ನಟ ಅನಿರುದ್ದ್ ಅಭಿಮಾನಿಗಳಿಂದ ಜೀ ಕನ್ನಡ ವಾಹಿನಿ ಮುಂದೆ ಪ್ರತಿಭಟನೆ!
First Published | Sep 5, 2022, 9:49 PM ISTನಟ ಅನಿರುದ್ಧ್ ಕಿರುತೆರೆಯಿಂದ ಕಿಕ್ ಔಟ್ ಆಗಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿ ತಂಡದ ಜೊತೆ ಕಿರಿಕ್ ಮಾಡಿಕೊಂಡು ಧಾರಾವಾಹಿಯಿಂದ ಹೊರಗಿಡಲಾಗಿದೆ. ಧಾರಾವಾಹಿಯ ನಿರ್ದೇಶಕ ಅರೂರು ಜಗದೀಶ್ ಜೊತೆ ಕಿರಿಕ್ ಮಾಡಿಕೊಂಡಿರುವುದರಿಂದ ಈ ರೀತಿ ಆಗಿದೆ. ಅನಿರುದ್ಧ್ ಅವರನ್ನು ಎರಡು ವರ್ಷಗಳ ಕಾಲ ಧಾರಾವಾಹಿಯಿಂದ ದೂರ ಇಡಲು ನಿರ್ಮಾಪಕರ ಸಂಘ ಕೂಡ ನಿರ್ಧಾರ ಮಾಡಿದೆ. ಈ ವಿಚಾರದಿಂದ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ. ಹೀಗಾಗಿ ಜೀ ಕನ್ನಡ ವಾಹಿನಿಯ ಎದುರು ಪ್ರತಿಭಟನೆ ನಡೆಸಿದ್ದಾರೆ.