ಬೆಂಗಳೂರಲ್ಲೊಬ್ಬ ಪೋಲಿ ಜ್ಯೋತಿಷಿ, ಪೂಜೆ ನೆಪದಲ್ಲಿ ಬೆಟ್ಟ ಸುತ್ತಿಸಿ ಮಹಿಳೆ ಮೇಲೆ ಅತ್ಯಾ**ರ, ಗಂಡ ಹಾಗೂ ಮಕ ರಕ್ತ ಕಾರುವಂತೆ ಮಾಟ ಮಾಡುತ್ತೇನೆ ಎಂದು ಬೆದರಿಸಿ ಲೈ0ಗಿಕವಾಗಿ ಬಳಸಿಕೊಂಡ ಘಟನೆ ನಡೆದಿದೆ.
ಸ್ವಾಮೀಜಿ, ಗುರೂಜಿ, ಜ್ಯೋತಿಷಿ ಹೆಸರಿನಲ್ಲಿ ನಡೆಯುತ್ತಿರುವ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಪುಣೆಯಲ್ಲಿ ಅಶೋಕ್ ಖಾರಟ್ ಗುರೂಜಿಯ ಪ್ರಕರಣದಲ್ಲಿ 100ಕ್ಕೂ ಹೆಚ್ಚು ಮಹಿಳೆಯರು ವಂಚನೆಗೆ ಒಳಗಾಗಿದ್ದಾರೆ. ಇದೀಗ ಬೆಂಗಳೂರಿನಲ್ಲೊಬ್ಬ ಪೋಲಿ ಜ್ಯೋತಿಷಿ ಪ್ರತ್ಯಕ್ಷನಾಗಿದ್ದಾನೆ. ಪೂಜೆ ನೆಪ, ಮಾಟ ಮಂತ್ರ ನೆಪದಲ್ಲಿ ಮಹಿಳೆ ಮೇಲೆ ಅತ್ಯಾ**ರ ಎಸಗಿದ ಘಟನೆ ಬೆಳಕಿಗೆ ಬಂದಿದೆ
26
ಬ್ಯೂಟಿಷನ್ ಮೇಲೆ ನಿರಂತರ ಅತ್ಯಾ**ರ,
ರಾಜಾಜಿನಗರದಲ್ಲಿ ಬ್ಯೂಟಿಷಿಯನ್ ಟ್ರೈನಿಂಗ್ ಸೆಂಟರ್ ಇಟ್ಟುಕೊಂಡಿದ್ದ ಮಹಿಳೆ ಇದೀಗ ಸಿ.ಕೆ ಅಚ್ಚುಕಟ್ಟು ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ, ಜ್ಯೋತಿಷಿ ಮೋಹನ ಕುಮಾರು ಪರಾರಿಯಾಗಿದ್ದಾನೆ. ಇದೀಗ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
36
ಮಹಿಳೆಯ ಟ್ರೈನಿಂಗ್ ಸೆಂಟರ್‌ಗೆ ಬಂದಿದ್ದ ಜ್ಯೋತಿಷಿ
ಜ್ಯೋತಿಷಿ ಮೋಹನ ಕುಮಾರ್, ತನ್ನ ಸಹೋದರಿಗೆ ಬ್ಯೂಟಿಷಿಯನ್ ಟ್ರೈನಿಂಗ್ ಸೆಂಟರ್‌ನಲ್ಲಿ ಅಡ್ಮಿಷನ್ ಬೇಕು ಎಂದು 2025ರ ಜನವರಿಯಲ್ಲಿ ಮಹಿಳೆಯ ಕಚೇರಿಗೆ ಆಗಮಿಸಿದ್ದ. ತಾನು ಜ್ಯೋತಿಷಿ ಎಂದಾಗ ಸಹಜವಾಗಿ ಗೌರವದಿಂದ ನೋಡಿಕೊಂಡಿದ್ದಾರೆ. ಇದನ್ನೇ ಬಳಸಿಕೊಂಡ ಪೋಲಿ ಕುಮಾರ ತನ್ನ ಆಟ ಶುರು ಮಾಡಿದ್ದಾನೆ. ಟ್ರೈನಿಂಗ್ ಸೆಂಟರ್ ಆರ್ಥಿಕವಾಗಿ ಅಭಿವೃದ್ಧಿ ಮಾಡಲು ಪೂಜೆಯ ಅವಶ್ಯಕತೆ ಇದೆ ಎಂದು ಬಂಡಲ್ ಬಿಟ್ಟಿದ್ದ.
ಪೂಜೆ ಹೆಸೆರು ಹೇಳಿ ಮಹಿಳೆಯನ್ನುಇದೇ ಪೋಲಿ ಮೋಹನ ಕುಮಾರ ರಾಮನಗರದ ಪಿರಮಿಡ್ ವ್ಯಾಲಿಗೆ ಕರೆದುಕೊಂಡು ಹೋಗಿದ್ದ. ಸಂಜೆ ವರೆಗೆ ಪೂಜೆ ಹೆಸರಿನಲ್ಲಿ ಭಾರಿ ಕಸರತ್ತು ನಡೆಸಿತ್ತು. ರಾತ್ರಿಯಾಗುತ್ತಿದ್ದಂತೆ ಕಾರಿನಲ್ಲಿ ಮರಳುವಾಗ ನಿರ್ಜಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ ಮಹಿಳೆ ಮೇಲೈ ಲೈ0ಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ. ಇದನ್ನು ವಿರೋಧಿಸಿದಾಗ ಮರಳಿ ತಂದು ಬಿಟ್ಟಿದ್ದಾನೆ.
56
ಚಾಮುಂಡಿ ಬೆಟ್ಟಕ್ಕೆ ಕರೆದೊಯ್ದು ಮತ್ತೆ ಕಿರುಕುಳ
ಮತ್ತೆ ಚಾಮುಂಡಿ ಬೆಟ್ಟಕ್ಕೆ ಮಹಿಳೆಯನ್ನು ಪೂಜೆ ನೆಪದಲ್ಲಿ ಕರೆದೊಯ್ದಿದ್ದ ಜ್ಯೋತಿಷಿ, ವಾಪಸ್ಸಾಗುವಾಗ ಮತ್ತೆ ಕಾರಿನಲ್ಲಿ ಮಹಿಳೆ ಮೇಲೆ ಲೈ0ಗಿಕ ದೌರ್ಜನ್ಯ ಎಸಗಿದ್ದಾನೆ. ಇದನ್ನು ಯಾರಿಗಾದ್ರು ಹೇಳಿದ್ರೆ ಗಂಡ, ಮಗನ ಮೇಲೆ ವಾಮಾಚಾರ ಮಾಡಿಸ್ತೀನಿ ಎಂದು ಬೆದರಿಕೆ ಹಾಕಿದ್ದಾನೆ. ಜ್ಯೋತಿಷಿ ಬೆದರಿಗೆಗೆ ಮಹಿಳೆ ಪ್ರತಿಭಟಿಸಲು ಸಾಧ್ಯವಾಗದೇ ಅತ್ತ ಹೇಳಲು ಸಾಧ್ಯವಾಗದೆ ತೀವ್ರ ಮಾನಸಿಕ ಹಿಂಸೆ ಅನುಭವಿಸಿದ್ದಾಳೆ.
66
ದೀಕ್ಷೆ ಕೊಡಲು ಮನೆಗೆ ಬಂದಿದ್ದ ಜ್ಯೋತಿಷಿ
ಫೆಬ್ರವರಿ 10 , 2025 ರಂದು ದೀಕ್ಷೆ ಕೊಡಬೇಕು ಎಂದು ಮಹಿಳೆ ಮನೆಗೆ ಬಂದಿದ್ದ ಪೋಲಿ ಕುಮಾರ, ಗಂಡ ಮಗನನ್ನು ಮನೆಯಿಂದ ಹೊರಗೆ ಕಳುಹಿಸಿದ್ದ. ಒಂದೂವರೆ ಗಂಟೆ ಮನೆ ಒಳಗೆ ಬರದಂತೆ ಹೇಳಿ ಬೆದರಿಕೆ ಹಾಕಿದ್ದ. ಮನೆಯಲ್ಲಿ ಮಹಿಳೆ ಕೈ,ಕಾಲು ಮುಟ್ಟುತ್ತಾ ಲೈ0ಗಿಕ ಕ್ರಿಯೆಗೆ ಸಹಕರಿಸಲು ಬೆದರಿಕೆ ಹಾಕಿದ್ದಾನೆ. ಇಲ್ಲೇ ಗಂಡ ಹಾಗೂ ಮಗ ರಕ್ಕ ಕಾರಿ ಸಾಯುವಂತೆ ಮಾಡುತ್ತೇನೆ ಎಂದು ಬೆದರಿಸಿ ಲೈ0ಗಿಕವಾಗಿ ಬಳಸಿಕೊಂಡಿದ್ದ. ಪದೇ ಪದೇ ಲೈ0ಗಿಕ ಕಿರುಕುಳ ಹೆಚ್ಚಾದ ಹಿನ್ನಲೆಯಲ್ಲಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.
ದೀಕ್ಷೆ ಕೊಡಲು ಮನೆಗೆ ಬಂದಿದ್ದ ಜ್ಯೋತಿಷಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ