ರಾಘವೇಂದ್ರ ಮಠದ ಆಸ್ತಿ‌ ವಿವಾದ: ಮಧ್ಯರಾತ್ರಿ ಸುಬುಧೇಂದ್ರ ಶ್ರೀಗಳ ವಿರುದ್ಧ ಪ್ರತಿಭಟನೆ

ನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಬುಧವಾರ ಮಧ್ಯರಾತ್ರಿ ಏಕಾಏಕಿ ರಾಯರ ಮಠದ ಭಕ್ತರು ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ಶ್ರೀಗಳ ವಿರುದ್ಧ ಪ್ರತಿಭಟನೆ ನಡೆಸಿದರು.

property dispute over koppal raghavendra mutt protest against subudhendra sri at midnight gvd

ಕೊಪ್ಪಳ (ಮಾ.27): ನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಬುಧವಾರ ಮಧ್ಯರಾತ್ರಿ ಏಕಾಏಕಿ ರಾಯರ ಮಠದ ಭಕ್ತರು ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ಶ್ರೀಗಳ ವಿರುದ್ಧ ಪ್ರತಿಭಟನೆ ನಡೆಸಿದರು. ರಾಯರ ಮಠದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮಂತ್ರಾಲಯ ಶ್ರೀಗಳು ಬುಧವಾರ ಸಂಜೆ ರಾಯರ ಮಠಕ್ಕೆ ಆಗಮಿಸಿದ್ದರು‌. ಈ ವೇಳೆ ಭಕ್ತರನ್ನು ಉದ್ದೇಶಿಸಿ, ಆರ್ಶೀವಚನ ನೀಡುವಾಗ, ಕೊಪ್ಪಳ ರಾಯರ ಮಠ ಮಂತ್ರಾಲಯ ಮಠಕ್ಕೆ ಸೇರಿದ್ದು, ಇದಕ್ಕೆ ಸಂಬಂಧಿಸಿದ ದಾಖಲೆಗಳು ನಮ್ಮ ಬಳಿಯಿವೆ.

property dispute over koppal raghavendra mutt protest against subudhendra sri at midnight gvd

ಈಗಿನಂತೆಯೇ ಮುಂದಿನ ದಿನಗಳಲ್ಲಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಿಕೊಂಡು ಹೋಗಲು ಮೇಲ್ವಿಚಾರಣಾ ಸಮಿತಿ ರಚಿಸಲಾಗುತ್ತಿದ್ದು, ಸಮಿತಿಗೆ ಹೆಸರುಗಳನ್ನು ನೀವೆ ಕೊಡಿ ಎಂದು ಹೇಳಿದರು. ಇದರಿಂದ ಕೆರಳಿದ ರಾಯರ ಮಠದ ಭಕ್ತರು, ಶ್ರೀಗಳು ತೆರಳಿದ ನಂತರ, ಕೊಪ್ಪಳದ ರಾಯರ ಮಠ ಯಾರಿಗೂ ಸೇರಿದ್ದಲ್ಲ, ಐದು ದಶಕಗಳಿಂದ ಸ್ವತಂತ್ರವಾಗಿ ನಡೆದುಕೊಂಡು ಬಂದಿದೆ. ಕೊಪ್ಪಳದ ಜನರೇ ನಡೆಸಿಕೊಂಡು ಹೋಗುತ್ತಿದ್ದಾರೆ. ಮುಂದೆಯೂ ನಮಗೆ ಸಂಪೂರ್ಣ ಅಧಿಕಾರ ಕೊಡಬೇಕು. ಯಾರ ಹಸ್ತಕ್ಷೇಪ ಸರಿಯಲ್ಲ.


ಮಠದ ಅಭಿವೃದ್ಧಿಗೆ ಯಾರ ಅನುದಾನವು ಬೇಡ. ಸೇವಾ ಮನೋಭಾವದಿಂದ ಇಷ್ಟು ವರ್ಷಗಳ ಕಾಲ ಸೇವಾ ಮನೋಭಾವದಿಂದ ಕೆಲಸ ಮಾಡಿರುವ ಜಗನ್ನಾಥ ಹುಲಗುಂದ ಅವರಿಗೆ ಅಧಿಕಾರ ನೋಡಿಕೊಳ್ಳಲು ಬಿಡಬೇಕು. ಇದರಲ್ಲಿ ಯಾವುದೇ ಕಾರಣಕ್ಕೂ ಮಂತ್ರಾಲಯ ಪೀಠ ಹಸ್ತಕ್ಷೇಪ ಮಾಡಬಾರದು ಎಂದು ಒತ್ತಾಯಿಸಿದರು. ಇದೆಲ್ಲವನ್ನು ಸುಬುಧೇಂದ್ರ ಶ್ರೀಗಳ ಗಮನಕ್ಕೆ ತರುವುದಕ್ಕಾಗಿ ಮಧ್ಯರಾತ್ರಿಯೇ ಘೋಷಣೆ ಕೂಗುತ್ತಾ, ಸ್ಥಳೀಯ ಭಕ್ತರ ಮನೆಯಲ್ಲಿ ತಂಗಿದ್ದ ಶ್ರೀಗಳತ್ತ ಭಕ್ತರು ನಡೆದರು. ಅಲ್ಲದೆ, ನಮ್ಮ ಮಠವನ್ನು ಈಗಿರುವಂತೆಯೇ ಸ್ವತಂತ್ರವಾಗಿ ನಡೆಸಿಕೊಂಡು ಹೋಗಲು ಬಿಡಿ, ಅನಗತ್ಯ ಹಸ್ತಕ್ಷೇಪ ಮಾಡಬೇಡಿ ಎಂದು ಒಕ್ಕೂರಲಿನಿಂದ ಆಗ್ರಹಿಸಿದರು. 

ಐದು ದಶಕಗಳಿಂದ ಮಠವನ್ನು ಸ್ವತಂತ್ರವಾಗಿ ನಡೆಸಿಕೊಂಡು ಬರಲಾಗುತ್ತಿದೆ. 1971 ರಲ್ಲಿ ಮಠವನ್ನು ಮಂತ್ರಾಲಯ ಮಠಕ್ಕೆ ಬಿಟ್ಟು ಕೊಡಲಾಗಿತ್ತು ಎನ್ನುವುದು ಅಪ್ರಸ್ತುತ ಎಂದು ಭಕ್ತರು ಶ್ರೀಗಳ ಎದುರು ವಾದಿಸಿದರು. ತಾವು ತಂಗಿದ್ದ ಸ್ಥಳಕ್ಕೆ ಬಂದ ವ್ಯವಸ್ಥಾಪಕ ಜಗನ್ನಾಥ ಹುನಗುಂದ, ಪ್ರಧಾನ ಅರ್ಚಕ ಕೊಪ್ಪಳ ರಾಯರ ಮಠದ ಪ್ರಧಾನ ಅರ್ಚಕ ರಘು ಪ್ರೇಮಾಚಾರ್ ಅವರೊಂದಿಗೆ ಬಂದ ಭಕ್ತರ ಬಳಗದೊಂದಿಗೆ ಮಾತನಾಡಿದ ಮಂತ್ರಾಲಯ ಶ್ರೀಗಳು, ಕೊಪ್ಪಳ ರಾಯರ ಮಠದ ಅಧಿಕಾರವನ್ನು 1971 ರಲ್ಲಿಯೇ ಮಂತ್ರಾಲಯ ಮಠಕ್ಕೆ ನೀಡಲಾಗಿದೆ. ಈ ಕುರಿತು ಸಮಗ್ರ ದಾಖಲೆಗಳು ನಮ್ಮ ಬಳಿಯಿವೆ. 

ಮಠ ಸುಸೂತ್ರವಾಗಿ ನಡೆದುಕೊಂಡು ಹೋಗಲು ಅಚ್ಚುಕಟ್ಡಾದ ವ್ಯವಸ್ಥೆ ಮಾಡಿಕೊಳ್ಳುವಂತೆ ಹೇಳಿದ್ದೇನೆ. ಇಷ್ಟಕ್ಕೆ ಕೊಪ್ಪಳ ರಾಯರ ಮಠವನ್ನು ಮಂತ್ರಾಲಯ ಮಠ ಅಪಹರಿಸಿಕೊಂಡು ಹೋಗುತ್ತಿದೆ ಎಂದು ಬಿಂಬಿಸುವುದು ಸರಿಯಲ್ಲ. ಈಗಿರುವ ವ್ಯವಸ್ಥಾಪಕ ಜಗನ್ನಾಥ ಹುನಗುಂದ ಅವರೇ ಮುಂದುವರಿಯಲಿ ಎಂದು ಹೇಳಿದರು. ಇದಾದ ಬಳಿಕ ಭಕ್ತರು ಸಮಾಧಾನಗೊಂಡು ಅಲ್ಲಿಂದ ಕಾಲ್ಕಿತ್ತರು.

ಕಾರ್ಯಕ್ರಮಗಳೆಲ್ಲ ರದ್ದು: ಇಂದು ನಡೆಬೇಕಿದ್ದ ರಾಯರ ಮಠದಲ್ಲಿಯ ಕಾರ್ಯಕ್ರಮಗಳೇ ಎಲ್ಲವನ್ನು ರದ್ದುಗೊಳಿಸಿ, ಮುಂದಿನ ದಿನದಲ್ಲಿ ಮತ್ತೊಮ್ಮೆ ಬಂದು ಕಾರ್ಯಕ್ರಮ ಮಾಡುವೆ ಎಂದು ರಾಯರ ಮಠದ ಒಳಗಡೆ ಬರದೆ ಹೊರಗೆ ಇರುವ ಹನುಮನ ದರ್ಶನ ಪಡೆದು ಮರಳಿ ತಮ್ಮ ವಾಹನವನ್ನು ಏರಿ ಹೊರಗಡೆ ನಡೆದ ಮಂತ್ರಾಲಯದ ಶ್ರೀಗಳು.

Latest Videos

vuukle one pixel image
click me!