ಕೋಟಿ ಬೆಲೆಬಾಳುವ ಲ್ಯಾಂಬೋರ್ಗಿನಿ ಕಾರಿದ್ದರೇನು? ಆರ್‌ಟಿಒ ಅಧಿಕಾರಿಗಳ ಮುಂದೆ ಮಂಡಿಯೂರಿದ ಮಾಲೀಕ!

Published : Dec 19, 2025, 05:35 PM IST

ಕೋಟಿ ಕೋಟಿ ಬೆಲೆಬಾಳುವ ಲಕ್ಸುರಿ ಲ್ಯಾಂಬೋರ್ಗಿನಿ ಕಾರಿನ ಮಾಲೀಕ ಸಾರಿಗೆ ಇಲಾಖೆ ಅಧಿಕಾರಿಗಳ ಮುಂದೆ ಮಂಡಿಯೂರಿದ್ದಾನೆ. ಮುಂದಿನ 15 ದಿನದಲ್ಲಿ ಸೈಲೆನ್ಸರ್ ಚೇಂಜ್ ಮಾಡಿಕೊಂಡು ಬರದಿದ್ದರೆ ನಿಮ್ಮ ಕಾರಿನ ರಿಜಿಸ್ಟ್ರೇಷನ್ ಕ್ಯಾನ್ಸಲ್ ಮಾಡೋ ಎಚ್ಚರಿಕೆ ನೀಡಿದ್ದಾರೆ. 

PREV
15
ಐಷಾರಾಮಿ ಕಾರಿಗೆ 8,500 ದಂಡ

ಬೆಂಗಳೂರು/ಮೈಸೂರು (ಡಿ.19): ರಸ್ತೆಯಲ್ಲಿ ಹೋಗುವಾಗ ಹತ್ತಾರು ಜನರ ಗಮನ ಸೆಳೆಯಬೇಕು ಎಂಬ ಹಪಾಹಪಿಗೆ ಬಿದ್ದು ಐಷಾರಾಮಿ ಕಾರಿನ ಸೈಲೆನ್ಸರ್ ಆಲ್ಟರೇಷನ್ ಮಾಡಿಸಿ ಸೌಂಡ್ ಮಾಡುತ್ತಿದ್ದ ಲ್ಯಾಂಬೋರ್ಗಿನಿ ಕಾರು ಮಾಲೀಕನಿಗೆ ಸಾರಿಗೆ ಇಲಾಖೆ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಕರ್ಕಶ ಶಬ್ದ ಮಾಡುತ್ತಾ ಬೆಂಗಳೂರಿನಿಂದ ಮೈಸೂರಿಗೆ ತೆರಳಿದ್ದ ಹಸಿರು ಬಣ್ಣದ ಲ್ಯಾಂಬೋರ್ಗಿನಿ ಕಾರನ್ನು ಅಧಿಕಾರಿಗಳು ವಶಕ್ಕೆ ಪಡೆದು ದಂಡ ವಿಧಿಸಿದ್ದಾರೆ.

25
ಘಟನೆಯ ಹಿನ್ನೆಲೆ

ಹಸಿರು ಬಣ್ಣದ ಈ ಐಷಾರಾಮಿ ಲ್ಯಾಂಬೋರ್ಗಿನಿ ಕಾರಿನ ಮೂಲ ಸೈಲೆನ್ಸರ್ ಬದಲಾಯಿಸಿ, ಮಾರ್ಪಾಡು ಮಾಡಲಾಗಿತ್ತು. ಇದು ರಸ್ತೆಯಲ್ಲಿ ಚಲಿಸುವಾಗ ಸಾಮಾನ್ಯಕ್ಕಿಂತ ಹೆಚ್ಚಿನ ಕರ್ಕಶ ಶಬ್ದ (Loud Exhaust) ಮಾಡುತ್ತಿತ್ತು. ಬೆಂಗಳೂರಿನ ರಸ್ತೆಗಳಲ್ಲಿ ಅತಿಯಾದ ಶಬ್ದ ಮಾಡುತ್ತಾ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದ ಈ ಕಾರಿನ ಮೇಲೆ ಆರ್‌ಟಿಒ ಅಧಿಕಾರಿಗಳು ಕಣ್ಣಿಟ್ಟಿದ್ದರು.

35
ಮೈಸೂರಿನಲ್ಲಿ ಕಾರು ವಶ

ಕಾರು ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದೆ ಎಂಬ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಆರ್‌ಟಿಒ ಅಧಿಕಾರಿಗಳು ಕಾರನ್ನು ಬೆನ್ನಟ್ಟಿದ್ದಾರೆ. ಮೈಸೂರಿನಲ್ಲಿ ಕಾರನ್ನು ತಡೆದು ನಿಲ್ಲಿಸಿದ ಅಧಿಕಾರಿಗಳು, ನಿಯಮ ಉಲ್ಲಂಘನೆಗಾಗಿ ಅದನ್ನು ವಶಕ್ಕೆ ಪಡೆದಿದ್ದಾರೆ. ಕಾರಿನ ಎಕ್ಸಾಸ್ಟ್ ವ್ಯವಸ್ಥೆಯಲ್ಲಿ ಮಾಡಲಾಗಿದ್ದ ಅನಧಿಕೃತ ಬದಲಾವಣೆ ಸಾರಿಗೆ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

45
ದಂಡ ಮತ್ತು ಕಟ್ಟುನಿಟ್ಟಿನ ಷರತ್ತು

ಇನ್ನು ಕೋಟಿ ಕೋಟಿ ಬೆಲೆಬಾಳುವ ಕಾರಿನ ಮಾಲೀಕನಿಗೆ ವಿಧಿಸಲಾದ 8,500 ರೂಪಾಯಿ ದಂಡವನ್ನು ಸುಲಭವಾಗಿ ಪಾವತಿಸಿದ್ದಾರೆ. ಜೊತೆಗೆ ದಂಡ ಪಾವತಿಸಿದ ನಂತರ ಕಾರನ್ನು ಮಾಲೀಕನಿಗೆ ವಾಪಸ್ ನೀಡಲಾಗಿದೆಯಾದರೂ, ಅಧಿಕಾರಿಗಳು ಕಠಿಣ ಷರತ್ತನ್ನು ವಿಧಿಸಿದ್ದಾರೆ.

55
ಮೂಲ ಸೈಲೆನ್ಸರ್ ಅಳವಡಿಸಲು ತಾಕೀತು

'ಮುಂದಿನ 15 ದಿನಗಳ ಒಳಗಾಗಿ ಆಲ್ಟರೇಷನ್ ಮಾಡಲಾದ ಸೈಲೆನ್ಸರ್ ತೆಗೆದು, ಮೂಲ ಸೈಲೆನ್ಸರ್ ಅಳವಡಿಸಬೇಕು. ಬಳಿಕ ಕಾರನ್ನು ಆರ್‌ಟಿಒ ಕಚೇರಿಗೆ ತಂದು ತೋರಿಸಬೇಕು' ಎಂದು ಅಧಿಕಾರಿಗಳು ಗಡುವು ನೀಡಿದ್ದಾರೆ. ಒಂದು ವೇಳೆ ಈ ಷರತ್ತು ಪಾಲಿಸದಿದ್ದರೆ ಕಾರಿನ ನೋಂದಣಿ ರದ್ದುಪಡಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ.

Read more Photos on
click me!

Recommended Stories