ಹೊನ್ನವಳ್ಳಿಯಲ್ಲಿ ಗುರುವಾರ ರಾತ್ರಿ ಅಭಿಮಾನಿಗಳು ಪ್ರತಿಷ್ಠಾಪಿಸಿದ್ದ ನಟ ದಿವಂಗತ ಪುನೀತ್ ರಾಜ್‌ಕುಮಾರ್ ಪುತ್ಥಳಿ. ಪ್ರತಿಷ್ಠಾಪನೆಗೆ ಮುನ್ನ ಅನುಮತಿ ಕೋರಿ ಡಿ.18 ರಂದು ಕನ್ನಡ ರಕ್ಷಣಾ ವೇದಿಕೆ ಅಪ್ಪು ಸೇನೆಯಿಂದ ಗ್ರಾಮ ಪಂಚಾಯ್ತಿಗೆ ಮನವಿ ಸಲ್ಲಿಸಿದ್ದರು. ಆದರೆ ಮನವಿ ನಿರಾಕರಿಸಿದ್ದ ಪಂಚಾಯ್ತಿ.
ಪಂಚಾಯ್ತಿಯಿಂದ ಅನುಮತಿ ಸಿಗದ ಹಿನ್ನೆಲೆ ಗುರುವಾರ ಮಧ್ಯರಾತ್ರಿ ಪುನೀತ್ ರಾಜ ಕುಮಾರ ಪುತ್ಥಳಿ ಅನಾವರಣಗೊಳಿಸಿದ್ದ ಅಭಿಮಾನಿಗಳು. ಆದರೆ ಬೆಳಗಿನ ಜಾವ ಪೂಜೆ ಮಾಡಲು ತೆರಳುವಷ್ಟರಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪುತ್ಥಳಿ ತೆರವುಗೊಳಿಸಿದ್ದ ಪೋಲಿಸರು ಬಳಿಕ ಹೊನ್ನವಳ್ಳಿ ಗ್ರಾ.ಪಂ ಗೆ ಪುತ್ಥಳಿಯನ್ನು ಹಸ್ತಾಂತರ ಮಾಡಿದ್ದಾರೆ.
ಈ ಘಟನೆಯಿಂದ ಗ್ರಾಮಸ್ಟರು, ಅಪ್ಪು ಅಭಿಮಾನಿಗಳು ಪಂಚಾಯ್ತಿ, ಪೊಲೀಸರ ವಿರುದ್ಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪ್ಪು ಪುತ್ಥಳಿ ತೆರವುಗೊಳಿಸಿದ್ದರಿಂದ ಕನ್ನಡ ರಕ್ಷಣಾ ವೇದಿಕೆ ಅಪ್ಪು ಅಭಿಮಾನಿಗಳು, ಗ್ರಾಮಸ್ಥರು ಕಿಡಿಕಾರಿದ್ದಾರೆ.