Banana: ಬಾಳೆಹಣ್ಣುಗಳು ಯಾಕೆ ಯಾವಾಗಲೂ ಬಾಗಿರುತ್ತವೆ, ದುಂಡಗೆ ಅಥವಾ ನೆಟ್ಟಗೆ ಇರೋಲ್ಲ?

Published : Jul 03, 2026, 10:30 PM IST

ನೀವು ಮಾರ್ಕೆಟ್‌ನಲ್ಲಿ ನೋಡಿರಬಹುದು ಸೇಬು, ದ್ರಾಕ್ಷಿ, ಆರಂಜ್, ಪೇರಲದಂತಹ ಹಣ್ಣುಗಳು ಸಾಮಾನ್ಯವಾಗಿ ದುಂಡಾಗಿರುತ್ತವೆ. ಆದರೆ ಬಾಳೆಹಣ್ಣು ಮಾತ್ರ ಯಾವಾಗಲೂ ಬಾಗಿದ ಆಕಾರದಲ್ಲೇ ಕಾಣಿಸುತ್ತದೆ. ಇದು ಪ್ರಕೃತಿಯ ವಿಶೇಷತೆ ಮಾತ್ರವಲ್ಲ, ಅದರ ಹಿಂದೆ ಒಂದು ಕುತೂಹಲಕಾರಿ ವಿಜ್ಞಾನದ ಕಾರಣವೂ ಇದೆ ಅದೇನು?

PREV
14
ಬಾಳೆಹಣ್ಣು ಯಾವಾಗಲೂ ಬಾಗಿರುವುದು ಏಕೆ?

ನೀವು ಮಾರ್ಕೆಟ್‌ನಲ್ಲಿ ನೋಡಿರಬಹುದು ಸೇಬು, ದ್ರಾಕ್ಷಿ, ಆರಂಜ್, ಪೇರಲದಂತಹ ಹಣ್ಣುಗಳು ಸಾಮಾನ್ಯವಾಗಿ ದುಂಡಾಗಿರುತ್ತವೆ. ಆದರೆ ಬಾಳೆಹಣ್ಣು ಮಾತ್ರ ಯಾವಾಗಲೂ ಬಾಗಿದ ಆಕಾರದಲ್ಲೇ ಕಾಣಿಸುತ್ತದೆ. ಇದು ಪ್ರಕೃತಿಯ ವಿಶೇಷತೆ ಮಾತ್ರವಲ್ಲ, ಅದರ ಹಿಂದೆ ಒಂದು ಕುತೂಹಲಕಾರಿ ವಿಜ್ಞಾನದ ಕಾರಣವೂ ಇದೆ

24
ಬಾಳೆಹಣ್ಣು ಪ್ರಾರಂಭದಲ್ಲಿ ನೇರವಾಗಿ ಇರುತ್ತೆ!

ಬಾಳೆಹಣ್ಣು ಬೆಳೆಯುವಾಗಲೇ ಬಾಗಿರುತ್ತದೆ ಎಂದು ಬಹಳಷ್ಟು ಭಾವಿಸಿರ್ತಾರೆ. ಆದರೆ ಇದು ತಪ್ಪು. ವಾಸ್ತವದಲ್ಲಿ ಚಿಕ್ಕದಾಗಿರುವ ಅಥವಾ ಮೊದಲು ಬಾಳೆಹಣ್ಣು ಬಾಗಿರುವುದಿಲ್ಲ, ನೇರವಾಗಿಯೇ ಇರುತ್ತೆ. ನೆಲದ ಕಡೆ ಇಳಿಬಿದ್ದು ಬೆಳೆಯಲು ಆರಂಭಿಸುತ್ತದೆ. ನಂತರ ಬೆಳವಣಿಗೆಯ ಹಂತದಲ್ಲಿ ಅದರ ಆಕಾರ ಬದಲಾಗುತ್ತದೆ.

34
ಬಾಳೆಹಣ್ಣು ಬಾಗಲು ಗುರುತ್ವಾಕರ್ಷಣೆ ಮೊದಲ ಕಾರಣ!

ಸಾಮಾನ್ಯವಾಗಿ ಸಸ್ಯಗಳ ಹಣ್ಣುಗಳು, ಬೇರುಗಳು ಭೂಮಿಯ ಗುರುತ್ವಾಕರ್ಷಣ ಬಲದ ಪ್ರಭಾವದಿಂದ ಕೆಳಮುಖವಾಗಿ ಬೆಳೆಯುತ್ತವೆ. ವಿಜ್ಞಾನದಲ್ಲಿ ಈ ಪ್ರಕ್ರಿಯೆಯನ್ನು ಪಾಸಿಟಿವ್ ಜಿಯೋಟ್ರೋಪಿಸಮ್ (Positive Geotropism) ಎಂದು ಕರೀತಾರೆ.

44
ನೆಗೆಟಿವ್ ಜಿಯೋಟ್ರೋಪಿಸಮ್ ಎಂದರೇನು?

ಬಾಳೆಹಣ್ಣು ಚಿಕ್ಕದಿದ್ದಾಗಿ ನೇರವಾಗಿ ಬೆಳೆಯುತ್ತಾ ಬೆಳೆಯುತ್ತಾ ಹೆಚ್ಚು ಸೂರ್ಯನ ಬೆಳಕನ್ನು ಪಡೆಯಲು ಮೇಲ್ಮುಖವಾಗಿ ತಿರುಗಲು ಆರಂಭಿಸುತ್ತದೆ. ಈ ಬೆಳಕಿನತ್ತ ಬೆಳೆಯುವ ಗುಣವನ್ನು ನೆಗೆಟಿವ್ ಜಿಯೋಟ್ರೋಪಿಸಮ್ (Negative Geotropism) ಅಥವಾ ಫೋಟೋಟ್ರೋಪಿಸಮ್ ಎಂದು ಕರೆಯಲಾಗುತ್ತದೆ. ಇದೇ ಕಾರಣದಿಂದ ಹಣ್ಣು ನಿಧಾನವಾಗಿ ಬಾಗಿದ ಆಕಾರ ಪಡೆಯುತ್ತದೆ.

ಒಂದು ಕಡೆ ಗುರುತ್ವಾಕರ್ಷಣದ ಪ್ರಭಾವ ಮತ್ತೊಂದು ಕಡೆ ಸೂರ್ಯನ ಸೆಳೆತ ಈ ಎರಡು ಪ್ರಕ್ರಿಯೆಗಳು ಸೇರಿ ಬಾಳೆಹಣ್ಣಿಗೆ ಅದರ ವಿಶಿಷ್ಟ ಬಾಗಿದ ಆಕಾರವನ್ನು ನೀಡುತ್ತವೆ. ಆದ್ದರಿಂದಲೇ ಬಾಳೆಹಣ್ಣುಗಳು ನೇರವಾಗಿರದೆ, ಸುಂದರವಾದ ವಕ್ರ ರೂಪದಲ್ಲಿರುತ್ತವೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Photos on
click me!

Recommended Stories