ಮದ್ಯಪ್ರಿಯರಿಗೆ ಬೆಲೆ ಏರಿಕೆ ಶಾಕ್ ಕೊಟ್ಟ ರಾಜ್ಯ ಸರ್ಕಾರ, ಇಂದಿನಿಂದ ದರ ಹೆಚ್ಚಳ, ಇಲ್ಲಿದೆ ಲಿಸ್ಟ್

Published : May 13, 2026, 12:25 PM IST

ಚಿನ್ನದ ಬೆಲೆ ಏರಿಕೆ, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಆತಂಕದ ನಡುವೆ ಇದೀಗ ಮದ್ಯಪ್ರಿಯರಿಗೂ ದರ ಏರಿಕೆ ಶಾಕ್ ತಟ್ಟಿದೆ. ರಾಜ್ಯದಲ್ಲಿ ಇಂದಿನಿಂದ ಕೆಲ ಬ್ರ್ಯಾಂಡ್ ಮದ್ಯ ಬೆಲೆ ಏರಿಕೆಯಾಗಿದೆ.

PREV
15
ಮದ್ಯಪ್ರಿಯರಿಗೆ ಬೆಲೆ ಏರಿಕೆ ಶಾಕ್

ಚಿನ್ನ ಬೆಳ್ಳಿ ಆಮದು ಮೇಲೆ ಶೇಕಡಾ 15ರಷ್ಟು ಸುಂಕ ವಿಧಿಸಿದ ಬೆನ್ನಲ್ಲೇ ಬಂಗಾರ ಬಲು ದುಬಾರಿಯಾಗಿದೆ. ಇತ್ತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಆತಂಕ ಹೆಚ್ಚಾಗಿದೆ. ಸಿಲಿಂಡರ್ ಬೆಲೆ ಹೆಚ್ಚಳ. ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಇದೀಗ ಮದ್ಯಪ್ರಿಯರಿಗೆ ರಾಜ್ಯ ಸರ್ಕಾರ ಶಾಕ್ ಕೊಟ್ಟಿದೆ. ಇಂದಿನಿಂದ ಕೆಲ ಮದ್ಯದ ಬೆಲೆ ಏರಿಕೆಯಾಗಿದೆ.

25
ಇಂದಿನಿಂದಲೇ ಪರಿಷ್ಕೃತ ದರ ಜಾರಿ

ಇಂದಿನಿಂದಲೇ ಪರಿಷ್ಕೃತ ದರ ಜಾರಿಯಾಗಿದೆ. ರಾಜ್ಯದ ಬೊಕ್ಕಸ ಗ್ಯಾರೆಂಟಿ ನೀಡಿ ಖಾಲಿ ಮಾಡುತ್ತಿದ್ದರಿ. ಬೊಕ್ಕಸ ತುಂಬಿಸಿಕೊಳ್ಳಲು ಮದ್ಯದ ಬೆಲೆ ಏರಿಕೆ ಮಾಡುತ್ತೀರಿ. ಪದೇ ಪದೇ ಮದ್ಯ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದು ಮದ್ಯಪ್ರಿಯರು ರಾಜ್ಯ ಸರ್ಕಾರ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.

35
ಯಾವ ಬ್ರಾಂಡ್ ಎಷ್ಟು ಏರಿಕೆ
  • MC ಬ್ರಾಂಡಿ 180ml 185 ರೂ.ನಿಂದ 215 ರೂ.ಗೆ ಏರಿಕೆ
  • ಸಿಲ್ವರ್ ಕಪ್ 180ml 95ರೂ.ನಿಂದ 120ರೂ.ಗೆ ಏರಿಕೆ
  • 8PM 180ml 135ರೂ.ನಿಂದ 165ರೂ.ಗೆ ಏರಿಕೆ
  • BP 180ml 135ರೂ.ನಿಂದ 165ರೂ.ಗೆ ಏರಿಕೆ
  • DSP ಬ್ಲ್ಯಾಕ್ 180ml 185ರೂ.ನಿಂದ 215ರೂ.ಗೆ ಏರಿಕೆ
  • OT 180ml 115ರೂ.ನಿಂದ145ರೂ.ಗೆ ಏರಿಕೆ
  • ಒರಿಜಿನಲ್ ಚಾಯ್ಸ್ 180ml 95ರೂ.ನಿಂದ 120ರೂ.ಗೆ ಏರಿಕೆ
  • ಓಲ್ಡ್ ಮಾಂಕ್ 180ml 155ರೂ.ನಿಂದ 175ರೂ.ಗೆ ಏರಿಕೆ
45
ನಿಗದಿತ ಬ್ರ್ಯಾಂಡ್ ಬೆಲೆ ಇಳಿಕೆ

ಕೆಲವೇ ಕೆಲವು ಮದ್ಯದ ಬ್ರ್ಯಾಂಡ್ ಮೇಲಿನ ಬೆಲೆ ಇಳಿಕೆಯಾಗಿದೆ. ಮಾನ್ಶನ್ ಹೌಸ್ ಸೇರಿದಂತೆ 5 ಪ್ರಮುಖ ಮದ್ಯ ಬ್ರಾಂಡ್‌ಗಳ ಬೆಲೆ ಇಳಿಕೆ ಮಾಡಲಾಗಿದೆ. ದುಬಾರಿ ಬ್ರ್ಯಾಂಡ್ ಬೆಲೆ ಇಳಿಕೆ ಮಾಡಿ, ಕಡಿಮೆ ಬೆಲೆಯ ಹಾಗೂ ಹೆಚ್ಚು ಮಾರಾಟವಾಗುತ್ತಿದ್ದ ಬ್ರ್ಯಾಂಡ್ ಬೆಲೆ ಏರಿಕೆ ಮಾಡಲಾಗಿದೆ ಅನ್ನೋ ಆರೋಪಗಳು ಕೇಳಿಬಂದಿದೆ.

55
ಯಾವ ಬ್ರಾಂಡ್ ದರ ಇಳಿಕೆ
  1. ಮ್ಯಾನ್ಷನ್ ಹೌಸ್ (MH) 180ml 235ರಿಂದ 215ಕ್ಕೆ ಇಳಿಕೆ
  2. ಆಫ್ಟರ್ ಡಾರ್ಕ್ 180ml 235ರಿಂದ 215ಕ್ಕೆ ಇಳಿಕೆ
  3. ಬ್ಲ್ಯಾಕ್ ಅಂಡ್ ವೈಟ್ 180ml 585ರಿಂದ 520ಕ್ಕೆ ಇಳಿಕೆ
  4. ಇಂಪೀರಿಯಲ್ ಬ್ಲ್ಯೂ (IB) 180ml 235ರಿಂದ 215ಕ್ಕೆ ಇಳಿಕೆ
  5. MC ವಿಸ್ಕಿ 180ml 235ರಿಂದ 215ಕ್ಕೆ ಇಳಿಕೆ

ಯಾವ ಬ್ರಾಂಡ್ ದರ ಇಳಿಕೆ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories