ಸರ್ಕಾರ-ಅಧಿಕಾರಿಗಳ ವಿರುದ್ಧ ಹಿಡಿಶಾಪ:
ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನಿಂದ ಕೂಗಳತೆ ದೂರದಲ್ಲಿರೋ ಅಂಬಾತೀರ್ಥ ಗ್ರಾಮದಲ್ಲಿ ಜನರು ಇಂದಿಗೂ ಮೂಲಭೂತ ಸೌಲಭ್ಯಗಳಿಲ್ಲದೇ ಜನರು ಪರದಾಟ ನಡೆಸುತ್ತಿದ್ದಾರೆ..ಇಲ್ಲಿ ಸುಮಾರು 25 ಮನೆಗಳಿವೆ. ಅಂಬಾತೀರ್ಥ ಪ್ರವಾಸಿ ತಾಣ. ನಿತ್ಯಾ ನೂರಾರು ಜನ ಬಂದೋಗೋ ಜಾಗ. ಕಳಸ-ಹೊರನಾಡಿಗೆ ಬಂದ ಬಹುತೇಕರು ಇಲ್ಲಿಗೆ ಬರ್ದೆ ಹೋಗಲ್ಲ. ಹಾಗಾಗಿ, ವಾಹನಗಳು ಓಡಾಡಿ-ಓಡಾಡಿ ರಸ್ತೆ ಹೇಳ ಹೆಸರಿಲ್ಲದಂತಾಗಿದೆ. ಹಾಗಾಗಿ, ಹಳ್ಳಿಗರೇ ಹಣ ಹಾಕಿಕೊಂಡು ಕೆಲಸ ಬಿಟ್ಟು ರಸ್ತೆ ಬದಿಯಲ್ಲಿ ಚರಂಡಿ ನಿರ್ಮಿಸಿಕೊಂಡು ರಸ್ತೆ ಮಾಡಿಕೊಂಡಿದ್ದಾರೆ. ಇನ್ನಾರು ತಿಂಗಳು ನೋ ಪ್ರಾಬ್ಲಂ. ಆದ್ರೆ, ದಾಖಲೆ ಮಳೆ ಬೀಳೋ ಕಳಸದಲ್ಲಿ ಮಳೆಗಾಲ ಆರಂಭವಾದ್ರೆ ಜಸ್ಟ್ ಟು ಡೇಸ್ ಏನೂ ಉಳಿಯಲ್ಲ. ಮತ್ತದೇ ಗುಂಡಿ-ಗೊಟರು ರಸ್ತೆ. ಹಾಗಾಗಿ, ಇಲ್ಲಿನ ಸರ್ಕಾರ-ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕ್ತಿದ್ದಾರೆ.
ಕುಡಿಯುವ ನೀರಿಗಾಗಿ ಹರಸಾಹಸ
ಇಲ್ಲೇ ಹುಟ್ಟಿ. ಇಲ್ಲೇ ಬೆಳ್ದೋರು. ಎಲ್ಲರ ಬಳಿಯೂ ಆಧಾರ್, ಪಾನ್ ಕಾರ್ಡ್, ವೋಟರ್ ಐಡಿ ಎಲ್ಲಾ ಇದೆ. ಓಟು ಹಾಕ್ತಾರೆ. ಅದೇ ರೀತಿ ನಿತ್ಯ ಕೂಲಿ ಮಾಡಿ ಬಂದು ನೀರು ಹೊರ್ತಾರೆ. ಹಳ್ಳೀಲಿ ಒಂದಲ್ಲ-ಎರಡಲ್ಲ ಮೂರು ಟ್ಯಾಂಕ್ಗಳಿವೆ. ಆದ್ರೆ, ನೀರು ಮಾತ್ರ ಇಲ್ಲ. ಹಾಗಾಗಿ, ಇಲ್ಲಿನ ಜನ ನಿತ್ಯ ಕೆಲಸ ಮಾಡ್ಕೊಂಡು ಬಂದು ಇಂದಿಗೂ ಸಂಜೆ ನೀರು ಹೊತ್ಕೊಂಡು ಬರ್ತಿದ್ದಾರೆ. ಈ ಬಗ್ಗೆ ಸ್ಥಳಿಯರು ಹತ್ತಾರು ಪಂಚಾಯಿತಿ, ಜನನಾಯಕರು, ಅಧಿಕಾರಿಗಳಿಗೆ ನೀರು-ರಸ್ತೆಗಾಗಿ ಮನವಿ ಮಾಡಿದ್ದಾರೆ. ಆದ್ರೆ, ನೋ ಯೂಸ್. ನೋಡ್ತೀವಿ. ಮಾಡ್ತೀವಿ ಅನೋ ಅಧಿಕಾರಿಗಳು ಮಾಡ್ತಾನೆ ಇದ್ದಾರೆ.
ಕುಡಿಯೋಕೆ ಹನಿ ನೀರಿಗೂ ಪರದಾಟ
ಎಲೆಕ್ಷನ್ ಟೈಮಲ್ಲಿ ಬರೋ ಜನನಾಯಕರು ಹಳ್ಳಿಗರ ಕಷ್ಟ ಕೇಳಿ ಬಂದ ದಾರಿಗೆ ಸುಂಕ ಇಲ್ಲ ಅಂದೋರೆ ಹೆಚ್ಚು. ಹಾಗಾಗಿ, ಇಲ್ಲಿನ ಕೂಲಿ ಕಾರ್ಮಿಕರು ಜನನಾಯಕರು, ಅಧಿಕಾರಿಗಳ ವಿರುದ್ಧ ಹೋರಾಡೋಕೆ ಶಕ್ತಿ ಇಲ್ದೆ ತಮ್ಮೂರಿನ ಕೆಲಸವನ್ನ ತಾವೇ ಮಾಡ್ಕೊಂಡು ದಿನದೂಡುತ್ತಿದ್ದಾರೆ ಒಟ್ಟಾರೆ, ನಾಡಂಚಿನ ಕುಗ್ರಾಮದ ಜನಕ್ಕೆ ಕುಡಿಯೋಕೆ ನೀರು, ಓಡಾಡೋದಕ್ಕೆ ರಸ್ತೆಯೇ ಇಲ್ಲ ಅಂದ್ರೆ ಈ ಗ್ಯಾರಂಟಿ ಸರ್ಕಾರ ಮತ್ತೈದು ಗ್ಯಾರಂಟಿ ಕೊಟ್ರು ಜನರ ಬದುಕು ಬದಲಿಸಲು ಸಾಧ್ಯವಿಲ್ಲ.
ಕಾಫಿನಾಡು ಅಂದ್ರೆನೇ ಟೂರಿಸಂ. ಎಕೋ ಟೂರಿಸಂ. ಆದ್ರೆ, ಆ ಟೂರಿಸಂ ಜಿಲ್ಲೆಯಲ್ಲಿ ಹಳ್ಳಿಗರ ಜೊತೆ ಪ್ರವಾಸಿಗರಿಗೂ ಓಡಾಡೋದಕ್ಕೆ ರಸ್ತೆ ಇಲ್ಲ ಅಂದ್ರೆ ಟೂರಿಸಂ ಅಭಿವೃದ್ಧಿಯ ಬಗ್ಗೆಯೇ ಸಂದೇಹಗಳು ಮೂಡುತ್ತಿವೆ. ವೇದಿಕೆ ಮೇಲೆ ಕರೆಂಟ್, ಬಸ್, ದುಡ್ಡು ಕೊಟ್ವಿ ಅಂತ ಹೇಳೋ ಸರ್ಕಾರ ರಾಜ್ಯದಲ್ಲಿ ಎಲ್ಲೂ ಜನ ನೀರು-ರಸ್ತೆ ಇಲ್ದೆ ಇಲ್ಲ ಅಂತ ಮತ್ತದೇ ವೇದಿಕೆ ಮೇಲೆ ಘಂಟಾಘೋಷವಾಗಿ ಹೇಳುವಂತಾದ್ರೆ ಸಾಕು.
ವರದಿ :ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು