Sonu Gowda Troll ಸುದೀಪ್ ಮಾತಿಗೆ ಅಗೌರವ; ಎಲಿಮಿನೇಟ್ ಮಾಡಲು ನೆಟ್ಟಿಗರ ಡಿಮ್ಯಾಂಡ್!

First Published | Sep 5, 2022, 3:39 PM IST

ಓಟಿಟಿ ಬಿಗ್ ಬಾಸ್ ಪ್ರವೇಶಿಸಿದ ದಿನದಿಂದಲ್ಲೂ ಟ್ರೋಲಿಗರಿಗೆ ಸೋನು ಗೌಡ ಟಾರ್ಗೇಟ್.  ಸುದೀಪ್ ಬುದ್ಧಿ ಮಾತುಗಳಿಗೆ ಬೆಲೆ ಇಲ್ವಾ ಎಂದು ನೆಟ್ಟಿಗರು...
Photo credit: Instagram trolls

ಬಿಗ್ ಬಾಸ್ ಸೀಸನ್ 1 ಓಟಿಟಿಯಲ್ಲಿ ಸೋಷಿಯಲ್ ಮೀಡಿಯಾ ಟ್ರೋಲ್ ಕ್ವೀನ್ ಸೋನು ಶ್ರೀನಿವಾಸ ಗೌಡ ಸ್ಪರ್ಧಿಸುತ್ತಿದ್ದು, 5ನೇ ವಾರಕ್ಕೆ ಯಶಸ್ವಿಯಾಗಿ ಕಾಲಿಟ್ಟಿದ್ದಾರೆ. 

ಆರಂಭದಿಂದಲ್ಲೂ ಸೋನು ಸಣ್ಣ ಪುಟ್ಟ ವಿಚಾರಗಳಿಗೆ ಸಖತ್ ಟ್ರೋಲ್ ಆಗಿದ್ದಾಳೆ. ಬಿಬಿ ಮನೆಯಿಂದ ಹೊರಗೆ ವಿಡಿಯೋ ವಿಚಾರಕ್ಕೆ ಟ್ರೋಲ್ ಅಗುತ್ತಿದ್ದರು ಆದರೀಗ ಅವಾಚ್ಯ ಶಬ್ಧಗಳನ್ನು ಮಾತನಾಡಿ ಟ್ರೋಲ್ ಆಗುತ್ತಿದ್ದಾರೆ. 

Tap to resize

ಮನೆ ಕೆಲಸಗಳನ್ನು ಸರಿಯಾಗಿ ಮಾಡದ ಕಾರಣ ನಾಲ್ಕನೇ ವಾರ ಸೋನುಗೆ ಕಳಪೆ ಪಟ್ಟ ಕೊಡುತ್ತಾರೆ. ಜೈಲು ಸೇರಿಕೊಂಡ ನಂತರ ಸೋನು ಥು ಥು ಎಂದು ಅವಾಚ್ಯ ಶಬ್ಧಗಳನ್ನು ಬಳಸಿ ಮಾತನಾಡಿದ್ದಾರೆ. 

ವೀಕೆಂಡ್ ಮಾತುಕತೆಯಲ್ಲಿ ಸುದೀಪ್ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಅವಾಚ್ಯ ಪದಗಳನ್ನು ಬಳಸಿ ಬಿಗ್ ಬಾಸ್ ಜೊತೆ ಮಾತನಾಡಿರುವುದು ಸರಿ ಅಲ್ಲ ಎಂದಿದ್ದಾರೆ. ಅಲ್ಲದೆ ಎರಡು ವಾರ ಸುಮ್ಮನೆ ಮನೆಯಲ್ಲಿ ಇರುವಂತೆ ಹೇಳಿದ್ದಾರೆ. 

ಸುದೀಪ್ ಮಾತುಗಳನ್ನು ಕೇಳಿದ ಯಾವುದೇ ವ್ಯಕ್ತಿ ಆದರೂ ಮನಸ್ಸಿಗೆ ತೆಗೆದುಕೊಂಡು ಬೇಸರ ಮಾಡಿಕೊಂಡು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದರೆ ಸೋನು ಬಾತ್‌ರೂಮ್‌ನಲ್ಲಿ ಕನ್ನಡಿ ಮುಂದೆ ನಿಂತುಕೊಂಡು ತಮ್ಮಗೆ ತಾವೇ ನಗುತ್ತಾ ತಮ್ಮ ಜೊತೆ ಮಾತನಾಡಿಕೊಳ್ಳುತ್ತಾರೆ. 

ಸೋನು ಸರಿ ಮಾಡಿಕೋ ಹಾಗೆ ಹೀಗೆ ಎಂದು ಮಾತನಾಡಿ ಸುಮ್ಮನಾಗುತ್ತಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಬೇಸರ ವ್ಯಕ್ತ ಪಡಿಸಿದ್ದಾರೆ. 

ಸುದೀಪ್ ಅಷ್ಟು ಸಮಯ ಕೊಟ್ಟು ವ್ಯಕ್ತಿಯನ್ನು ಸರಿ ಮಾಡುವ ಪ್ರಯತ್ನ ಮಾಡಿದ್ದಾರೆ ಆದರೆ ಸೋನು ರಿಯಾಕ್ಟ್ ಮಾಡಿರುವ ರೀತಿ ಸರಿ ಇಲ್ಲ ಸುದೀಪ್‌ಗೆ ಇಷ್ಟು ತೆಲೆ ಕೆಡಿಸಿರುವುದಕ್ಕೆ ಹಾಗೂ ಬಿಗ್ ಬಾಸ್‌ಗೆ ಅಗೌರವ ಕೊಟ್ಟಿರುವುದಕ್ಕೆ ಎಲಿಮಿನೇಟ್ ಮಾಡಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Latest Videos

click me!