SSLC ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಮಗಳ ಬಗ್ಗೆ ಪ್ರಹ್ಲಾದ್ ಜೋಶಿ ಹೆಮ್ಮೆಯ ಮಾತು

Published : May 03, 2025, 06:04 PM ISTUpdated : May 03, 2025, 06:19 PM IST

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಪುತ್ರಿ ಅನನ್ಯಾ ಜೋಶಿ SSLC ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಜೋಶಿ ಅವರು ತಮ್ಮ ಮಗಳ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದು, ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಹಾರೈಸಿದ್ದಾರೆ.

PREV
16
SSLC ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಮಗಳ ಬಗ್ಗೆ ಪ್ರಹ್ಲಾದ್ ಜೋಶಿ ಹೆಮ್ಮೆಯ ಮಾತು

ಶುಕ್ರವಾರ ಎಸ್ಎಸ್ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು, ಮಕ್ಕಳು ಪಡೆದುಕೊಂಡ ಅಂಕಗಳ ಫೋಟೋವನ್ನು ಪೋಷಕರು ಹೆಮ್ಮೆಯಿಂದ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರ ಪುತ್ರಿ ಉತ್ತಮ ಅಂಕಗಳೊಂದಿಗೆ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿದ್ದಾರೆ.

26

ಇಂದು ಫೇಸ್‌ಬುಕ್‌ನಲ್ಲಿ ಮಗಳ ಜೊತೆಗಿನ ಫೋಟೋ ಹಂಚಿಕೊಂಡಿರುವ ಪ್ರಹ್ಲಾದ್ ಜೋಶಿಯವರು ಪುತ್ರಿ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ನಮ್ಮ ಮನದಾಳದ ಮಾತುಗಳನ್ನು ಧಾರಾವಾಡದಲ್ಲಿ ಮಾತನಾಡುವ ಶೈಲಿಯಂತೆಯೇ ಬರೆದುಕೊಂಡಿದ್ದಾರೆ. 

36

ಪ್ರಹ್ಲಾದ್ ಜೋಶಿಯವರ ಪುತ್ರಿ ಅನನ್ಯಾ ಜೋಶಿ ಶೇಕಡ 90ರಷ್ಟು ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಉತ್ತೀರ್ಣರಾಗಿದ್ದಾರೆ. ಮುಂದೆ ಮಗಳ ಇಷ್ಟದಂತೆ ಆಕೆಗೆ ಶಿಕ್ಷಣ ಕೊಡಲು ನಾವು ಸಿದ್ದರಿದ್ದೇವೆ ಮತ್ತು ಮಗಳ ಓದಿನಲ್ಲಿ ತಮ್ಮ ಪತ್ನಿಯ ಪಾತ್ರ  ಎಷ್ಟು ಮುಖ್ಯವಾಗಿತ್ತು ಎಂಬುದನ್ನು ಸಹ ಫೇಸ್‌ಬುಕ್ ಪೋಸ್ಟ್‌ನಲ್ಲಿ ಜೋಶಿಯವರು ತಿಳಿಸಿದ್ದಾರೆ. 

46

ಪ್ರಹ್ಲಾದ್ ಜೋಶಿ ಪೋಸ್ಟ್

ನನ್ನ ನೆಚ್ಚಿನ ಮಗಳ ಅನನ್ಯಾ  SSLC ಒಳಗ 90% ಮಾಡ್ಯಾಳ. ಅಕಿ ಹಂಗ ಸಿರಿಯಸ್ ಆಗಿ ಭಾಳ ಟೇನ್ಶನ್ ತೊಗೊಂಡ ಓದಿದೋಕಿ ಏನ ಅಲ್ಲಾ, ಆದ್ರ SSLC ಅಂತ ಅಂದಮ್ಯಾಲೆ ಅಕಿ ಕಿಂತಾ ಜಾಸ್ತಿ ನಮಗ ಕಾಳಜಿ ಇದ್ದ ಇರ್ತದ. ಅದರಾಗ ನಮ್ಮ ಮನೆಯವರ ಅಂತೂನೀವೇನ ಇವತ್ತ ಹುಬ್ಬಳ್ಳಿ ಒಳಗ ಇದ್ದರ ನಾಳೆ ದಿಲ್ಲಿ ಒಳಗ ಇರ್ತೀರಿ...ಮಗಳದ SSLC ಈ ವರ್ಷ... ಇವತ್ತಿನ ಕಾಂಪಿಟೇಶನ್ ಕಾಲದಾಗ ಎಷ್ಟ ಮಾರ್ಕ್ಸ ತೊಗೊಂಡರು ಕಡಮಿನ’ ಅಂತ ಭಾಳ ಟೆನ್ಶನ್ ತೊಗೊಂಡಿದ್ದರು. ಹಂಗ ಅಂತ ನಾವ ಯಾರೂ ಅಕಿ ಮ್ಯಾಲೆ ಏನ ಪ್ರೆಶರ್ ಹಾಕಿದ್ದಿಲ್ಲಾ. 

56

ಪ್ರಹ್ಲಾದ್ ಜೋಶಿ ಪೋಸ್ಟ್

ತನ್ನ ರೂಟಿನ್ ಸಂಗೀತ, ಆಟ ಅದರೊಳಗ ಅಭ್ಯಾಸನೂ ಮಾಡಿ 90% ಮಾಡಿದ್ದ ನಮ್ಮ ಮನ್ಯಾಗ ಎಲ್ಲಾರಿಗೂ ಭಾಳ ಖುಶಿ ಆಗೇದ. ಇದ ನಮಗೇಲ್ಲಾ ಹೆಮ್ಮೆ ಪಡೊ ವಿಷಯನ. ಮುಂದ ಅಕಿ ಏನ ಕಲಿಬೇಕ ಅಂತಾಳ ಅದನ್ನ ಕಲಸಲಿಕ್ಕೆ ನಾವ ರೆಡಿ ಇದ್ದೇವಿ. ಅಕಿ ಮುಂದಿನ ವಿದ್ಯಾಭ್ಯಾಸ ಹಿಂಗ ಸಾಗಲಿ ಅಂತ ಅಕಿಗೆ ಶುಭಕೋರುತ್ತಾ ಅಭಿನಂದನೆ ಹೇಳ್ತೇನಿ. We are proud of you Ananya, and wish you all the best. SSLC ಒಳಗ ಉತ್ತೀರ್ಣರಾದ ಎಲ್ಲಾರಿಗೂ ಅಭಿನಂದನೆ. ನಿಮ್ಮದೇಲ್ಲಾ ಮುಂದಿನ ಭವಿಷ್ಯ ಉಜ್ವಲವಾಗಲಿ ಅಂತ ಹಾರೈಸ್ತೇನಿ ಎಂದು ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

66

ಈ ಪೋಸ್ಟ್‌ಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಸರ್ ತುಂಬಾ ಸೊಗಸಾಗಿ ಮಗಳ ಬಗ್ಗೆ ಬರದಿರಿ ಅದು ನಮ್ಮ ಹುಬ್ಬಳ್ಳಿ ಭಾಷೆಯಲ್ಲಿ ಅಭಿನಂದನೆಗಳು. ಅನನ್ಯಾ ಪುಟ್ಟಿಗೆ ಅಭಿನಂದನೆಗಳು. ಒಳ್ಳೆಯದಾಗಲಿ ಕಂದ ಎಂದು ಕಮೆಂಟ್ ಮಾಡಿದ್ದಾರೆ. ಇಲ್ಲಿಯವರೆಗೆ 3 ಸಾವಿರಕ್ಕೂ ಅಧಿಕ ಕಮೆಂಟ್‌ಗಳು ಬಂದಿವೆ.

Read more Photos on
click me!

Recommended Stories