ಕಂಟೆಂಟ್ ಕ್ರಿಯೇಟರ್ ಒಬ್ಬರು ಮಾಡಿದ ವೈರಲ್ ವಿಡಿಯೋದಲ್ಲಿ ಬೆಂಗಳೂರಿನ ಪೌರ ಕಾರ್ಮಿಕರು ತಮ್ಮ ಸಂಬಳದ ಬಗ್ಗೆ ಮಾತನಾಡಿದ್ದಾರೆ. ತಿಂಗಳಿಗೆ ಎಷ್ಟು ಸಂಬಳ ಪಡೆಯುವುದಾಗಿ ಹೇಳಿಕೊಂಡಿದ್ದು, ತಮ್ಮ ಕೆಲಸದ ಸಮಯ, ಸವಾಲುಗಳು ಮತ್ತು ಪಿಎಫ್‌ನಂತಹ ಸೌಲಭ್ಯಗಳ ಕೊರತೆಯ ಬಗ್ಗೆ ವಿವರಿಸಿದ್ದಾರೆ.
ಬೆಂಗಳೂರು ನಗರ ಸ್ವಚ್ಛತೆಗೆ ಪ್ರಮುಖ ಕಾರಣ ಅಂದ್ರೆ ನಮ್ಮ ಪೌರ ಕಾರ್ಮಿಕರು. ಈ ಶ್ರಮಜೀವಿಗಳು ಒಂದು ದಿನ ರಜೆ ಹಾಕಿದ್ರೆ ಬೆಂಗಳೂರು ಕಸದಿಂದ ತುಂಬಿ ತುಳುಕುತ್ತದೆ. ಈ ಪೌರ ಕಾರ್ಮಿಕರಿಗೆ ಸಂಬಳ ಕಡಿಮೆ ಎಂದು ಹೇಳುತ್ತಿರುತ್ತಾರೆ. ಕಂಟೆಂಟ್ ಕ್ರಿಯೇಟರ್ ಅಮಿತ್ ಎಂಬವರು ಪೌರ ಕಾರ್ಮಿಕರೊಂದಿಗೆ ಮಾತನಾಡಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಪೌರ ಕಾರ್ಮಿಕರು ತಮ್ಮ ಕೆಲಸದ ವೈಖರಿಯ ಬಗ್ಗೆ ಮಾತನಾಡಿದ್ದಾರೆ.
25
ಸಂಬಳ ಕೇಳಿದ್ರೆ ಶಾಕ್ ಆಗ್ತೀರಿ
alemariamith ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಪೌರ ಕಾರ್ಮಿಕರ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು, ಡಿಗ್ರಿ, ಇಂಜಿನೀಯರ್ ಮುಗಿಸಿ ಕಾರ್ಪೋರೇಟ್ ಕಂಪನಿಯಲ್ಲಿ 15-20 ಸಾವಿರ ಸಂಬಳ ಪಡೆಯೋದು ವೇಸ್ಟ್ ಅನ್ನಿಸುತ್ತೆ. ಇವರು ಮಾಡುವ ಕೆಲಸಕ್ಕೆ ಎಷ್ಟು ಸಂಬಳ ನೀಡಿದ್ರೂ ಕಡಿಮೆ. ಅಷ್ಟು ಸಂಬಳ ಇದ್ದರೂ ಕೂಡ ಬೆಂಗಳೂರಿನಲ್ಲಿ ಮನೆ ಮನೆಗೆ ಬಂದು ಟಿಪ್ಸ್ ಕೇಳ್ತಾರೆ. ಕೊಡದಿದ್ದರೆ ಬೈಯುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ.
35
ತಿಂಗಳಿಗೆ 40 ಸಾವಿರ ರೂಪಾಯಿ
ಈ ವಿಡಿಯೋ ಕ್ಲಿಪ್ ಪ್ರಕಾರ, ಬೆಂಗಳೂರಿನ ಪೌರ ಕಾರ್ಮಿಕರು ತಿಂಗಳಿಗೆ 40 ಸಾವಿರ ರೂಪಾಯಿ ಸಂಬಳ ಪಡೆಯುತ್ತಾರೆ. ಯುನಿಫಾರ್ಮ್ ಹಾಕಿಕೊಂಡು ಕೆಲಸ ಮಾಡೋರೆಲ್ಲಾ 40 ಸಾವಿರ ಸಂಬಳ ಪಡೆಯುತ್ತಾರೆ. 10-15 ಸಾವಿರ ಪಡೆಯುವ ಕಾರ್ಮಿಕರು ಈಗ ಯಾರೂ ಇಲ್ಲ. 2025 ಮೇನಿಂದ ನಮಗೆಲ್ಲರಿಗೂ ಸಂಬಳ ಹೆಚ್ಚಾಗಿದೆ ಎಂದು ಪೌರ ಕಾರ್ಮಿಕರು ಹೇಳಿಕೊಂಡಿದ್ದಾರೆ. ಆದ್ರೆ ಈ ಶ್ರಮಜೀವಿಗಳಿಗೆ ಫಿಎಫ್ ಸೇರಿದಂತೆ ಯಾವುದೇ ಸೌಲಭ್ಯಗಳಿಲ್ಲ.
ಮುಂದುವರಿದು ಮಾತನಾಡಿದ ಪೌರ ಕಾರ್ಮಿಕ ಮಹಿಳೆ, ನನ್ನ ಗಂಡ ಕಾವೇರಿ ಬೋರ್ಡ್‌ನಲ್ಲಿ ವಾಟರ್ ಮ್ಯಾನ್ ಆಗಿ ಕೆಲಸ ಮಾಡುತ್ತಾರೆ. ಅವರಿಗೂ 40 ಸಾವಿರ ಸಂಬಳ ಸಿಗುತ್ತದೆ. ಪ್ರತಿ ತಿಂಗಳು 15ನೇ ತಾರೀಖಿನೊಳಗೆ ಸಂಬಳ ಕೈಗೆ ಸಿಗುತ್ತದೆ. ಒಬ್ಬರಿಗೆ ಕ್ಲೀನ್ ಮಾಡೋಕೆ 10 ರಸ್ತೆಗಳನ್ನು ನೀಡುತ್ತಾರೆ. ನಾವು ಒಂದು ವಾರದಲ್ಲಿ 10 ರಸ್ತೆ ಸ್ವಚ್ಛ ಮಾಡುತ್ತೇವೆ. ಕೆಲವರು ನಮಗೆ ನೀರು ಸಹ ಕೊಡಲ್ಲ. ಅದಕ್ಕೆ ನಮ್ಮ ನೀರು ತೆಗೆದುಕೊಂಡು ಬರುತ್ತೇವೆ ಎಂದರು.
ಈ ಎಲ್ಲಾ ಕೆಲಸ ಮಾಡೋಕೆ ಬೇಸರ ಆಗಲ್ಲವಾ ಎಂಬ ಪ್ರಶ್ನೆಗೆ, ಮನೆಯಲ್ಲಿ ಮಾಡುವಂತೆ ಇಲ್ಲಿಯೂ ಮಾಡುತ್ತೇವೆ. ನಮ್ಮ ಮಕ್ಕಳು ಗಲೀಜು ಮಾಡಿದ್ರೆ ಸ್ವಚ್ಛ ಮಾಡಲ್ಲವಾ? ಹಾಗೆಯೇ ಕೆಲಸ ಮಾಡುತ್ತೇವೆ. ಕೆಲಸ ಮಾಡಿಲ್ಲ ಅಂದ್ರೆ ಹೊಟ್ಟೆ ತುಂಬು ಬೇಕಲ್ಲವಾ? ಬೆಳಗ್ಗೆ 5 ಗಂಟೆಗೆ ಮನೆಯಿಂದ ಹೊರಡುತ್ತೇವೆ. ಬೆಳಗ್ಗೆ 6.30 ಮತ್ತು 10.30ಕ್ಕೆ ಎರಡು ಬಾರಿ ಪಂಚ್ ಮಾಡಬೇಕು. ಮಧ್ಯಾಹ್ನ 2 ಗಂಟೆಯವರೆಗೂ ಕೆಲಸ ಆಗುತ್ತದೆ ಎಂದು ಪೌರಕಾರ್ಮಿಕರು ಹೇಳಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ