ಆರ್‌ಸಿಬಿ ವಿಜಯೋತ್ಸವದ ಕಾರ್ಯಕ್ರಮಕ್ಕೆ ಲೋಕೋಪಯೋಗಿ ಇಲಾಖೆ ಯಾವುದೇ ಅನುಮತಿ ನೀಡಿಲ್ಲ, ಅನುಮತಿ ನೀಡದೇ ಇರುವ ಬಗ್ಗೆ ಮಾಹಿತಿ ಹಕ್ಕು ಅಧಿನಿಯಮದಡಿ ಲೋಕೋಪಯೋಗಿ ಇಲಾಖೆ ಉತ್ತರವನ್ನು ನೀಡಿದೆ.
ಬೆಂಗಳೂರು (ಜು.18): ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ 11 ಮಂದಿ ಮೃತಪಟ್ಟ ಪ್ರಕರಣ ಸಂಬಂಧಪಟ್ಟಂತೆ ಒಂದು ಕಡೆ ಸಚಿವ ಸಂಪುಟ ಸಭೆಗೆ ನ್ಯಾ. ಮೈಕಲ್ ಡಿ ಕುನ್ಹಾ ವಿಚಾರಣ ಆಯೋಗದ ವರದಿ ಸಲ್ಲಿಕೆಯಾಗಿದ್ದು, ಇತ್ತ ಚಿನ್ನಸ್ವಾಮಿ ಸ್ಟೇಡಿಯಂನ ಮತ್ತೊಂದು ಶಾಕಿಂಗ್ ವಿಷಯ ಬಯಲಾಗಿದೆ.
26
ಹೌದು! ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭ್ರಮಾಚರಣೆ ಆಚರಿಸಲು ಅನುಮತಿಯೇ ಪಡೆದಿಲ್ಲ. ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಜೊತೆ ಕೆಎಸ್‌ಸಿಎ ಕರಾರು ಒಪ್ಪಂದ ಇದೆ. ಕರಾರು ಒಪ್ಪಂದದಂತೆ ಇಲಾಖೆಯಿಂದ ಅನುಮತಿ ಪಡೆಯಬೇಕು ಎಂಬ ನಿಯಮ ಇದೆ.
36
ಆದರೆ ಆರ್‌ಸಿಬಿ ವಿಜಯೋತ್ಸವದ ಕಾರ್ಯಕ್ರಮಕ್ಕೆ ಲೋಕೋಪಯೋಗಿ ಇಲಾಖೆ ಯಾವುದೇ ಅನುಮತಿ ನೀಡಿಲ್ಲ, ಅನುಮತಿ ನೀಡದೇ ಇರುವ ಬಗ್ಗೆ ಮಾಹಿತಿ ಹಕ್ಕು ಅಧಿನಿಯಮದಡಿ ಲೋಕೋಪಯೋಗಿ ಇಲಾಖೆ ಉತ್ತರವನ್ನು ನೀಡಿದೆ.
ಸಾಮಾಜಿಕ ಕಾರ್ಯಕರ್ತ ಮರಿಲಿಂಗೇಗೌಡ ಮಾಲಿ ಪಾಟೀಲ್ ಸಲ್ಲಿಸಿದ್ದ, ಆರ್‌ಟಿಐ ಅರ್ಜಿಗೆ ಲೋಕೋಪಯೋಗಿ ಇಲಾಖೆಯು ಯಾವುದೇ ಅನುಮತಿಯನ್ನು ನೀಡಿಲ್ಲ ಎಂದು ಉತ್ತರ ನೀಡಿದೆ.
56
ಲೋಕೋಪಯೋಗಿ ಇಲಾಖೆಯ ಅನುಮತಿಯನ್ನೇ ಪಡೆಯದ ಕೆಎಸ್‌ಸಿಎಯಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿಗೆ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸೋಕೆ ಅನುಮತಿ ನೀಡಿದ್ದು ಯಾರು..? ಅನುಮತಿ ಇಲ್ಲದೆ ನಡೆದ ಕಾರ್ಯಕ್ರಮದಿಂದಾಗಿ 11 ಜನರ ಸಾವಾಗಿದೆ.
66
ಇನ್ನು ನಿಯಮಗಳನ್ನು ಉಲ್ಲಂಘಿಸಿ ಸ್ಟೇಡಿಯಂ ನಲ್ಲಿ ಸೆಲೆಬ್ರೇಶನ್ ಮಾಡಿದ್ದ ಕೆಎಸ್‌ಸಿಎ ಮೇಲೆ ಸರ್ಕಾರ ಕ್ರಮ ಕೈಗೊಳ್ಳುತ್ತಾ..? ಒಪ್ಪಂದವನ್ನು ಮೀರಿ ನಡೆದುಕೊಂಡಿರುವ ಕೆಎಸ್‌ಸಿಎ ವಿರುದ್ಧ ಲೋಕೋಪಯೋಗಿ ಇಲಾಖೆ ಕ್ರಮಕ್ಕೆ ಮುಂದಾಗುತ್ತಾ..? ಎಂದು ಕಾದು ನೋಡಬೇಕಿದೆ.