24ನೇ ವಯಸ್ಸಿಗೆ ಮುಂಬೈನಲ್ಲಿ ಮನೆ ತಗೊಳ್ಳಲು ದುಡ್ಡು ಹೇಗೆ ಬಂತು? Bigg Boss ರಕ್ಷಿತಾ ಬಿಚ್ಚಿಟ್ಟ ಸತ್ಯವೇನು?

Published : Jan 22, 2026, 04:51 PM IST

Bigg Boss Kannada Season 12 Rakshita Shetty: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಮೂಲಕ ಹೆಸರು ಮಾಡಿರುವ ರಕ್ಷಿತಾ ಶೆಟ್ಟಿ ಅವರು ಈ ಹಿಂದೆ ಯುಟ್ಯೂಬರ್‌ ಆಗಿ ಗುರುತಿಸಿಕೊಂಡಿದ್ದರು. 24ನೇ ವಯಸ್ಸಿಗೆ ಅವರು ಮುಂಬೈನಲ್ಲಿ ಮನೆ ಖರೀದಿ ಮಾಡಿದ್ದರು. ಈ ಬಗ್ಗೆ ಮಾತನಾಡಿದ್ದಾರೆ. 

PREV
15
ಮುಂಬೈನಲ್ಲಿ ಹುಟ್ಟಿ ಬೆಳೆದರು

ಮುಂಬೈನಲ್ಲಿ ತಂದೆ-ತಾಯಿ ಜೊತೆ ವಾಸವಾಗಿರುವ ರಕ್ಷಿತಾ ಶೆಟ್ಟಿ ಅವರು ಮೂಲತಃ ಉಡುಪಿಯವರು. ಉಡುಪಿಯಲ್ಲಿ ಅವರ ಅಜ್ಜಿ ಮನೆ ಇದೆ. ತಂದೆ ಮುಂಬೈನಲ್ಲಿ ಪಾನ್‌ ಶಾಪ್‌ ಇಟ್ಟುಕೊಂಡಿದ್ದು, ಅವರು ಕುಟುಂಬದ ಜೊತೆಗಿದ್ದಾರೆ.

25
ಯುಟ್ಯೂಬ್‌ ಒಪನ್‌ ಮಾಡಿದ್ರು

ರಕ್ಷಿತಾ ಶೆಟ್ಟಿ ಅವರು ಕೊರೊನಾ, ಲಾಕ್‌ಡೌನ್‌ ಆದಾಗ ಉಡುಪಿಯಲ್ಲಿ ಹೆಚ್ಚು ಸಮಯ ಇದ್ದಿದ್ದರು. ಆಗ ಅವರು ರೀಲ್ಸ್‌ ಮಾಡುತ್ತಿದ್ದರು. ಇವು ವೈರಲ್‌ ಆಗುತ್ತಿತ್ತು. ಆಬಳಿಕ ಯುಟ್ಯೂಬ್‌ ಒಪನ್‌ ಮಾಡಿದರು. ಇದರಿಂದ ಇನ್ನಷ್ಟು ವಿಡಿಯೋಗಳು ಹೆಚ್ಚಿನ ವೀಕ್ಷಣೆ ಪಡೆದವು.

35
ಮನೆ ಖರೀದಿ

ರಕ್ಷಿತಾ ಶೆಟ್ಟಿ ಅವರು ಯುಟ್ಯೂಬ್‌ ವಿಡಿಯೋಗಳು, ಪ್ರಮೋಶನ್‌ಗಳಿಂದ ಬಂದ ಹಣವನ್ನು ಮನೆ ಖರೀದಿಸಲು ಬಳಸಿದ್ದಾರೆ. ಡೌನ್‌ ಪೇಮೆಂಟ್‌ಗೆ ಅವರು ನೀಡಿದ ಹಣವೆಲ್ಲವೂ ಯುಟ್ಯೂಬ್‌ನಿಂದ ಬಂದಿದ್ದಂತೆ.

45
ಮನೆ ಖರೀದಿ ಸುಲಭ ಇಲ್ಲ

ರಕ್ಷಿತಾ ಶೆಟ್ಟಿ ಅವರು ಮಾಧ್ಯಮದ ಜೊತೆ ಈ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ “ಮನೆ ತಗೊಳ್ಳುವುದು ಸುಲಭ ಇಲ್ಲ, ಮನೆಗೆ ಡೌನ್‌ ಪೇಮೆಂಟ್ ಹದಿನೈದು ಲಕ್ಷ ಬೇಕು‌ ಅಂದರೆ ಆಮೇಲೆ ಬಿಲ್ಡರ್‌, ಮೆಂಟೆನೆನ್ಸ್‌ ಎಂದೆಲ್ಲ ಇನ್ನೊಂದಿಷ್ಟು ಹಣ ಖರ್ಚು ಆಗುವುದು. ಮನೆ ಖರೀದಿ ಮಾಡುವುದು ಸುಲಭ ಇಲ್ಲ” ಎಂದು ಹೇಳಿದ್ದಾರೆ.

55
ಸಾಲ ಕಟ್ಟುತ್ತಿದ್ದೇನೆ

“ನಾನು ಬಟ್ಟೆಗೆ, ಅಥವಾ ಇನ್ಯಾವುದೋ ವಿಷಯಕ್ಕೆ ಹಣ ಹಾಕೋದಿಲ್ಲ. ಆದರೆ ತಿನ್ನಲು ಖರ್ಚು ಮಾಡ್ತೀನಿ, ಹೀಗೆಲ್ಲ ಮಾಡಿ ಹಣ ಉಳಿಸಿದ್ದೇನೆ. ಮನೆಗೆ ಡೌನ್‌ ಪೇಮೆಂಟ್‌ ಕೊಟ್ಟ ಬಳಿಕ, ಉಳಿದ ಹಣಕ್ಕೆ ನಾನು ಸಾಲ ಮಾಡಿದ್ದು, ಈಗ ಸಾಲ ಕಟ್ಟುತ್ತಿದ್ದೇನೆ” ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories