ಬೆಂಗಳೂರು (ಮೇ 17): ಹೆಬ್ಬಾಳ ಮೇಲ್ಸೇತುವೆಯಲ್ಲಿ ಹೆಚ್ಚುವರಿ ರಾಂಪ್ ಅಳವಡಿಸುವ ಕಾಮಗಾರಿಯ ಹಿನ್ನೆಲೆಯಲ್ಲಿ, ಮೇ 17 ರಿಂದ ಮೇ 21ರ ತನಕ 5 ದಿನಗಳ ಕಾಲ ಮೆಲ್ಸೇತುವೆಯ ಒಂದು ಭಾಗವನ್ನು ಬಂದ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿದಿನ ರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 3 ಗಂಟೆಯವರೆಗೆ ಈ ಕಾಮಗಾರಿ ನಡೆಯಲಿದ್ದು, ಈ ಅವಧಿಯಲ್ಲಿ ಕೆಲವು ಮಾರ್ಗಗಳಲ್ಲಿ ವಾಹನ ಸಂಚಾರ ನಿರ್ಬಂಧಿತವಾಗಲಿದೆ.