ತಿರುಪತಿಗೆ 50 ಕೆಜಿ ತೂಕದ 2 ಬೃಹತ್ ಬೆಳ್ಳಿಯ ದೀಪ ನೀಡಿದ ಪ್ರಮೋದಾದೇವಿ ಒಡೆಯರ್

Published : May 20, 2025, 09:02 AM ISTUpdated : May 20, 2025, 09:05 AM IST

ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ತಿರುಮಲದ ವೆಂಕಟೇಶ್ವರ ದೇವಸ್ಥಾನಕ್ಕೆ ಎರಡು ಬೃಹತ್ ಬೆಳ್ಳಿ ದೀಪಗಳನ್ನು ಕಾಣಿಕೆಯಾಗಿ ನೀಡಿದ್ದಾರೆ. ಈ ದೀಪಗಳು ತಲಾ 50 ಕೆಜಿ ತೂಕ ಹೊಂದಿದ್ದು, 300 ವರ್ಷಗಳ ಹಿಂದೆ ಮೈಸೂರು ಮಹಾರಾಜರು ದೇವಸ್ಥಾನಕ್ಕೆ ದೀಪಗಳನ್ನು ದಾನ ಮಾಡಿದ್ದರು ಎಂದು ಟಿಟಿಡಿ ತಿಳಿಸಿದೆ.

PREV
15
ತಿರುಪತಿಗೆ 50 ಕೆಜಿ ತೂಕದ 2 ಬೃಹತ್ ಬೆಳ್ಳಿಯ ದೀಪ ನೀಡಿದ ಪ್ರಮೋದಾದೇವಿ ಒಡೆಯರ್

ತಿರುಮಲದ ಪ್ರಸಿದ್ಧ ವೆಂಕಟೇಶ್ವರ ದೇಗುಲಕ್ಕೆ ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ 2 ಬೃಹತ್ ಬೆಳ್ಳಿಯ ದೀಪಗಳನ್ನು ಕಾಣಿಕೆಯಾಗಿ ನೀಡಿದ್ದಾರೆ ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಸಮಿತಿ ತಿಳಿಸಿದೆ. 

25

ತಲಾ 50 ಕೇಜಿ ತೂಕದ 2 ಬೆಳ್ಳಿ ದೀಪಗಳನ್ನು ದೇವಸ್ಥಾನದ ರಂಗನಾಯಕಕುಲ ಮಂಟಪದಲ್ಲಿ ಟಿಟಿಡಿ ಅಧ್ಯಕ್ಷ ಬಿ.ಆರ್. ನದಿಯು ಮತ್ತು ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಯ್ಯ ಚೌಧರಿ ಅವರ ಸಮ್ಮುಖದಲ್ಲಿ ಪ್ರಮೋದಾದೇವಿ ಅವರು ಹಸ್ತಾಂತರಿಸಿದರು. 300 ವರ್ಷಗಳ ಹಿಂದೆಯೂ ಅಂದಿನ ಮೈಸೂರು ಮಹಾರಾಜರು ದೇವಸ್ಥಾನಕ್ಕೆ ದೀಪಗಳನ್ನು ದಾನ ಮಾಡಿದ್ದರು ಎಂದು ಟಿಟಿಡಿ ತಿಳಿಸಿದೆ.

35

2022ರಲ್ಲಿ ತಿರುಪತಿ ಹುಂಡಿಯಲ್ಲಿ 2.37 ಕೋಟಿ ಭಕ್ತರು ಭೇಟಿ ನೀಡಿದ್ದರು ಹಾಗೂ 1,450 ಕೋಟಿ ರು. ಸಂಗ್ರಹವಾಗಿತ್ತು. ಆದರೆ ಕಳೆದ ಸಲಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದರೂ ಸುಮಾರು 50 ಕೋಟಿ ರು. ಕಮ್ಮಿ ಆದಾಯ ಬಂದಿದೆ.

45

2023ರ ಜುಲೈ ತಿಂಗಳಿನಲ್ಲಿಯೇ 129 ಕೋಟಿ ರು. ಆದಾಯ ಸಂಗ್ರಹವಾಗಿತ್ತು. ಇದು ವರ್ಷದ ಗರಿಷ್ಠವಾಗಿದೆ. ನವೆಂಬರ್‌ ತಿಂಗಳಿನಲ್ಲಿ 108 ಕೋಟಿ ರು. ಆದಾಯ ಗಳಿಕೆಯಾಗಿದ್ದು ಇದು ವರ್ಷದಲ್ಲೇ ಸಂಗ್ರಹವಾದ ಕಡಿಮೆ ಮೊತ್ತವಾಗಿದೆ

55

ಜಗತ್ತಿನ ಶ್ರೀಮಂತ ದೇಗುಲ ಎನ್ನಲಾಗುವ ತಿರುಪತಿ ವೆಂಕಟೇಶ್ವರ ದೇವಸ್ಥಾನದ ಹುಂಡಿಯ ಕಾಣಿಕೆ ಸಂಗ್ರಹದಲ್ಲಿಯೂ ದಾಳಲೆ ಬರೆಯುತ್ತದೆ. ಸಾಮಾನ್ಯವಾಗಿ ದಿನಕ್ಕೆ 3 ಕೋಟಿ ರು. ಅಥವಾ ಅದಕ್ಕಿಂತಲೂ ಹೆಚ್ಚು ಮೊತ್ತದ ಕಾಣಿಕೆ ಸಂಗ್ರಹವಾಗುತ್ತದೆ.

Read more Photos on
click me!

Recommended Stories