ಬಂಗಾರ ಮೈಮೇಲಿದ್ರೆ ಜೀವಕ್ಕೆ ಕುತ್ತು: ಚಿನ್ನಕ್ಕಾಗಿ ವೃದ್ಧೆಯ ಕಿವಿಯನ್ನೆ ಕತ್ತರಿಸಿದ ಕಳ್ಳರ ಗ್ಯಾಂಗ್

Published : Mar 06, 2026, 08:30 PM IST

ಚಿನ್ನದ ಆಭರಣಕ್ಕಾಗಿ ದುಷ್ಕರ್ಮಿಗಳು ಒಂಟಿ ವೃದ್ಧೆಯ ಮೇಲೆ ಹಲ್ಲೆ ಮಾಡಿ ಆಕೆಯ ಚಿನ್ನದ ಬೆಂಡೋಲೆಗಾಗಿ ಕಿವಿಯನ್ನೇ ಕತ್ತರಿಸಿದಂತಹ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹೂವಳ್ಳಿಯಲ್ಲಿ ನಡೆದಿದೆ. 

PREV
15
ಚಿನ್ನ ಧರಿಸಿದವರ ಸುರಕ್ಷತೆಯ ಬಗ್ಗೆ ಆತಂಕ

ಕೋಲಾರ : ಬಂಗಾರದ ಬೆಲೆ ದಿನದಿಂದ ದಿನಕ್ಕೆ ಏರುತ್ತಿದ್ದು, ಇದರಿಂದಾಗಿ ಈಗ ಚಿನ್ನ ಧರಿಸುವವರ ಸುರಕ್ಷತೆಯ ಬಗ್ಗೆ ಆತಂಕ ಮೂಡಿದೆ. ದುಬಾರಿ ಚಿನ್ನವನ್ನು ಮೈ ಮೇಲೆ ಹಾಕಿ ರಸ್ತೆಯಲ್ಲಿ ನಡೆಯಲು ಸಾಧ್ಯವಾಗದಂತಹ ಘಟನೆಗಳು ಅಲ್ಲಲ್ಲಿ ಕೇಳಿ ಬರುತ್ತಿದೆ. ಹಾಗೆಯೇ ಈಗ ಕೋಲಾರದಲ್ಲಿ ದುಷ್ಕರ್ಮಿಗಳು ಚಿನ್ನದ ಕಿವಿಯೋಲೆ ಧರಿಸಿದ್ದ ವೃದ್ಧೆಯ ಕಿವಿಯನ್ನೇ ಕಿತ್ತೊಯ್ದಿದ್ದಾರೆ.

25
ಶ್ರೀನಿವಾಸಪುರ ತಾಲೂಕಿನ ಹೂವಳ್ಳಿಯಲ್ಲಿ ಘಟನೆ

ಕಿವಿಯೋಲೆಗಾಗಿ ವೃದ್ದೆಯ ಕಿವಿಯನ್ನೆ ಕಳ್ಳರ ಗ್ಯಾಂಗ್ ಕತ್ತರಿಸಿ ಕ್ರೌರ್ಯ ಮೆರೆದಿದ್ದಾರೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಹೂವಳ್ಳಿಯಲ್ಲಿ ಈ ಘಟನೆ ನಡೆದಿದೆ.

35
ಮಹಿಳೆಯ ಕಿವಿಯನ್ನೇ ಕತ್ತರಿಸಿದ ದುಷ್ಕರ್ಮಿಗಳು

ರತ್ನಮ್ಮ ಎಂಬ 70 ವರ್ಷದ ವೃದ್ಧೆಯ ಮೇಲೆ ದಾಳಿ ಮಾಡಿದ ಕಳ್ಳರ ಗ್ಯಾಂಗ್ ಅವರ ಕಿವಿಯನ್ನೇ ಕತ್ತರಿಸಿ ಕಿವಿಯೋಲೆ ಹಾಗೂ ಅವರ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾರೆ.

45
ತಡ ರಾತ್ರಿ ಒಂಟಿ ಮನೆ ಮೇಲೆ ದಾಳಿ

ರತ್ನಮ್ಮ ಅವರು ಒಂಟಿ ಮನೆಯಲ್ಲಿ ವಾಸವಾಗಿದ್ದರು. ತಡ ರಾತ್ರಿ ಒಂಟಿ ಮನೆ ಮೇಲೆ ದಾಳಿ ಮಾಡಿರುವ ಕಿಡಿಗೇಡಿಗಳು ಅವರ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಮನೆಯಲ್ಲೇ ನಿದ್ದೆಗೆ ಜಾರಿದ ಮಗು : ಕಾಣೆಯಾಗಿದ್ದಾನೆ ಅಂತ ಊರೆಲ್ಲಾ ಹುಡುಕಿ ಬೆಸ್ತು ಬಿದ್ದ ಕುಟುಂಬ

55
25 ಗ್ರಾಂ ಚಿನ್ನದ ಸರ ಹಾಗೂ ಕಿವಿಯೋಲೆ ಕಸಿದು ಪರಾರಿ

ಸುಮಾರು 25 ಗ್ರಾಂ ಚಿನ್ನದ ಸರ ಹಾಗೂ ಕಿವಿಯೋಲೆ ಕದ್ದು ದುಷ್ಕರ್ಮಿಗಳು ಪರಾರಿಯಾಗಿದ್ದು, ಕಿವಿಯೋಲೆಗಾಗಿ ಈ ಪಾಪಿಗಳು ವೃದ್ಧೆಯ ಕಿವಿಯನ್ನೇ ಕತ್ತರಿಸಿ ಕ್ರೌರ್ಯ ಮೆರೆದಿದ್ದಾರೆ. ಸ್ಥಳಕ್ಕೆ ಕೋಲಾರ ಎಸ್ಪಿ ಕನ್ನಿಕಾ ಸಿಕ್ರಿವಾಲ್ ಭೇಟಿ ನೀಡಿದ್ದು, ಕಳ್ಳರ ಗ್ಯಾಂಗ್‌ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬಹ್ರೇನ್‌ನಲ್ಲಿ ಕತಾರ್ ನೌಕಾಪಡೆ ಸಿಬ್ಬಂದಿ ನೆಲೆಸಿದ್ದ ಕಟ್ಟಡಗಳ ಮೇಲೆ ಇರಾನ್ ದಾಳಿ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories