ರಾಜ್ಯದಲ್ಲಿ ಮತ್ತೆ ಅಬ್ಬರದ ಬೇಸಿಗೆ ಮಳೆ ಶುರು; ಬೆಂಗಳೂರಲ್ಲಿ ಆಗುತ್ತಾ ವರುಣನ ಸಿಂಚನ?

Published : Apr 26, 2025, 08:03 AM ISTUpdated : Apr 26, 2025, 08:06 AM IST

Karnataka Rain Forecast: ಕರ್ನಾಟಕದಲ್ಲಿ ಕೆಲವು ದಿನಗಳ ವಿರಾಮದ ನಂತರ ಮತ್ತೆ ಬೇಸಿಗೆ ಮಳೆ ಆರಂಭವಾಗಲಿದೆ. ಏಪ್ರಿಲ್ 30 ರವರೆಗೆ ರಾಜ್ಯದ ವಿವಿಧೆಡೆ ಗುಡುಗು-ಮಿಂಚು ಸಹಿತ ಮಳೆಯಾಗುವ ಮುನ್ಸೂಚನೆ ಇದೆ.

PREV
17
ರಾಜ್ಯದಲ್ಲಿ ಮತ್ತೆ ಅಬ್ಬರದ ಬೇಸಿಗೆ ಮಳೆ ಶುರು; ಬೆಂಗಳೂರಲ್ಲಿ ಆಗುತ್ತಾ ವರುಣನ ಸಿಂಚನ?

ರಾಜ್ಯದಲ್ಲಿ ಕೆಲ ದಿನ ವಿರಾಮ ನೀಡಿದ್ದ ಬೇಸಿಗೆ ಮಳೆ ಮತ್ತೆ ಶುರುವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏಪ್ರಿಲ್ 30ರವರೆಗೆ ರಾಜ್ಯದ ವಿವಿಧೆಡೆ ಗುಡುಗು-ಮಿಂಚು ಸಹಿತ ಮಳೆಯಾಗಲಿದೆ. (ಸಾಂದರ್ಭಿಕ ಚಿತ್ರ)

27
Bangalore Rain 01

ಈ ಬಾರಿ ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಅಬ್ಬರ ಜೋರಾಗಿದ್ದು, ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಕಳೆದ ನಾಲ್ಕೈದು ದಿನಗಳಿಂದ ರಾಜ್ಯದ ಬಹುತೇಕ ಎಲ್ಲಾ ಭಾಗದಲ್ಲಿಯೂ ಮಳೆ ಕಡಿಮೆಯಾಗಿತ್ತು. ಇದೀಗ ಭಾನುವಾರದಿಂದ ರಾಜ್ಯದಲ್ಲಿ ಮತ್ತೆ ಮಳೆ ಅಬ್ಬರ ಹೆಚ್ಚಾಗುವ ಸಾಧ್ಯತೆಗಳಿವೆ. (ಸಾಂದರ್ಭಿಕ ಚಿತ್ರ)

37
Bangalore Rain 02

ಏಪ್ರಿಲ್ 25 ರಿಂದ ಏಪ್ರಿಲ್ 28 ರವರೆಗೆ ರಾಜ್ಯದ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಬೀಸುವ ನಿರೀಕ್ಷೆಯಿದೆ. ಏಪ್ರಿಲ್ 29 ಮತ್ತು 30ರ ನಂತರ ಮಳೆಯ ಪ್ರಮಾಣ ಇಳಿಮುಖವಾಗಲಿದೆ.  (ಸಾಂದರ್ಭಿಕ ಚಿತ್ರ)

47

bangalore rain

ಬೆಂಗಳೂರು ಹವಾಮಾನ

ರಾಜಧಾನಿ ಬೆಂಗಳೂರಿನಲ್ಲಿ ಬಿಸಿಲಿನ ತಾಪಮಾನ ಇಂದು ಕನಿಷ್ಠ 2 ಡಿಗ್ರಿ ಸೆಲ್ಸಿಯಸ್‌ಷ್ಟು ಕಡಿಮೆಯಾಗಿದೆ. ಇಂದು ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಲಿದೆ. ಇಂದು ಗರಿಷ್ಠ 34.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಏಪ್ರಿಲ್ 27ರ ನಂತರ ರಾಜಧಾನಿಯ ಹವಾಮಾನದಲ್ಲಿ ವ್ಯತ್ಯಾಸವಾಗಲಿದೆ ಎಂದು ಅಂದಾಜಿಸಲಾಗಿದೆ. (ಸಾಂದರ್ಭಿಕ ಚಿತ್ರ)

57

ಕಲಬುರಗಿ ಜಿಲ್ಲಾದ್ಯಂತ ಶುಕ್ರವಾರ ಬಿರುಗಾಳಿ, ಗುಡುಗು ಸಮೇತ ಮಳೆ

ಜಿಲ್ಲೆಯ ಕಾಳಗಿ, ಚಿಂಚಳಿ, ಅಫಜಲ್ಪುರ, ಚಿತ್ತಾಪುರ, ಕಲಬುರಗಿ ನಗರದ ಸುತ್ತುಮುತ್ತಲೂ ಮಳೆ ಸುರಿದಿದೆ. ಮಳೆ ಹಾಗೂ ಗಾಳಿಯ ರಭಸಕ್ಕೆ ಚಿಂಚೋಳಿ-ಕಾಳಗಿ ರಸ್ತೆಯಲ್ಲಿ ಮರಗಳು ಉರುಳಿ ಬಿದ್ದು ಸಂಚಾರಕ್ಕೆ ಸಂಚಕಾರ ಬಂದಿದೆ. ಅಲ್ಲದೆ ಕಾಳಗಿ ಚಿಂಚೋಳಿ ‌ಮುಖ್ಯ ರಸ್ತೆಯಲ್ಲಿ ಗಿಡಮರಗಳು ಧರೆಗೆ ಉರುಳಿ ಬಿದ್ದಿವೆ. ಚಿಂಚೋಳಿ ಪಟ್ಟಣದಲ್ಲಿ ಭಾರಿ ಮಳೆ ಬಿರುಗಾಳಿಗೆ ಒಳಂಗಾಣ ಕ್ರೀಡಾಂಗಣಕ್ಕೆ ಅಳವಡಿಸಿದ ತಗಡುಗಳು ಗಾಳಿಗೆ ಹಾರಿ ಹೋಗಿ ದೂರ ಬಿದ್ದಿವೆ. (ಸಾಂದರ್ಭಿಕ ಚಿತ್ರ)

67
Bangalore Rain 05

ಶೃಂಗೇರಿ ಸುತ್ತಮುತ್ತ ಮತ್ತೆ ಆರ್ಭಟಿಸಿದ ಮಳೆ

ಶೃಂಗೇರಿ ತಾಲೂಕಿನಾದ್ಯಂತ ಶುಕ್ರವಾರ ಮಧ್ಯಾಹ್ನದಿಂದ ಕೆಲಹೊತ್ತು ಗುಡುಗು ಸಿಡಿಲಿನ ಆರ್ಭಟದೊಂದಿಗೆ ಭಾರಿ ಮಳೆ ಅಬ್ಬರಿಸಿತು. ಕೆಲ ದಿನಗಳಿಂದ ಸತತ ಮಳೆಯಾಗುತ್ತಿದ್ದು, ಬುಧವಾರವೂ ಭಾರೀ ಮಳೆಯಾಗಿತ್ತು. ಶುಕ್ರವಾರ ಮಧ್ಯಾಹ್ನ ಮೋಡ ಕವಿದ ವಾತಾವರಣದೊಂದಿಗೆ ಗುಡುಗು ಸಿಡಿಲು ಗಾಳಿ ಆರ್ಭಟದೊಂದಿಗೆ ಮಳೆ ಸುರಿಯಿತು. (ಸಾಂದರ್ಭಿಕ ಚಿತ್ರ)

77

ನೆಲಕ್ಕುರುಳಿದ ಮರಗಳು

ನವಲಗುಂದ ತಾಲೂಕಿನೆಲ್ಲೆಡೆ ಗುರುವಾರ ಸಂಜೆ ಸಿಡಿಲು. ಗುಡುಗು ಗಾಳಿ ಸಹಿತ ಭಾರಿ ಮಳೆಯಾಗಿದೆ. ಗಾಳಿಯ ರಭಸಕ್ಕೆ ಅಲ್ಲಲ್ಲಿ ಮರಗಳು ಬಿದ್ದು ವಿದ್ಯುತ್ ವ್ಯತ್ಯಯವಾಗಿದೆ. ಗುಮ್ಮಗೋಳ ಗ್ರಾಮದ ಜನ್ನತಬಿ ನದಾಫ್, ಮಹಮ್ಮದ್ಅಲಿ ಖಾದರ್ ನೇಕಾರ್, ಆಶಾಬಿ ಜೇರುಮ್ಮನವರ ಹಾಗೂ ಶಿರೂರು ಗ್ರಾಮದಲ್ಲಿ ಮನೆಯೊಂದರ ಚಾವಣಿ ಹಾರಿಹೋಗಿವೆ. (ಸಾಂದರ್ಭಿಕ ಚಿತ್ರ)

Read more Photos on
click me!

Recommended Stories