ಧಾರವಾಡ ನಗರದ ಈಜುಗೋಳ ಬಳಿ ಘಟನೆ ನಡೆದಿದೆ. ಈಜುಗೋಳ ನಿರ್ಮಾಣಕ್ಕೆ ಕಟ್ಟಿಗೆಗಳನ್ನ ಕಟ್ಟಲಾಗಿತ್ತು. ಕಟ್ಟಡ ಪಕ್ಕದಲ್ಲೇ ನಿಂತಿದ್ದ ಖಾಸಗಿ ಬಸ್. ಈ ವೇಳೆ ಭಾರೀ ಗಾಳಿ ಸಹಿತ ಮಳೆಯಾಗಿದ್ದರಿಂದ ಕಟ್ಟಿಗೆಗಳ ಬಸ್ ಮೇಲೆ ಕಳಚಿಬಿದ್ದಿವೆ.
ಬಸ್ ಮೇಲೆ ನೂರಾರು ಕಟ್ಟಿಗೆ ಬಿದ್ದ ರಭಸಕ್ಕೆ ಬಸ್ ಗಾಜು ಪುಡಿಪುಡಿಯಾಗಿದೆ. ಕಟ್ಟಡ ಕಾರ್ಮಿಕರು ಇಲ್ಲದ್ದರಿಂದ ಭಾರೀ ದುರಂತವೊಂದು ತಪ್ಪಿದಂತಾಗಿದೆ. ಇತ್ತ ಬಸ್‌ನಲ್ಲಿ ಮಲಗಿದ್ದ ಡ್ರೈವರ್, ಕ್ಲೀನರ್ ಸಹ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ ಕಿಟಕಿ ಗಾಜು ಸೇರಿದಂತೆ ಕೆಲ ಭಾಗಗಳಿಗೆ ಹಾನಿಯಾಗಿದೆ.
ಜಿಲ್ಲೆಯಾದ್ಯಂತ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದ್ದು ರಸ್ತೆಯ ಎರಡು ಮೂರು ಅಡಿಗಳಷ್ಟು ನೀರು ಹರಿಯುತ್ತಿವೆ. ಇದರಿಂದ ವಾಹನಗಳು ಸಂಚರಿಸಲಾಗದೆ ನಡು ರಸ್ತೆಯಲ್ಲಿ ಸಿಲುಕಿ ಪರದಾಡುವಂತಾಯಿತು.
ನಗರದ ಎನ್‌ಟಿಟಿಎಫ್ ಬಳಿ ಮಳೆ ನೀರು ರಸ್ತೆಗೆ ನುಗ್ಗಿ ವಾಹನ ಸವಾರರು ರಸ್ತೆಯಲ್ಲಿ ಸಿಲುಕಿ ಪರದಾಡಿದರು. ರಸ್ತೆಯ ಮೇಲೆ ರಭಸವಾಗಿ ಹರಿಯುತ್ತಿದ್ದ ಮಳೆ ನೀರಿನ ವಾಹನಗಳು ಮುಂದೆ ಚಲಿಸದೇ ನಿಂತವು. ಕೆಲವಡೆ ರಸ್ತೆ ಬದಿಯ ಅಂಗಡಿಗಳೀಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ
ರಸ್ತೆಯ ಮೇಲೆ ಎರಡು ಮೂರು ಅಡಿಯಷ್ಟು ನೀರು ಹರಿಯುತ್ತಿದ್ದರಿಂದ ಕಾರು ನೀರಲ್ಲಿ ಸಿಲುಕಿಕೊಂಡಿತ್ತು. ಏಕಾಏಕಿ ಸುರಿದ ಭಾರೀ ಮಳೆಗೆ. ವಾಹನ ಸವಾರರು, ಪ್ರಾಯಾಣಿಕರು, ಬೀದಿ ಬದಿ ವ್ಯಾಪಾರಿಗಳು ಪರದಾಡುವಂತಾಯಿತು.