ಮೊಬೈಲ್‌ಗಿರೋ ನಾಲ್ಕು ಕ್ಯಾಮೆರಾಗಳ ಪ್ರಯೋಜನ ಏನು? 99% ಜನರಿಗೆ ಈ ವಿಷಯ ಗೊತ್ತಿಲ್ಲ

Published : Jul 04, 2026, 09:36 AM IST

ಸ್ಮಾರ್ಟ್‌ಫೋನ್‌ಗಳಲ್ಲಿರುವ ಬಹು ಕ್ಯಾಮೆರಾಗಳು ಒಂದೇ ಸಮಯದಲ್ಲಿ ಫೋಟೋ ಕ್ಲಿಕ್ ಮಾಡುವುದಿಲ್ಲ. ಮೂರು ಅಥವಾ ನಾಲ್ಕು ಕ್ಯಾಮೆರಾಗಳು ಇದು ವಿವಿಧ ಸನ್ನಿವೇಶಗಳಲ್ಲಿ ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ನೆರವಾಗುತ್ತದೆ.

PREV
15
ನಾಲ್ಕು ಕಣ್ಣಿನ ಮೊಬೈಲ್ ಕ್ಯಾಮೆರಾ

ಬಹುತೇಕ ಸ್ಮಾರ್ಟ್‌ಫೋನ್‌ಗಳು ಹಿಂಭಾಗದಲ್ಲಿ ಮೂರು ಅಥವಾ ನಾಲ್ಕು ಕ್ಯಾಮೆರಾಗಳನ್ನು ಹೊಂದಿರುತ್ತವೆ. ಈ ಕ್ಯಾಮೆರಾಗಳಿಂದಲೇ ಜನರು ತಮ್ಮ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಾರೆ. ಆದ್ರೆ ಫೋಟೋ ಕ್ಲಿಕ್ಕಿಸಿಕೊಳ್ಳುವಾಗ ಯಾವ ಕ್ಯಾಮೆರಾ ಆನ್ ಆಗಿರುತ್ತೆ ಎಂಬ ವಿಷಯ ಬಹುತೇಕರಿಗೆ ತಿಳಿದಿರಲ್ಲ. ಈ ಲೇಖನದಲ್ಲಿ ಮೊಬೈಲ್ ಕ್ಯಾಮೆರಾಗಳ ಕುರಿತ ಮಾಹಿತಿ ಇದೆ.

25
ಪ್ರೈಮರಿ ಆಂಡ್ ಸೆಲ್ಫಿ ಕ್ಯಾಮೆರಾ

ಸಾಮಾನ್ಯವಾಗಿ ಮೊಬೈಲ್ ಹಿಂಭಾಗದಲ್ಲಿ ಕ್ಯಾಮೆರಾವನ್ನು Primary Camera ಮತ್ತು ಮುಂಭಾಗದಲ್ಲಿರೋದನ್ನು Selfie Camera ಎಂದು ಕರೆಯಲಾಗುತ್ತದೆ. ಗ್ರೂಪ್ ಫೋಟೋ ಸೇರಿದಂತೆ ಬಹುತೇಕ ಸಂದರ್ಭಗಳಲ್ಲಿ ಪ್ರೈಮರಿ ಕ್ಯಾಮೆರಾ ಬಳಕೆ ಮಾಡಲಾಗುತ್ತದೆ. ಫೋಟೋ ಕ್ಲಿಕ್ಕಿಸುವಾಗ ಅಲ್ಟ್ರಾ-ವೈಡ್, ಝೂಮ್ ಸೇರಿದಂತೆ ಇನ್ನಿತರ ಫೀಚರ್ಸ್ ಬಳಸುತ್ತವೆ. ಮೊಬೈಲ್ ಹಿಂಭಾಗದಲ್ಲಿ ಮೂರು ಅಥವಾ ನಾಲ್ಕು ಕ್ಯಾಮೆರಾಗಳು ಒಂದೇ ಸಮಯದಲ್ಲಿ ಫೋಟೋ ಕ್ಲಿಕ್ ಮಾಡುತ್ತವೆಯಾ ಇಲ್ಲವಾ ಎಂಬುದರ ಬಗ್ಗೆ ಉತ್ತರ ಕಂಡುಕೊಳ್ಳೋಣ ಬನ್ನಿ.

35
ಮೂರು ಅಥವಾ ನಾಲ್ಕು ಕ್ಯಾಮೆರಾ

ಸಾಮಾನ್ಯವಾಗಿ ಫೋಟೋ ಕ್ಲಿಕ್ ಮಾಡುತ್ತಿರುವಾಗ ಪ್ರೈಮರಿ ಕ್ಯಾಮೆರಾ ಬಳಕೆಯಾಗುತ್ತದೆ. ಒಂದು ಅಲ್ಟ್ರಾ-ವೈಡ್ ಮೋಡ್ ಆಯ್ಕೆ ಮಾಡಿಕೊಂಡ್ರೆ ನಾಲ್ಕರಲ್ಲಿರುವ ಅಲ್ಟ್ರಾ-ವೈಡ್ ಮೋಡ್ ಕ್ಯಾಮೆರಾ ಆಟೋಮೆಟಿಕ್ ಆಗಿ ಆನ್ ಆಗುತ್ತದೆ ಅದೇ ರೀತಿ ಜೂಮ್ ಮಾಡಿದಾಗ ಟೆಲಿಫೋಟೋ ಕ್ಯಾಮೆರಾ ಆಕ್ಟಿವೇಟ್ ಆಗುತ್ತದೆ. ಇನ್ನು ಕೆಲವು ಸ್ಮಾರ್ಟ್‌ಫೋನ್‌ಗಳು ಗ್ರಾಹಕರಿಗೆ ಹೈ ಕ್ವಾಲಿಟಿ ಫೋಟೋ ನೀಡಲು ಹೆಚ್ಚು ಆಯ್ಕೆಗಳನ್ನು ನೀಡುತ್ತುವೆ. ಆದ್ರೆ ಎಲ್ಲಾ ಕ್ಯಾಮೆರಾಗಳನ್ನು ಒಂದೇ ಫೋಟೋಗಾಗಿ ಬಳಸಲಾಗುವುದಿಲ್ಲ.

45
ನಾಲ್ಕು ಕ್ಯಾಮೆರಾಗಳ ಪ್ರಯೋಜನವೇನು?

ಒಂದು ಮೊಬೈಲ್‌ನಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಕ್ಯಾಮೆರಾಗಳಿದ್ದರೂ ಫೋಟೋ ಗಮನಾರ್ಹವಾಗಿ ಉತ್ತಮವಾಗಿರುತ್ತದೆ ಎಂದರ್ಥವಲ್ಲ. ನಿಜವಾದ ಪ್ರಯೋಜನವೆಂದರೆ ಒಂದೇ ಫೋನ್ ವಿಭಿನ್ನ ಸಂದರ್ಭಗಳಲ್ಲಿ ಉತ್ತಮ ಫೋಟೋಗಳನ್ನು ತೆಗೆದುಕೊಳ್ಳಬಹುದು.

55
AI ಮತ್ತು ಇಮೇಜ್ ಪ್ರೊಸೆಸಿಂಗ್ ತಂತ್ರಜ್ಞಾನ

ದೂರದ ದೃಶ್ಯವನ್ನು ಸಮೀಪವಾಗಿ ಜೂಮ್ ಮಾಡಿ ಸೆರೆ ಹಿಡಿಯಲು ಒಂದು ಕ್ಯಾಮೆರಾ ಸಹಾಯ ಮಾಡುತ್ತದೆ. ಹಾಗೆಯೇ ಲಾಂಗ್ ಶಾಟ್‌ ವ್ಯೂವ್‌ ಕ್ಲಿಕ್ ಮಾಡುವಾಗ ಮತ್ತೊಂದು ಕ್ಯಾಮೆರಾ ಆನ್ ಆಗಿರುತ್ತದೆ. ಒಂದೇ ಫೋನ್‌ ಬಳಸಿ ಎಲ್ಲಾ ಆಯಾಮಗಳಲ್ಲಿ ಫೋಟೋ ಕ್ಲಿಕ್ ಮಾಡಿಕೊಳ್ಳಬಹುದು. ಇದಲ್ಲದೆ, ಅನೇಕ ಸ್ಮಾರ್ಟ್‌ಫೋನ್‌ಗಳು ಈಗ AI ಮತ್ತು ಇಮೇಜ್ ಪ್ರೊಸೆಸಿಂಗ್ ತಂತ್ರಜ್ಞಾನವನ್ನು ಬಳಸುತ್ತಿವೆ. ಈ ತಂತ್ರಜ್ಞಾನದಿಂದ ಫೋಟೋಗಳ ಗುಣಮಟ್ಟ ಮತ್ತಷ್ಟು ಸುಧಾರಿಸುತ್ತಿದೆ,

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Photos on
click me!

Recommended Stories