ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ಏಕಾಏಕಿ ಎಳನೀರು ವಾಹನ ಪಲ್ಟಿಯಾದ ಭೀಕರ ಘಟನೆ ನಡೆದಿದೆ. ಹೆದ್ದಾರಿಯಲ್ಲಿ ಎಳನೀರು ಚೆಲ್ಲಿ ಹೋಗಿದೆ. ಅಪಘಾತದ ಅಪಾಯಾಕಾರಿ ದೃಶ್ಯ ಸೆರೆಯಾಗಿದೆ.
ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್ ವೇಯಲ್ಲಿ ಭೀಕರ ಅಪಘಾತ ನಡೆದಿದೆ. ಅದೃಷ್ಠವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಎಳನೀರು ತುಂಬಿಕೊಂಡು ಹೋಗುತ್ತಿದ್ದ ಪಿಕ್ಅಪ್ ವಾಹನ ಏಕಾಏಕಿ ಪಲ್ಟಿಯಾಗಿದೆ. ವಾಹನದಲ್ಲಿದ್ದ ಎಳನೀರು ಹೆದ್ದಾರಿಯಲ್ಲಿ ಚೆಲ್ಲಿದೆ. ಅತೀ ವೇಗವಾಗಿ ಬರುತ್ತಿದ್ದ ಇತರ ವಾಹನಗಳು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದೆ. ಈ ಘಟನೆಯ ದೃಶ್ಯ ಸೆರೆಯಾಗಿದೆ.
25
ಪಿಕ್ಅಪ್ ವಾಹನದ ಟೈಯರ್ ಬ್ಲಾಸ್ಟ್
ಅತೀಯಾದ ಲೋಡ್, ಜೊತೆಗೆ ಅತೀಯಾದ ಬಿಸಿಲಿನ ವಾತಾವರಣದಿಂದ ಪಿಕ್ಅಪ್ ವಾಹನದ ಟೈಯರ್ ಚಲಿಸುತ್ತಿದ್ದಂತೆ ಸ್ಪೋಟಗೊಂಡಿದೆ. ಪರಿಣಾಮ ಪಿಕ್ ಅಪ್ ವಾಹನದ ನಿಯಂತ್ರಣ ತಪ್ಪಿದೆ. ವೇಗವಾಗಿ ಸಾಗುತ್ತಿದ್ದಂತೆ ವಾಹನ ಪಲ್ಟಿಯಾಗಿದೆ.
35
ಬೆಂಗಳೂರು ಕಡೆ ಬರುತ್ತಿದ್ದ ಪಿಕ್ಅಪ್
ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ಎಳನೀರು ಹೊತ್ತು ಬೆಂಗಳೂರು ಕಡೆ ಬರುತ್ತಿದ್ದಾಗೆ ಈ ದುರ್ಘಟನೆ ನಡೆದಿದೆ. ಹಿಂಬದಿ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಹಿಂಬದಿಯಲ್ಲಿದ್ದ ಹಲವು ಕಾರುಗಳು ಅತೀ ವೇಗದಲ್ಲಿ ಸಾಗುತ್ತಿತ್ತು. ಎಳನೀರು ಚಕ್ರಕ್ಕೆ ಸಿಲುಕಿ ಮತ್ತಷ್ಟು ಅಪಾಯದ ಸಾಧ್ಯತೆ ಹೆಚ್ಚಿತ್ತು. ಅದೃಷ್ಠವಶಾತ್ ಇತರ ಕಾರುಗಳು ಅಪಾಯದಿಂದ ಪಾರಾಗಿದೆ.
ಪಿಕ್ಅಪ್‌ನಲ್ಲಿ ಎಳನೀರು ಸಂಪೂರ್ಣವಾಗಿ ಹೆದ್ದಾರಿ ಮೇಲೆ ಬಿದ್ದಿದೆ. ಹಲವು ಎಳನೀರು ಒಡೆದು ಹೋದರೆ, ಮತ್ತೆ ಎಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಎಳನೀರು ರಸ್ತೆ ಮೇಲೆ ಬಿದ್ದ ಕಾರಣ ಎಲ್ಲಾ ವಾಹನಗಳು ವೇಗ ಕಡಿತಗೊಳಿಸಿತು. ಇದೇ ವೇಳೆ ಎಕ್ಸ್‌ಪ್ರೆಸ್ ವೇನಲ್ಲಿ ಸಣ್ಣ ಪ್ರಮಾಣದ ಟ್ರಾಫಿಕ್ ಜಾಮ್ ಸಂಭವಿಸಿದೆ.
55
ಸುರಕ್ಷತೆಗೆ ಗಮನ ನೀಡಲು ಸಲಹೆ
ಟ್ರಾಫಿಕ್ ನಿಯಮ ಪಾಲಿಸುವುದು ಮಾತ್ರವಲ್ಲ, ಮುಂಜಾಗ್ರತೆ ವಹಿಸುವುದು ಅತೀ ಅಗತ್ಯ ಎಂದು ನೆಟ್ಟಿಗರು ಸಲಹೆ ನೀಡಿದ್ದಾರೆ. ಚಾಲನೆಗೂ ಮುನ್ನ ವಾಹನದ ನಾಲ್ಕು ಟೈಯರ್ ಬಗ್ಗೆ ಪರಿಶೀಲಿಸುವುದು ಅತೀ ಅಗತ್ಯ. ಇನ್ನು ವಾಹನದ ಎಂಜಿನ್ ಸೇರಿದಂತೆ ಇತರ ಯಾವುದೇ ಎಲರ್ಟ್ ಸಂದೇಶಗಳನ್ನು ಕಡೆಗಣಿಸಬಾರದು ಎಂದು ಹಲವರು ಸಲಹೆ ನೀಡಿದ್ದಾರೆ.
ಸುರಕ್ಷತೆಗೆ ಗಮನ ನೀಡಲು ಸಲಹೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ