Cine World

ಪುನೀತ್ ರಾಜ್‌ಕುಮಾರ್ ಅವರ ಟಾಪ್ ತೆಲುಗು ರಿಮೇಕ್‌ಗಳು

ಪುನೀತ್ ರಾಜಕುಮಾರ್ ಅವರ ಸಿನಿಮಾ ಬಿಡುಗಡೆಯಾಗುತ್ತೆಂದರೆ ಥಿಯೇಟರ್ ಮುಂದೆ ಹಬ್ಬದ ವಾತಾವರಣ ಇರುತ್ತಿತ್ತು. ಪುನೀತ್ ನಟನೆ, ನೃತ್ಯ, ನಗು ಮನಸೋಲುವಂತೆ ಮಾಡುತ್ತಿತ್ತು.

Image credits: our own

ರಾಮ್ - ರೆಡಿ

ಎನರ್ಜಿಟಿಕ್ ಸ್ಟಾರ್ ರಾಮ್ ನಟಿಸಿದ ರೆಡಿ ಚಿತ್ರವನ್ನು ಪುನೀತ್ ಕನ್ನಡದಲ್ಲಿ ರಾಮ್ ಹೆಸರಿನಲ್ಲಿ ರಿಮೇಕ್ ಮಾಡಿದ್ದಾರೆ. ಕನ್ನಡದಲ್ಲೂ ಈ ಚಿತ್ರ ಭರ್ಜರಿ ಯಶಸ್ಸು ಗಳಿಸಿದೆ.

Image credits: our own

ಪವರ್ - ದೂಕುಡು

ಮಹೇಶ್ ಬಾಬು ಅವರ ವೃತ್ತಿಜೀವನದ ದೊಡ್ಡ ಹಿಟ್ ಚಿತ್ರಗಳಲ್ಲಿ ಒಂದಾದ ದೂಕುಡು. ಈ ಚಿತ್ರವನ್ನು ಪುನೀತ್ ಪವರ್ ಹೆಸರಿನಲ್ಲಿ ರಿಮೇಕ್ ಮಾಡಿ ಬ್ಲಾಕ್‌ಬಸ್ಟರ್ ಹೊಡೆದರು.

Image credits: our own

ಅಜಯ್ - ಒಕ್ಕಡು

ಮಹೇಶ್ ಬಾಬು ಅವರ ವೃತ್ತಿಜೀವನವನ್ನು ತಿರುಗಿಸಿದ ಒಕ್ಕಡು ಚಿತ್ರವನ್ನು ಪುನೀತ್ ರಾಜ್‌ಕುಮಾರ್ ಕನ್ನಡದಲ್ಲಿ ರಿಮೇಕ್ ಮಾಡಿದ್ದಾರೆ. ಅಜಯ್ ಎಂಬ ಶೀರ್ಷಿಕೆಯಡಿಯಲ್ಲಿ ಪುನೀತ್ ನಟಿಸಿದ ಚಿತ್ರ ಸೂಪರ್ ಹಿಟ್ ಆಯಿತು.

Image credits: our own

ವೀರ ಕನ್ನಡಿಗ - ಆಂಧ್ರಾವಾಲ

ಎನ್‌ಟಿಆರ್‌ರ ಆಂಧ್ರಾವಾಲ ಚಿತ್ರವನ್ನು ಕನ್ನಡದಲ್ಲಿ ವೀರ ಕನ್ನಡಿಗ ಎಂದು ನಿರ್ಮಿಸಲಾಯಿತು. ಈ ಎರಡೂ ಚಿತ್ರಗಳು ಒಟ್ಟಿಗೆ ಬಿಡುಗಡೆಯಾದವು. ಟ್ವಿಸ್ಟ್ ಏನೆಂದರೆ ಕನ್ನಡದಲ್ಲಿ ಈ ಚಿತ್ರ ಸೂಪರ್ ಹಿಟ್.ಆಯ್ತು!

Image credits: our own

ಮೌರ್ಯ - ಅಮ್ಮ ನಾನ್ನ ಓ ತಮಿಳ ಅಮ್ಮಾಯಿ

ಪುನೀತ್ ರಾಜ್‌ಕುಮಾರ್ ಪೂರಿ ಜಗನ್ನಾಥ್ ಚಿತ್ರಗಳನ್ನು ಹೆಚ್ಚಾಗಿ ರಿಮೇಕ್ ಮಾಡಿದ್ದಾರೆ. ಅವುಗಳಲ್ಲಿ ಅಮ್ಮ ನಾನ್ನ ಓ ತಮಿಳ ಅಮ್ಮಾಯಿ ಒಂದು. ಈ ಚಿತ್ರವನ್ನು ಮೌರ್ಯ ಎಂಬ ಶೀರ್ಷಿಕೆಯಡಿಯಲ್ಲಿ ರಿಮೇಕ್ ಮಾಡಲಾಗಿದೆ.

Image credits: our own

ಉಪ್ಪಿ ಯುಐ ಸೇರಿ ಈ ವಾರ ದಕ್ಷಿಣದಲ್ಲಿ ರಿಲೀಸ್‌ ಆಗಲಿರೋ ಕುತೂಹಲಕಾರಿ ಸಿನೆಮಾಗಳಿವು

ಕೇವಲ ಒಂದು ವೋಟ್‌ನಿಂದ ಇಳಯರಾಜರನ್ನ ಹಿಂದಿಕ್ಕಿ ಗೆದ್ದ ರೆಹಮಾನ್!

ರೆಡ್ ಸೀ ಫೆಸ್ಟಿವಲ್‌ನಲ್ಲಿ ಪ್ರಶಸ್ತಿ ಬಾಚಿಕೊಂಡು ಪತಿ ಜೊತೆ ಮಿಂಚಿದ ಪ್ರಿಯಾಂಕಾ

ಒಂದೊತ್ತಿನ ಊಟಕ್ಕಾಗಿ ಕುರಿ,ದನ ನೋಡಿಕೊಳ್ಳುತ್ತಿರೋ ಮಲಯಾಳಂ ಸ್ಟಾರ್ ನಟನ ಪುತ್ರ