ಕಲರ್ಸ್ ಕನ್ನಡದ ಕಾಮಿಡಿ ಕುಕ್ಕಿಂಗ್ ರಿಯಾಲಿಟಿ ಶೋ ಕ್ವಾಟ್ಲೆ ಕಿಚನ್ ಗೆ ಈ ವಾರ ಸ್ಪರ್ಧಿಗಳ ಖುಷಿ ಡಬಲ್ ಮಾಡೋದಕ್ಕೆ ಸ್ಪೆಷಲ್ ಗೆಸ್ಟ್ ಗಳು ಆಗಮಿಸಿದ್ದು, ದಿಲ್ -ಖುಶ್ ಜೋಡಿಯ ಪ್ರೀತಿ ಗಮನ ಸೆಳೆಯುತ್ತಿದೆ.
ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದು ಕ್ವಾಟ್ಲೆ ಕಿಚನ್. ಈ ಕಾರ್ಯಕ್ರಮದಲ್ಲಿ ಕಾಮಿಡಿ, ಎಂಟರ್ ಟೇನ್ ಮೆಂಟ್ ಜೊತೆಗೆ ಸ್ಪರ್ಧಿಗಳ ಕುಕ್ಕಿಂಗ್ ಸ್ಕಿಲ್ ಎಲ್ಲವೂ ಸೇರಿ ಜಬರ್ ದಸ್ತ್ ಮನರಂಜನೆ ನೀಡುತ್ತದೆ.
28
ಈ ವಾರ ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ಹುಮ್ಮಸ್ಸು ಹೆಚ್ಚಿಸಲು, ಅವರ ಸ್ನೇಹಿತರನ್ನು ಆಹ್ವಾನಿಸಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ದಿಲ್ ಖುಶ್ ಜೋಡಿಯ ವಿಡಿಯೋ ಸಖತ್ ಸೌಂಡ್ ಮಾಡುತ್ತಿದೆ. ಇಬ್ಬರನ್ನು ಮತ್ತೆ ತೆರೆ ಮೇಲೆ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.
38
ಕ್ವಾಟ್ಲೆ ಕಿಚನಲ್ಲಿ ದಿಲೀಪ್ ಶೆಟ್ಟಿ ಕಂಟೆಸ್ಟಂಟ್ ಆಗಿದ್ದಾರೆ. ಇವರ ಬೆಸ್ಟ್ ಫ್ರೆಂಡ್ ಅಂದ್ರೆ ಅದು ಖುಷಿ ಶಿವು. ಇಬ್ಬರ ಜೋಡಿ ಕಿರುತೆರೆಯ ಮೋಸ್ಟ್ ಫೇವರಿಟ್ ಆನ್ ಸ್ಕ್ರೀನ್ ಮತ್ತು ಆಫ್ ಸ್ಕ್ರೀನ್ ಜೋಡಿಗಳಲ್ಲಿ ಒಬ್ಬರು. ಇಬ್ಬರು ಲವ್ ಮಾಡುತ್ತಿದ್ದಾರೆ ಎನ್ನುವ ಗುಸು ಗುಸು ಕೇಳಿ ಬಂದಿದ್ದರೂ ಸಹ ಈ ಬಗ್ಗೆ ಇಬ್ಬರೂ ಎಲ್ಲೂ ಬಹಿರಂಗಪಡಿಸಿಲ್ಲ.
ನೀನಾದೆನಾ ಧಾರಾವಾಹಿ ಭಾಗ 1 ಮತ್ತು 2ರ ವಿಕ್ರಮ್ ವೇದಾ ಪಾತ್ರದ ಮೂಲಕ ಪರಿಚಿತರಾದ ಈ ಜೋಡಿ, ಮತ್ತೆ ತಮ್ಮ ಕೆಮೆಸ್ಟ್ರಿ, ಅಭಿನಯ, ರೀಲ್ಸ್ ಮೂಲಕ ಜನಮನ ಗೆದ್ದಿತು. ಜನರೇ ದಿಲೀಪ್ ಮತ್ತು ಖುಷಿಗೆ ಇಟ್ಟಂತಹ ಹೆಸರು ದಿಲ್ ಖುಷ್. ಈ ಹೆಸರಲ್ಲಿ ಈ ಜೋಡಿ ಯೂಟ್ಯೂಬ್ ಚಾನೆಲ್ ಕೂಡ ಆರಂಭಿಸಿತ್ತು.
58
ಬಳಿಕ ಈ ಜೋಡಿ ಹಲವು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡರು, ಜೊತೆಯಾಗಿ ಟ್ರಾವೆಲ್ ಕೂಡ ಮಾಡುವ ಈ ಜೋಡಿ, ರಿಯಲ್ ಆಗಿಯೂ ಜೋಡಿಯಾದರೆ ಚೆಂದ ಎನ್ನುವವರೇ ಹೆಚ್ಚು. ದಿಲೀಪ್ ಗೃಹಪ್ರವೇಶದಲ್ಲೂ ಮಿಂಚಿದ್ದು ಖುಷಿ. ಇದೀಗ ಈ ಜೋಡಿಯನ್ನು ಕ್ವಾಟ್ಲೆ ಕಿಚನಲ್ಲಿ ನೋಡಿ ಜನ ಖುಷಿಯಾಗಿದ್ದಾರೆ.
68
ಖುಷಿ ಕಾಲೆಳೆಯುತ್ತಾ ನಿರೂಪಕಿ ಅನುಪಮಾ ಗೌಡ, ಹಲವು ಪ್ರಶ್ನೆಗಳನ್ನು ಕೇಳಿದ್ದು, ಅದಕ್ಕೆ ತಮಾಷೆಯಾಗಿಯೇ ಖುಷಿ ಉತ್ತರಿಸಿದ್ದಾರೆ. ಅನುಮಪಾ ನಿಮ್ಮನ್ನು ಮದುವೆಯಾಗುವ ಹುಡುಗ ಎಷ್ಟು ಹೈಟ್ ಇರಬೇಕು ಎಂದು ಕೇಳಿದ್ರೆ, ಖುಷಿ ಭುಜದಿಂದ ಮೇಲಕ್ಕೆ ಇರಬೇಕು, ಎಷ್ಟು ಹೈಟ್ ಆದ್ರೂ ಓಕೆ ಎಂದಿದ್ದಾರೆ.
78
ಅನುಪಮಾ ಮತ್ತೆ ಸದ್ಯ ದಿಲೀಪ್ ಗೆ ಯಾರಾದರೂ ಗರ್ಲ್ ಫ್ರೆಂಡ್ ಇದ್ದಾರಾ? ಎಂದಿದಕ್ಕೆ ಖುಷಿ, ಹೌದು ಇದ್ದಾರೆ, ಯಾರು ಅಂತ ನಂಗೆ ಗೊತ್ತಿಲ್ಲ ಎಂದಿದ್ದಾರೆ. ಇನ್ನು ನೀವು ಕ್ಲೋಸ್ ಅಂದ್ರೆ ಎಷ್ಟು ಕ್ಲೋಸ್ ಎಂದು ಸೋನಿ ಕೇಳಿದ ಪ್ರಶ್ನೆಗೆ ಖುಷಿ ತುಂಬಾ ಕ್ಲೋಸ್ ಎಂದಿದ್ದಾರೆ.
88
ಈ ಮುದ್ದಾದ ಜೋಡಿಯನ್ನು ನೋಡಿ ಸ್ಪರ್ಧಿಗಳೆಲ್ಲಾ ಖುಷಿಯಿಂದ ಚಪ್ಪಾಳೆ ತಟ್ಟಿ ಡ್ಯಾನ್ಸ್ ಮಾಡಲು ಪ್ರೋತ್ಸಾಹಿಸಿದರೆ, ಸೋನಿ ಇವರಿಬ್ಬರನ್ನು ನೋಡಿದ್ರೆ ನನಗೆ ಗಂಡ -ಹೆಂಡತಿ ಫೀಲ್ ಬರುತ್ತೆ ಎಂದಿದ್ದಾರೆ. ಇದನ್ನು ಕೇಳಿ ಖುಷಿ ಮತ್ತು ದಿಲೀಪ್ ಇಬ್ಬರೂ ಕೂಡ ಮುಖದಲ್ಲಿ ನಾಚಿಕೆಯನ್ನು ಹೊರ ಹಾಕುತ್ತಾ ನಕ್ಕಿದ್ದಾರೆ.