್ಲೆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.