ಶಿವಮೊಗ್ಗ ಭಾರತದ ಭಾಗವೋ, ಮುಸ್ಲಿಂ ಸಾಮ್ರಾಜ್ಯವೋ? ಪಾಕಿಸ್ತಾನ, ಸಾಬ್ರು ದ್ವಾರಬಾಗಿಲು ನಿರ್ಮಾಣ!

First Published | Oct 2, 2023, 5:37 PM IST

ಶಿವಮೊಗ್ಗ (ಅ.02): ಶಿವಮೊಗ್ಗ ನಗರದಲ್ಲಿ ಭಾನುವಾರ ಸಂಜೆ ನಡೆದ ಈದ್‌ ಮಿಲಾದ್‌ ಮೆರವಣಿಗೆಗೆ ಹಾಕಲಾಗಿದ್ದ ಬ್ಯಾನರ್‌ಗಳು, ಕಟೌಟ್‌ಗಳು ಹಾಗೂ ದ್ವಾರಬಾಗಿಲುಗಳು ಇದೇನು ಭಾರತದ ಭಾಗವೋ ಅಥವಾ ಪಾಕಿಸ್ತಾನದ ಭಾಗವೋ ಎಂಬ ಅನುಮಾನವನ್ನು ಹುಟ್ಟು ಹಾಕುವಂತಿದ್ದವು. ಒಂದು ದ್ವಾರದ ಮೇಲೆ ಔರಂಗಜೇಬ್‌ ಪಾಕಿಸ್ತಾನ ಒಳಗೊಂಡಂತೆ ಅಖಂಡ ಮುಸ್ಲಿಂ ಭಾರತದ ಪಟವನ್ನು ಅಳವಡಿಕೆ ಮಾಡಿದ್ದಾರೆ.

ಶಿವಮೊಗ್ಗದ ನಗರದ ಬಡಾವಣೆಯೊಂದಕ್ಕೆ ಅಖಂಡ ಭಾರತ ಸಾಮ್ರಾಜ್ಯ ಕಟ್ಟಿದ್ದ ಮಹಾನ್‌ ದೊರೆ ಔರಂಗಜೇಬ್‌ ಎಂದು ಪಾಕಿಸ್ತಾನ ಒಳಗೊಂದ ಭಾರತ ದೇಶದ ನಕ್ಷೆಯನ್ನು ಅಳವಡಿಕೆ ಮಾಡಲಾಗಿದೆ.

ಟಿಪ್ಪು ಸುಲ್ತಾನ್‌ ಹಿಂದೂ ವಿರೋಧಿ ನೀತಿ ಅನುಸರಿಸುತ್ತಾ ಹಿಂದೂ ಸೈನಿಕರನ್ನು ಕೊಂದು ಅವರ ಕಾಲಿಟ್ಟಿರುವ ಬೃಹತ್‌ ಕಟೌಟ್‌ ನಿರ್ಮಿಸಿ ಅಳವಡಿಸಲಾಗಿದೆ. 

Latest Videos


ಟಿಪ್ಪು ಸುಲ್ತಾನ್‌ ಖಡ್ಗವನ್ನು ಹಿಡಿದು ದಾಳಿ ಮಾಡುವಂತಹ ಸುಮಾರು 50 ಅಡಿ ಎತ್ತರದ ಬೃಹತ್‌ ಕಟೌಟ್‌ ನಿರ್ಮಾಣ ಮಾಡಿ ಅದರ ಮೇಲೆ ಮುಸ್ಲಿಂ ಬಾವುಟ ಅಳಡಿಸಲಾಗಿದೆ. 

ಈದ್‌ ಮಿಲಾದ್‌ ಹಬ್ಬದ ವೇಳೆ ಶಿವಮೊಗ್ಗ ನಗರದ ವೃತ್ತವೊಂದರಲ್ಲಿ ಬೃಹತ್‌ ಪ್ರಮಾಣದ ಮುಸ್ಲಿಂ ತಲ್ವಾರ್‌ ಅಳವಡಿಕೆ ಮಾಡಲಾಗಿತ್ತು. ಸುಮಾರು 25 ಅಡಿ ಉದ್ದದ ಖಡ್ಗವಾಗಿದೆ.

ಶಿವಮೊಗ್ಗ ನಗರದ ರಾಗಿಗುಡ್ಡ ಬಡಾವಣೆಯ ಪ್ರವೇಶ ದ್ವಾರಕ್ಕೆ ಸಾಬ್ರು ಸಾಮ್ರಾಜ್ಯ ಎಂದು ದೊಡ್ಡ ದ್ವಾರವನ್ನು ನಿರ್ಮಾಣ ಮಾಡಲಾಗಿದೆ.

ಶಿವಮೊಗ್ಗದಲ್ಲಿ ನಡೆದ ಈದ್‌ ಮಿಲಾದ್‌ ಹಬ್ಬದ ವೇಳೆ ನಗರದ ಮಧ್ಯ ಭಾಗದಲ್ಲಿಯೇ ಟಿಪ್ಪು ಸಾಮ್ರಾಜ್ಯ ಎಂದು ಬೃಹತ್‌ ಬ್ಯಾನರ್‌ ಅಳವಡಿಕೆ ಮಾಡಾಗಿತ್ತು.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪಟ್ಟಣದಲ್ಲಿ ಟಿಪ್ಪು ಸುಲ್ತಾನ್‌ ಹಾಗೂ ಔರಂಗಜೇಬ್‌ ಅವರ ಬೃಹತ್‌ ಕಟೌಟ್‌ಗಳನ್ನು ನಿರ್ಮಾಣ ಮಾಡಲಾಗಿದೆ.

ಶಿವಮೊಗ್ಗ ನಗರದಲ್ಲಿ ಔರಂಗಜೇಬ್‌ ದ್ವಾರ ಹಾಗೂ ಟಿಪ್ಪು ಸುಲ್ತಾನ್‌ ಖಡ್ಗವನ್ನು ಹಿಡಿದು ಕುದುರೆ ಸವಾರಿ ಮಾಡುತ್ತಿರುವ ಬ್ಯಾನರ್‌ ಅಳವಡಿಸಲಾಗಿದೆ.

ಶಿವಮೊಗ್ಗದ ಗಾಂಧಿ ನಗರದಲ್ಲಿ ಭಾನುವಾರ ಸಂಜೆ ನಡೆದ ಈದ್‌ ಮಿಲಾದ್‌ ಹಬ್ಬದ ಮೆರವಣಿಗೆಯಲ್ಲಿ ಖಡ್ಗ ಪ್ರದರ್ಶನ ಮಾಡಿದ ಯುವಕರ ಗುಂಪು.

ಶಿವಮೊಗ್ಗ ಪ್ರಮುಖ ಬೀದಿಗಳಲ್ಲಿ ಭಾನುವಾರ ಸಂಜೆ ನಡೆದ ಈದ್‌ ಮಿಲಾದ್‌ ಮೆರವಣಿಗೆಯಲ್ಲಿ ಹಸಿರು ಬಾವುಟ, ಹಸಿರು ಮಂದಿರ ಹಾಗೂ ತಲ್ವಾರ್‌ ಪ್ರದರ್ಶನ ಮಾಡಲಾಯಿತು.

ಶಿವಮೊಗ್ಗ ನಗರದ ಪ್ರಮುಖ ವೃತ್ತವೊಂದರಲ್ಲಿ ಹಸಿರು ಬಟ್ಟೆಯಿಂದ ಗೋಪುರವನ್ನು ನಿರ್ಮಾಣ ಮಾಡಲಾಗಿದ್ದು, ಬೃಹತ್‌ ಮೆರವಣಿಗೆ ಮಾಡಲಾಗಿದೆ.

click me!