ಬೆಂಗ್ಳೂರಲ್ಲಿ ಜೋರಾದ ಕಾವೇರಿ ಕಿಚ್ಚು: ಪ್ರತಿಭಟನೆ ವೇಳೆ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಮುಂದಾದ ಅನ್ನದಾತ

Published : Sep 26, 2023, 01:32 PM ISTUpdated : Sep 26, 2023, 01:50 PM IST

ಬೆಂಗಳೂರು(ಸೆ.26): ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿದ ವಿವಿಧ ಕನ್ನಡ ಪರ ಸಂಘಟನೆಗಳು ಹಾಗೂ ರೈತರು ಇಂದು(ಮಂಗಳಾವರ) ಬೆಂಗಳೂರು ಬಂದ್‌ಗೆ ಕರೆ ನೀಡಿವೆ. ಹೀಗಾಗಿ ಇಂದು ಬೆಂಗಳೂರಿನಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನ ಕೂಗಿ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.    

PREV
110
ಬೆಂಗ್ಳೂರಲ್ಲಿ ಜೋರಾದ ಕಾವೇರಿ ಕಿಚ್ಚು: ಪ್ರತಿಭಟನೆ ವೇಳೆ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಮುಂದಾದ ಅನ್ನದಾತ

ಇನ್ನು ಇಂದಿನ ಬೆಂಗಳೂರು ಬಂದ್‌ ಹಾಗೂ ಕಾವೇರಿ ಹೋರಾಟಕ್ಕೆ ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್‌ ಸೇರಿದಂತೆ, ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘ, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳು ಬೆಂಬಲ ಸೂಚಿಸಿವೆ.(ಚಿತ್ರ ಕೃಪೆ: ರವಿ, ಕನ್ನಡಪ್ರಭ)

210

ರೈತ ಮುಖಂಡ ಕುರುಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ ಇಂದು ಬೆಂಗಳೂರ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಗೆ ನೂರಾರು ಜನರು ಬೆಂಬಲಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.(ಚಿತ್ರ ಕೃಪೆ: ರವಿ, ಕನ್ನಡಪ್ರಭ)

310

ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯುತ್ತಿರುವ ಹಿನ್ನಲೆಯಲ್ಲಿ ಧರಣಿ ನಡೆಯುವ ಸ್ಥಳದ ಸುತ್ತಮುತ್ತ ಭಾರೀ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿದೆ. ಪೋಲೀಸರು ಬ್ಯಾರಿಕೇಡ್‌ ಹಾಕಿ ಬಿಗಿ ಬಂದೋಬಸ್ತ್‌ ಕಲ್ಪಿಸಿದ್ದಾರೆ. (ಚಿತ್ರ ಕೃಪೆ: ರವಿ, ಕನ್ನಡಪ್ರಭ)

410

ಪ್ರತಿಭಟನೆಯಲ್ಲಿ ಕರ್ನಾಟಕದ ಸಾಹಿತಿಗಳನ್ನ ಫೋಟೋಗಳನ್ನ ಬೈಕಿನಲ್ಲಿ ಹಾಕಿಕೊಂಡು ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ. (ಚಿತ್ರ ಕೃಪೆ: ರವಿ, ಕನ್ನಡಪ್ರಭ)

510

ನಡುರಸ್ತೆಯಲ್ಲೇ ತಿಂಡಿ ಸವಿಯುವ ಮೂಲಕ ಯಾವುದೇ ಕಾರಣಕ್ಕೆ ಕಾವೇರಿಯನ್ನ ಬಿಟ್ಟುಕೊಡಲ್ಲ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರಕ್ಕೆ ಸಂದೇಶ ರವಾನಿಸಿದ್ದಾರೆ.(ಚಿತ್ರ ಕೃಪೆ: ರವಿ, ಕನ್ನಡಪ್ರಭ)

610

ನಾವು ಗಲಾಟೆ ಮಾಡಲ್ಲ ಶಾಂತಿ ರೀತಿಯಲ್ಲಿ ಪ್ರತಿಭಟನೆ ಮಾಡುತ್ತೇವೆ. ಸಾಮಾಜಘಾತುಕ ಶಕ್ತಿಗಳು ದುಷ್ಕೃತ್ಯ ಮಾಡಿದ್ರೆ ಅವರನ್ನು ಬಂಧಿಸಿ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ. ನಾವು ರೈತರ ಋಣ ತೀರಿಸೋಕೆ ಕೆಲಸ ಮಾಡುತ್ತಿದ್ದೇವೆ. ಎಲ್ಲಾ ಪಕ್ಷಗಳು ನಮಗೆ ಸಹಕಾರ ಕೊಟ್ಟಿವೆ. ನಾವು ಸರ್ಕಾರಕ್ಕೆ ಪಾಠ ಕಲಿಸೇ ಕಲಿಸುತ್ತೇವೆ. ಕರ್ನಾಟಕದ ರೈತರು ಬೀದಿಗಿಳಿದ್ರೆ, ಎಲ್ಲಾವನ್ನು ಸರ್ಕಾರ ನೋಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.(ಚಿತ್ರ ಕೃಪೆ: ರವಿ, ಕನ್ನಡಪ್ರಭ)

710

ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್‌ ಅವರ ಸ್ನೇಹ, ಪ್ರೀತಿಗಾಗಿ ಕರ್ನಾಟಕ ಜನರನ್ನು ಬಲಿಕೊಡಬೇಡಿ ಎಂದು ರಾಜ್ಯ ಸರ್ಕಾರವನ್ನ ಕುರುಬೂರು ಶಾಂತಕುಮಾರ್ ತರಾಟೆಗೆ ತೆಗೆದುಕೊಂಡಿದ್ದಾರೆ. (ಚಿತ್ರ ಕೃಪೆ: ರವಿ, ಕನ್ನಡಪ್ರಭ)

810

ಸರ್ಕಾರ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಇದಕ್ಕೆ ಜನರೇ ಬುದ್ಧಿ ಕಲಿಸುತ್ತಾರೆ. ಈ ಸರ್ಕಾರ ರಾತ್ರೋ ರಾತ್ರಿ ಕದ್ದುಮುಚ್ಚಿ ನೀರನ್ನು ಬಿಡುತ್ತಿದೆ. ಇದು ತಮಿಳುನಾಡು ಸರ್ಕಾರದ ಏಜೆಂಟ್‌ ಸರ್ಕಾರ ಇದಾಗಿದೆ ಎಂದು ಕುರುಬೂರು ಶಾಂತಕುಮಾರ್‌ ಹೇಳಿದ್ದಾರೆ. ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ರೈತರೊಂದಿಗೆ ರಸ್ತೆಯಲ್ಲೇ ತಿಂಡಿ ಮಾಡಿ ವಿನೂತನ ಪ್ರತಿಭಟನೆ ಮಾಡಿದ ಕುರುಬೂರು ಶಾಂತಕುಮಾರ್. (ಚಿತ್ರ ಕೃಪೆ: ರವಿ, ಕನ್ನಡಪ್ರಭ)

910

ಪ್ರತಿಭಟನೆಯ ಮಧ್ಯೆ ರೈತರೊಬ್ಬರು ಮರಕ್ಕೆ ನೇಣು ಬಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು. ತಕ್ಷ ಪೊಲೀಸರು ರೈತರು ಸಮಾಧಾನ ಪಡಿಸಿ ರೈತರನ್ನು ಆತ್ಮಹತ್ಯೆ ಮಾಡಿಕೊಳ್ಳುವುದರನ್ನು ತಡೆದಿದ್ದಾರೆ. (ಚಿತ್ರ ಕೃಪೆ: ರವಿ, ಕನ್ನಡಪ್ರಭ)

1010

ಕಾವೇರಿ ಉಳಿಸಿ ಎಂದು ಘೋಷಣೆಯನ್ನ ಕೂಗಿ ರಸ್ತೆಯಲ್ಲಿ ಮಲಗಿ ರೈತರು ಪ್ರತಿಭಟನೆಯನ್ನ ನಡೆಸಿದ್ದಾರೆ. ಇನ್ನು ಕೆಲವು ರೈತರು ಅರೆಬೆತ್ತಲೆ ಮೆರವಣಿಗೆ ಮಾಡುವ ಮೂಲಕ ರಾಜ್ಯ ಸರ್ಕಾರ ಕಣ್ಣು ತೆರೆಸುವ ಪ್ರಯತ್ನ ಮಾಡಿದ್ದಾರೆ. (ಚಿತ್ರ ಕೃಪೆ: ರವಿ, ಕನ್ನಡಪ್ರಭ)

Read more Photos on
click me!

Recommended Stories