Karimani Serial: ಕರಿಮಣಿ ಸೀರಿಯಲ್ ಗೆ ಎಂಟ್ರಿ ಕೊಟ್ಟ ನನ್ನರಸಿ ರಾಧೆಯ ಅಗಸ್ತ್ಯ…. ವೀಕ್ಷಕರು ಖುಷ್!

Published : Jun 03, 2025, 03:48 PM ISTUpdated : Jun 03, 2025, 04:07 PM IST

ನನ್ನರಸಿ ರಾಧೆ, ತ್ರಿಪುರ ಸುಂದರಿ ಧಾರಾವಾಹಿ ಮೂಲಕ ಕನ್ನಡಿಗರ ಮನ ಗೆದ್ದ ನಟ ಅಭಿನವ್ ವಿಶ್ವನಾಥನ್ ಕರಿಮಣಿ ಸೀರಿಯಲ್ ಗೆ ಎಂಟ್ರಿ ಕೊಟ್ಟಿದ್ದಾರೆ.

PREV
17

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕರಿಮಣಿ ಧಾರಾವಾಹಿಗೆ (Karimani Serial) ಇದೀಗ ಹೊಸ ಅತಿಥಿಯೊಬ್ಬರು ಎಂಟ್ರಿ ಕೊಟ್ಟಿದ್ದಾರೆ. ಸೀರಿಯಲ್ ಟೈಟಲ್ ಕಾರ್ಡ್ ನಲ್ಲೂ ಕೂಡ ಈಗ ಅತಿಥಿಗಳದ್ದೇ ಹವಾ. ನಾವು ಯಾರ್ ಬಗ್ಗೆ ಹೇಳ್ತಿರೋದು ಗೊತ್ತಾಯ್ತಲ್ವಾ?

27

ಹೌದು, ನನ್ನರಸಿ ರಾಧೆ ಧಾರಾವಾಹಿಯಲ್ಲಿ ಅಗಸ್ತ್ಯನ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡಿಗರ ಮನ ಗೆದ್ದ, ಕನ್ನಡದವರು ಅಲ್ಲದೇ ಇದ್ದರೂ, ಕನ್ನಡಿಗರ ಮನ ಗೆದ್ದ ನಟ ಅಭಿನವ್ ವಿಶ್ವನಾಥನ್ (Abhinav Viswanathan).

37

ನನ್ನರಸಿ ರಾಧೆ (Nannarasi Radhe) ಧಾರಾವಾಹಿ ಬಳಿಕ ಅಭಿನವ್, ಮತ್ತೆ ಕಲರ್ಸ್ ಕನ್ನಡದಲ್ಲಿ ತ್ರಿಪುರ ಸುಂದರಿ ಧಾರಾವಾಹಿಯಲ್ಲಿ ನಟಿಸಿದ್ದರು. ಆ ಧಾರಾವಾಹಿ ಮುಂದುವರಿದ ಭಾಗದಲ್ಲಿ ಬರುತ್ತೆ ಎನ್ನುವ ಸುಳಿವು ಕೊಟ್ಟು ಮುಕ್ತಾಯ ಕಂಡಿತ್ತು.

47

ಅಭಿನವ್ ನನ್ನು ಮತ್ತೆ ತೆರೆಯ ಮೇಲೆ ನೋಡಲು ಕಾತುರರಾಗಿದ್ದ ಜನರಿಗೆ ನಿರಾಸೆ ಮೂಡಿತ್ತು, ನಂತರ ಅಭಿನವ್ ತೆಲುಗು ಸೀರಿಯಲ್ ಗಳಲ್ಲಿ ಬ್ಯುಸಿಯಾಗಿದ್ದರು. ಸದ್ಯ ತೆಲುಗಿನ ಜೀವಾಹಿನಿಯ ಮೇಘ ಸಂದೇಶಂ ಧಾರಾವಾಹಿಯಲ್ಲಿ ಗಗನ್ ಆಗಿ ನಟಿಸುತ್ತಿದ್ದಾರೆ.

57

ಇದೀಗ ಅಚ್ಚರಿ ಎಂಬಂತೆ ಕರಿಮಣಿ ಧಾರಾವಾಹಿಗೂ ಕೂಡ ಅಭಿನವ್ ಎಂಟ್ರಿ ಕೊಟ್ಟಿದ್ದಾರೆ. ಅದು ಕೂಡ ಅಗಸ್ತ್ಯ ಆಗಿ. ಬ್ಲ್ಯಾಕ್ ರೋಸ್ (black rose) ಹೆಸರಲ್ಲಿ ಕರ್ಣ ಮತ್ತು ಸಾಹಿತ್ಯರನ್ನು ಕಾಡಿದ್ದು, ತನ್ನ ಮಾವ ಎಂದು ತಿಳಿದಿರುವ ಕರ್ಣ ಪ್ರಸನ್ನ ಮಾವನನ್ನ ಕಾಡಿಸಲು ಕರೆಸಿಕೊಂಡಿರೋದು ಗೆಳೆಯ ಅಗಸ್ತ್ಯನನ್ನು.

67

ಇದೀಗ ಅಗಸ್ತ್ಯನ ಮೋಡಿ ಆರಂಭವಾಗಿದ್ದು, ಅಗಸ್ತ್ಯ ಬ್ಲ್ಯಾಕ್ ರೋಸ್ ಹೆಸರಲ್ಲಿ ಕರ್ಣನ ಪ್ರಸನ್ನ ಮಾವನಿಗೆ ಕಾಡುತ್ತಿದ್ದಾರೆ. ಕರ್ಣ ಅಗಸ್ತ್ಯ ಸೇರಿ ಮಾವನಿಗೆ ಸಿಕ್ಕಾಪಟ್ಟೆ ಕಾಟ ಕೊಟ್ಟು ಹೆದರಿಸುತ್ತಿದ್ದಾರೆ. ಆದರೆ ಇದ್ಯಾವುದೂ ಕರ್ಣನ ಆಟ ಅನ್ನೋದು ಮಾವನಿಗೆ ಮಾತ್ರ ಗೊತ್ತಿಲ್ಲ.

77

ಅಂತೂ ಇಂತೂ ಎರಡು ವರ್ಷಗಳ ಬಳಿಕ ಮತ್ತೆ ಕಲರ್ಸ್ ಕನ್ನಡ (Colors Kannada) ಮೂಲಕ ಕಿರುತೆರೆಯಲ್ಲಿ ಅತಿಥಿ ಪಾತ್ರದಲ್ಲಿ ಎಂಟ್ರಿ ಕೊಟ್ಟಿರುವ ಅಭಿನವ್ ವಿಶ್ವನಾಥ್ ಅವರನ್ನು ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದಾರೆ. ಮತ್ತೆ ಹೊಸ ಸೀರಿಯಲ್ ನೊಂದಿಗೆ ಬನ್ನಿ ನಿಮ್ಮನ್ನು ತೆರೆ ಮೇಲೆ ನೋಡೋದಕ್ಕೆ ಕಾಯ್ತಿದ್ದೇವೆ ಎನ್ನುತ್ತಿದ್ದಾರೆ ಜನ.

Read more Photos on
click me!

Recommended Stories