ಈ ವಿವಾದ ನಡೆಯಲು ಪ್ರಮುಖ ಕಾರಣವಿದೆ. ಈ ಕಾಂಗ್ರೆಸ್ನ ಹರೀಶ್ ಇಂಜಾಡಿ ಓರ್ವ ಮಾಜಿ ರೌಡಿಶೀಟರ್ ಆಗಿದ್ದು, ದೇವಸ್ಥಾನದ ಆವರಣದಲ್ಲಿ ಈತನ ಒಡೆತನದಲ್ಲಿ ಪೂಜಾ ಪರಿಕರಗಳ ಅಂಗಡಿಗಳಿವೆ. ದೇವಸ್ಥಾನದ ಹಣ್ಣುಕಾಯಿ ಮಳಿಗೆಗಳ ಟೆಂಡರ್ನಲ್ಲಿ ಈ ಹಿಂದೆ ನಕಲಿ ಚೆಕ್ ನೀಡಿ ಈತ ದೇವಸ್ಥಾನಕ್ಕೆ ವಂಚನೆ ಮಾಡಿದ್ದ, ಈ ಬಗ್ಗೆ ಆಡಳಿತ ಮಂಡಳಿ ನೀಡಿದ ದೂರಿನ ಅನ್ವಯ ಹರೀಶ್ ಜೈಲಿಗೂ ಹೋಗಿ ಬಂದಿದ್ದ. ಮಾತ್ರವಲ್ಲ ಹರೀಶ್ ಇಂಜಾಡಿ ವಿರುದ್ಧ ಮರಳು ಮಾಫಿಯಾ, ಮರ ಕಳ್ಳ ಸಾಗಣೆಯಲ್ಲಿ ತೊಡಗಿರುವ ಆರೋಪವೂ ಇದೆ.