ವಿದೇಶದಲ್ಲಿದ್ದ ರಿಕ್ಕಿ ರೈ ಬೆಂಗಳೂರಿಗೆ ಬಂದಿರುವುದು ಹಂತಕರಿಗೆ ತಿಳಿದಿದ್ದೇಗೆ?

Published : Apr 19, 2025, 06:32 PM ISTUpdated : Apr 19, 2025, 07:32 PM IST

ಮಾಜಿ ಭೂಗತ ದೊರೆ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆದಿದ್ದು, ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆಸ್ತಿ ವಿವಾದ ಮತ್ತು ಹಳೇ ದ್ವೇಷಗಳು ಸೇರಿದಂತೆ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

PREV
112
ವಿದೇಶದಲ್ಲಿದ್ದ ರಿಕ್ಕಿ ರೈ ಬೆಂಗಳೂರಿಗೆ ಬಂದಿರುವುದು ಹಂತಕರಿಗೆ ತಿಳಿದಿದ್ದೇಗೆ?

ಮಾಜಿ ಭೂಗತ ದೊರೆ, ದಿವಂಗತ ಮುತ್ತಪ್ಪ ರೈ ಅವರ ಕಿರಿಯ ಮಗ ರಿಕ್ಕಿ ರೈ ಮೇಲಿನ ಗುಂಡಿನ ದಾಳಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ನಾಲ್ಕು ಮಂದಿ ವಿರುದ್ಧ ಈಗ ಎಫ್‌ಐಆರ್ ದಾಖಲಾಗಿದೆ. ರಿಕ್ಕಿ ರೈ ಕಾರು ಚಾಲಕ ಬಸವರಾಜ್ ನೀಡಿದ ದೂರಿನ  ಆಧಾರದಲ್ಲಿ ಮುತ್ತಪ್ಪ ರೈ ಆಪ್ತನಾಗಿದ್ದ ರಾಕೇಶ್ ಮಲ್ಲಿ, ಮುತ್ತಪ್ಪ ರೈ ಎರಡನೆ ಪತ್ನಿ ಅನುರಾಧ, ನಿತೀಶ್ ಎಸ್ಟೇಟ್ ಮಾಲೀಕ ನಿತೀಶ್ ಶೆಟ್ಟಿ ಮತ್ತು ವೈದ್ಯನಾಥ ಎಂಬುವರ ಮೇಲೆ ದೂರು ದಾಖಲಾಗಿದೆ.  ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ  ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಆರೋಪಿಗಳ ಪತ್ತೆಗೆ ಮುಂದಾದ ಪೊಲೀಸರು ಮೂರು ವಿಶೇಷ ತಂಡಗಳ ರಚನೆ ಮಾಡಿದ್ದಾರೆ. ಮಾಗಡಿ ಡಿವೈಎಸ್ಪಿ, ರಾಮನಗರ ಡಿವೈಎಸ್ಪಿ  ಹಾಗೂ ರಾಮನಗರ ಜಿಲ್ಲೆಯ ಸೆನ್ ಪೊಲೀಸ್ ಠಾಣೆ ಡಿವೈಎಸ್ಪಿ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದ್ದು,  ಹೊಂಚು ಹಾಕಿ ಕಾದು ಕುಳಿತು ದಾಳಿ ಮಾಡಿದ ಶಾರ್ಪ್ ಶೂಟರ್‌ಗಳು ಮತ್ತು ಆರೋಪಿಗಳಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

212

ಎರಡು ಬಾರಿ ಅಟ್ಯಾಕ್!
ತಂದೆಯಂತೆ ರಿಕ್ಕಿರೈ ಆಯಸ್ಸು ಗಟ್ಟಿಯಿದೆ. ತಂದೆ ಮುತ್ತಪ್ಪರೈ ಗೂ ಐದು ಗುಂಡುಗಳು ದೇಹ ಸೀಳಿತ್ತು. ಆದರೆ ಅದೃಷ್ಟವಶಾತ್ ಆ ದಿನ ಮುತ್ತಪ್ಪ ರೈ ಪ್ರಾಣಾಪಾಯದಿಂದ ಪಾರಾಗಿದ್ರು.  ನಿನ್ನೆ ರಿಕ್ಕಿ ರೈ ಮೇಲೆ ಎರಡು ಬಾರಿ ಹತ್ಯೆಗೆ ಯತ್ನ ನಡೆದಿದೆ. ಮೊದಲ ಬಾರಿ 11 ಗಂಟೆಗೆ ಫಾರ್ಮ್ ಹೌಸ್ ನಿಂದ ಹೊರ ಹೋಗುವ ವೇಳೆ ಕಾಂಪೌಂಡ್ ಎಂಟ್ರಿ ಆಗುತ್ತಿದ್ದಂತೆ ಫೈಯರ್ ಆದ ಗುಂಡು ವೆಹಿಕಲ್ ಗೆ ಬಿದ್ದಿತ್ತು. ಮೊದಲ ಬಾರಿ ಶೂಟರ್ ನಿಂದ ಮಿಸ್ ಆಗಿದ್ದ ರಿಕ್ಕಿರೈ ವಾಹನ ಪಂಚರ್ ಆಗಿದೆ ಅಂದುಕೊಂಡು ಚೆಕ್‌ ಮಾಡಿ ಏನು ಆಗಿಲ್ಲ ಅಂದುಕೊಂಡು ಸುಮ್ಮನಾಗಿದ್ದರು. ಎರಡನೇ ಬಾರಿ 12:50 ಕ್ಕೆ ಫಾರ್ಮ್ ಹೌಸ್ ನಿಂದ ವಾಪಸ್ ಬರುವಾಗ ಮತ್ತೊಮ್ಮೆ ಗುಂಡಿನ ದಾಳಿ ನಡೆದಿದೆ. ಈ ವೇಳೆ ಗುಂಡು ರಿಕ್ಕಿ ರೈ ಮೂಗು ಹಾಗೂ ಬಲತೋಳು ಸೀಳಿದೆ. ಈಗ ವೈದ್ಯರಿಂದ ಮೂಗಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ.

312

ರಷ್ಯಾ ದಿಂದ ಬೆಂಗಳೂರಿಗೆ ಬಂದಿದ್ದ ರಿಕ್ಕಿ
ಎರಡು ದಿನಗಳ ಹಿಂದೆ ರಿಕ್ಕಿ ರೈ ರಷ್ಯಾ ದಿಂದ ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಿಗೆ ಕರೆಸಿ ಮಹೂರ್ತಾ ಫಿಕ್ಸ್ ಮಾಡಿದ್ರಾ ರಾಕೇಶ್ ಮಲ್ಲಿ ಹಾಗೂ ಅನುರಾಧ ಟೀಂ ಅನ್ನೋ ಅನುಮಾನ ಪೊಲೀಸರಿಗಿದೆ. ಈ ಹಿಂದೆ ಅಪ್ಪನ ಆಸ್ತಿ ವಿಚಾರವಾಗಿ ಹಲವು ವಿವಾದ ಇತ್ತು. ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧ, ರಾಕೇಶ್ ಮಲ್ಲಿ ಹಾಗು ಇತರರ ಜೊತೆ ರಿಕ್ಕಿ ರೈ ಭಿನ್ನಾಭಿಪ್ರಾಯ ಇತ್ತು. ಇದಕ್ಕೆ ಸಂಬಂಧಿಸಿದಂತೆ ವಿವಾದ ಬಗೆ ಹರಿಸಿಕೊಳ್ಳುವ ಯತ್ನದಲ್ಲಿದ್ರು ಇದೇ ಕಾರಣಕ್ಕೆ ಬೆಂಗಳೂರಿಗೆ ಬಂದಿದ್ದರಾ? ಈ ಹಿಂದೆ ನವೆಂಬರ್ ನಲ್ಲಿ ರಿಕ್ಕಿ ರೈ ಮತ್ತು ಅನುರಾಧ ವಿವಾದ ಬಗೆ ಹರಿಸಿಕೊಂಡಿದ್ದರು.  ಹಣಕಾಸಿನ ವಿಚಾರವಾಗಿ ಫೈನಲ್ ಸೆಟಲ್ ಮೆಂಟ್ ಗೆ ಬಂದಿದ್ದ ವೇಳೆ ಈ ಘಟನೆ ನಡೆದಿದೆಯಾ? ಈ ವೇಳೆ ರಿಕ್ಕಿ ರೈಗೆ ಮುಹೂರ್ತ ಫಿಕ್ಸ್ ಮಾಡಿದ್ರಾ? ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

412

ಮುತ್ತಪ್ಪ ರೈಗಿತ್ತು 2000 ಕೋಟಿ ಮೌಲ್ಯದ ಆಸ್ತಿ
ಬೆಂಗಳೂರಿನ 19 ನೇ ಸಿಟಿ ಸಿವಿಲ್ ಹಾಗೂ ಸೆಷನ್ಸ್ ಕೋರ್ಟ್ ನಲ್ಲಿ  ರಿಕ್ಕಿ ಮತ್ತು ಅನುರಾಧ ಲೋಕ ಅದಾಲತ್ ಮೂಲಕ ಕೋರ್ಟ್ನಲ್ಲಿ ಸಂಧಾನ ಮಾಡಿ ಆಸ್ತಿವಿ ವಾದ ಇತ್ಯರ್ಥ ಮಾಡಿಕೊಂಡಿದ್ದರು. ಎರಡನೇ ಪತ್ನಿ ಅನುರಾಧ ರೈ ಮುತ್ತಪ್ಪ ರೈ ಆಸ್ತಿಯಲ್ಲಿ ಪಾಲು ಕೇಳಿ ಕೋರ್ಟ್ ಮೆಟ್ಟಿಲೇರಿದ್ದರು. 2019 ರಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಮುತ್ತಪ್ಪ ರೈ ವಿಲ್ ಮಾಡಿದ್ದರು. ವಕೀಲ ನಾರಾಯಣಸ್ವಾಮಿಯನ್ನ ವಿಲ್ ಎಕ್ಸಿಕ್ಯೂಟರ್ ಆಗಿ ನೇಮಿಸಿದ್ದರು. ವಕೀಲೆ ಗೀತಾರಾಜ್ ಎಂಬುವವರ ಮೂಲಕ ಆಸ್ತಿಗೆ ಸಂಬಂಧಿಸಿದಂತೆ ವಿಲ್ ಬರೆಸಿದ್ದರು. ಸಾವಿರ ಕೋಟಿಗೂ ಅಧಿಕ ಮೌಲ್ಯದ ಆಸ್ತಿಗೆ ಸಂಬಂಧಿಸಿದಂತೆ 41 ಪುಟಗಳ ವಿಲ್ ಬರೆಸಿದ್ದರು. ಈ ವಿಲ್ ನಲ್ಲಿ ಪುತ್ರರಾದ ರಾಕಿ ರೈ , ರಿಕ್ಕಿ ರೈ  ಸಹೋದರನ ಪುತ್ರ ಅಶ್ವಿನ್ ರೈ ಎರಡನೇ ಪತ್ನಿ ಅನುರಾಧ ರೈ ಸೇರಿ ಮನೆಕೆಲಸದವರ ಬಗ್ಗೆಯೂ ಉಲ್ಲೇಖಿಸಿದ್ದರು.

512

100 ಕೋಟಿ ಆಸ್ತಿ ಅನುರಾಧಗೆ
ಆದರೆ ಕ್ಯಾನ್ಸರ್ ನಿಂದ 2020 ರಲ್ಲಿ ಮುತ್ತಪ್ಪ ರೈ ನಿಧನರಾಗಿದ್ದರು. ಇದಾದ ನಂತರ ಮುತ್ತಪ್ಪ ರೈ ಪುತ್ರರಾದ ರಾಕಿ ರೈ, ರಿಕ್ಕಿ ರೈ ರನ್ನು ಪ್ರತಿವಾದಿಗಳಾಗಿ ಎರಡನೇ ಪತ್ನಿ ಅನುರಾಧ ಆಸ್ತಿ ದಾವೆ ಹೂಡಿದ್ದರು. 2024ರ ಅಕ್ಟೋಬರ್‌  ನಲ್ಲಿ ತಾವೇ ಇತ್ಯರ್ಥ ಮಾಡಿಕೊಳ್ಳುತ್ತೇವೆಂದು 100 ಕೋಟಿ ಬೆಲೆಬಾಳುವ ಆಸ್ತಿಗಳನ್ನು ನೀಡಲು ಮಕ್ಕಳಿಬ್ಬರು ಒಪ್ಪಿದ್ದರು. ಇದರಲ್ಲಿ ಏಳು ಕೋಟಿ ಹಣ, ಮಂಡ್ಯದ ಪಾಂಡವಪುರದ ಬಳಿ 22 ಎಕರೆ ಜಮೀನು, ಮೈಸೂರಿನಲ್ಲಿ 4800 ಚದರಡಿ ನಿವೇಶನಗಳನ್ನು ಹಾಗೂ ನಿವೇಶನದಲ್ಲಿನ ಮನೆ, ನಂದಿಬೆಟ್ಟ ಬಳಿಯ ಕೆಂಪತಿಮ್ಮನಹಳ್ಳಿಯಲ್ಲಿ ಐದೂವರೆ ಎಕರೆ ಜಮೀನು  ಹೀಗೆ ಕೋರ್ಟ್‌ ಮೂಲಕ  ಮುತ್ತಪ್ಪ ರೈ ಪುತ್ರರಿಂದ ನೂರು ಕೋಟಿ ಮೌಲ್ಯದ ಆಸ್ತಿಯನ್ನು ಅನುರಾಧ ಪಡೆದಿದ್ದಾರೆ.

ರಿಕ್ಕಿ ರೈ ಪ್ರಕರಣ, ಮುತ್ತಪ್ಪ ರೈ ಪತ್ನಿ ಸೇರಿ ನಾಲ್ವರ ವಿರುದ್ಧ FIR!

612

ಆರೋಪಿಗಳು ಒಂದೇ ಸಂಸ್ಥೆಯವರು
 
ಇನ್ನು ರಿಕ್ಕಿ ರೈ ಮೇಲೆ ಗುಂಡಿನ ದಾಳಿ ಪ್ರಕರಣದ ಮೂರನೇ ಮತ್ತು ನಾಲ್ಕನೇ ಆರೋಪಿ ಒಂದೇ ಸಂಸ್ಥೆಯವರು ಮೂರನೇ ಆರೋಪಿ ನಿತೇಶ್ ಶೆಟ್ಟಿಯ ಕಂಪನಿ  ನಿತೇಶ್ ಎಸ್ಟೇಟ್ ನಲ್ಲಿ  ನಾಲ್ಕನೇ ಆರೋಪಿ ಎಲ್ ಎಸ್ ವೈದ್ಯನಾಥ್ ಎಕ್ಸಿಕ್ಯೂಟಿವ್ ಡೈರೆಕ್ಟರ್  ಅಗಿದ್ದಾನೆ. ಇದು ರಿಯಲ್ ಎಸ್ಟೇಟ್, ಕನ್ಸ್ಟ್ರಕ್ಷನ್ ಸಂಬಂಧಪಟ್ಟ ಕೆಲಸ ಮಾಡೋ ಕಂಪನಿಯಾಗಿದೆ. CA ಆಗಿರುವ ವೈದ್ಯನಾಥ್ ಗೆ 30 ವರ್ಷಕ್ಕೂ ಹೆಚ್ಚಿನ ಅನುಭವವಿದೆ. ಜೊತೆಗೆ ನಿತೇಶ್ ಎಸ್ಟೇಟ್ ಕಂಪನಿಯಲ್ಲಿ ಪಾರ್ಟನರ್ ಆಗಿದ್ದಾನೆ.

ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಪುತ್ರನ ಮೇಲೆ ಮಿಡ್ ನೈಟ್ ಫೈರಿಂಗ್!

712

ರಿಕ್ಕಿ ಮಾತನಾಡುವ ಸ್ಥಿತಿಯಲ್ಲಿ ಇಲ್ಲ
ಘಟನೆ ಬಿಡದಿಯಲ್ಲಿ ರಿಕ್ಕಿ ರೈ ವಕೀಲ ನಾರಾಯಣಸ್ವಾಮಿ ಹೇಳಿಕೆ ನೀಡಿ, ಮುತ್ತಪ್ಪ ರೈ ಪುತ್ರ ಅನ್ನುವ ಕಾರಣಕ್ಕೆ ಸಮಾನ್ಯವಾಗಿ ರಿಕ್ಕಿ ರೈಗೂ ಬೆದರಿಕೆ ಇತ್ತು. ಅವರು ಸೆಕ್ಯುರಿಟಿ ಇಟ್ಕೊಂಡು ಓಡಾಡ್ತಿದ್ರು. ರಿಕ್ಕಿ ರೈ ಮುತ್ತಪ್ಪ ರೈ ಆಸ್ತಿ, ವ್ಯವಹಾರ ನೋಡಿಕೊಂಡು ಹೋಗ್ತಿದ್ರು. ಸದ್ಯ ಕೆಲವೊಬ್ಬರ ಮೇಲೆ ಅನುಮಾನ ಇದೆ ಅಂತ ಕಂಪ್ಲೇಂಟ್ ಆಗಿದೆ. ಡ್ರೈವರ್ ರಾಜು ಅನುಮಾನ ಇರೋ ವ್ಯಕ್ತಿಗಳ ಮೇಲೆ ದೂರು ಕೊಟ್ಟಿದ್ದಾರೆ. ಕಳೆದ ಎರಡು ದಿನಗಳಿಂದ ಹಿಂದಷ್ಟೇ ವಿದೇಶದಿಂದ ಬಂದಿದ್ರು. ಬೆಂಗಳೂರಿನಿಂದ ಅವರು ನಿನ್ನೆ ಬಿಡಿದಿಗೆ ಬಂದಿದ್ರು. ಇಲ್ಲಿದ್ದಾಗ ಹೆಚ್ಚಾಗಿ ಬಿಡದಿ ಮನೆಗೆ ಬರ್ತಿದ್ರು. ಸದ್ಯ ಆಸ್ಪತ್ರೆಗೆ ಹೋಗಿ ಆರೋಗ್ಯ ವಿಚಾರಸಿದ್ದೇನೆ. ಮೂಗಿನ ಭಾಗಕ್ಕೆ ಇಂಜೂರಿ ಆಗಿದೆ. ಸದ್ಯ ಅವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲ.

812

ಪ್ರಾಪರ್ಟಿ ಇಶ್ಯೂ ಇತ್ತು
ಮುತ್ತಪ್ಪ ರೈ ಎರಡನೇ ಹೆಂಡತಿಗೆ ಸಂಬಂಧಪಟ್ಟಂತೆ ಪ್ರಾಪರ್ಟಿ ಇಶ್ಯೂ ಇತ್ತು. ಹಲವು ಕೇಸ್ ಗಳು ಇನ್ನೂ ವಿಚಾರಣೆ ಹಂತದಲ್ಲಿದೆ. ತುಂಬಾ ದಿನಗಳಿಂದ ವಾಚ್ ಮಾಡಿ ಫ್ಲಾನ್ ಮಾಡಿಕೊಂಡು ಕೊಲೆ ಯತ್ನ ಮಾಡಿದ್ದಾರೆ. ಆಸ್ತಿ ವಿಚಾರಕ್ಕೆ ಸಾಕಷ್ಟು ವಿವಾದ ಇತ್ತು.ಅವರಿಗೆ ಸಾಕಷ್ಟು ವಿರೋಧಿಗಳು ಇದ್ರೂ. ಹಾಗಾಗಿ ಯಾರೋ ಟಾರ್ಗೆಟ್ ಮಾಡಿ ಅಟ್ಯಾಕ್ ಮಾಡಿದ್ದಾರೆ. ಪೊಲೀಸ್ ತನಿಖೆ ಬಳಿಕ ಸತ್ಯಾಂಶ ಹೊರಬರಲಿದೆ ಎಂದು ಹೇಳಿಕೆ ನೀಡಿದ್ದಾರೆ. -ವಕೀಲ ನಾರಾಯಣಸ್ವಾಮಿ

912

ಮೊದಲ ಪತ್ನಿಯಿಂದ ರಿಕ್ಕಿ ರೈ ವಿಚ್ಚೇದನ
ಬಿಡದಿಯಲ್ಲಿ ಮುತ್ತಪ್ಪ ರೈ ಸಂಬಂಧಿ ಪ್ರಕಾಶ್ ರೈ ಹೇಳಿಕೆ ನೀಡಿ, ಸೆಕ್ಯುರಿಟಿ ಕರೆ ಮಾಡಿ ರಾತ್ರಿ ನನಗೆ ವಿಚಾರ  ತಿಳಿಸಿದ್ದರು. ಮುತ್ತಪ್ಪ ರೈ ಕಾಲದಿಂದಲೂ ಅವರ ಕುಟುಂಬದ ಮೇಲೆ ಸಾಕಷ್ಟು ಜನರಿಗೆ ದ್ವೇಷ ಇದೆ. ಆಸ್ತಿ ವಿಚಾರಕ್ಕೂ  ಇಶ್ಯೂ ಇತ್ತು. ರಿಕ್ಕಿ ಹೆಚ್ಚಿನ ಸಮಯ ಬಿಡದಿಯಲ್ಲಿ ಕಳೆಯುತ್ತಿದ್ರು. ಬೆಂಗಳೂರಿನ ಸದಾಶಿವ ನಗರದಲ್ಲೂ ಮನೆ ಇದೆ. ಬಿಡದಿ ಮನೆಯಲ್ಲಿ ಇಂಟೀರಿಯರ್ ಕೆಲಸ ನಡೆಯುತ್ತಿತ್ತು. ಅದನ್ನೂ ನೋಡೊಕೆ ಬಂದಿದ್ರು. ರಾತ್ರಿ ಇಲ್ಲಿಂದ ಹೋಗುವಾಗ ಯಾರೋ ಅಟ್ಯಾಕ್ ಮಾಡಿದ್ದಾರೆ.  ರೈ ಮೇಲಿನ ದ್ವೇಷ ಮಗನ ಮೇಲೂ ಮುಂದುವರೆದಿರುವ ಸಾಧ್ಯತೆ ಇದೆ.   ರಿಕ್ಕಿ ರೈಗೆ ಮುತ್ತಪ್ಪ ರೈ ಅವರು ಇದ್ದಾಗಲೇ ಮೊದಲ ಪತ್ನಿಯಿಂದ ಡೈವರ್ಸ್ ಆಗಿತ್ತು. ಎರಡನೇ ಪತ್ನಿ ವಿದೇಶದವರು, ಅವರು ಮಗು ಜೊತೆ ವಿದೇಶದಲ್ಲೇ ಇದ್ದಾರೆ. ರಿಕ್ಕಿ ರೈ ಕೂಡಾ ಹೆಚ್ಚಿನ ಸಮಯ ವಿದೇಶದಲ್ಲೆ ಕಳೆಯುತ್ತಿದ್ದರು ಎಂದು ಮುತ್ತಪ್ಪ ರೈ ಸಂಬಂಧಿ ಪ್ರಕಾಶ್ ರೈ ಹೇಳಿಕೆ ನೀಡಿದ್ದಾರೆ.

1012

 ನಾನಾ ಆಯಾಮಗಳಲ್ಲಿ ರಿಕ್ಕಿ ರೈ ಶೂಟೌಟ್ ತನಿಖೆ ಕೈಗೊಂಡಿರೋ ರಾಮನಗರ ಜಿಲ್ಲಾ  ಪೊಲೀಸರು
1.ತಂದೆ ಮುತ್ತಪ್ಪ ರೈ ಭೂಗತ ನಂಟಿನ ಹಿನ್ನೆಲೆ ಮಗನ ಶೂಟೌಟ್ ಮಾಡಿದ್ರಾ?
2.ರಿಕ್ಕಿ ರೈ ಬ್ಯುಸಿನೆಸ್ ಮ್ಯಾಟರ್ ಗೆ ಫೈರಿಂಗ್ ಆಯ್ತಾ?
3.ರಿಕ್ಕಿ ರೈ ಮೇಲಿನ ಹಳೇ ದ್ವೇಷದ ಹಿನ್ನಲೆ ಟಾರ್ಗೇಟ್ ಮಾಡಿದ್ರಾ?
4.ಹಣಕಾಸಿನ ವಿಚಾರಕ್ಕೆ ಗಲಾಟೆ ಆಗಿ ಹತ್ಯೆಗೆ ಸಂಚು ರೂಪಿಸಿದ್ರಾ?
5.ವೈಯುಕ್ತಿಕ ದ್ವೇಷದಿಂದ ಹತ್ಯೆ ಮಾಡಲು ಬಂದಿದ್ರಾ?
6.ರಿಯಲ್ ಎಸ್ಟೇಟ್ ಕಿರಿಕ್ ವಿಚಾರಕ್ಕೆ ಫೈರಿಂಗ್ ಮಾಡಿದ್ರಾ?
7.ಮಾಜಿ ಡಾನ್ ಭೂಗತ ಪಾತಕಿ ಮುತ್ತಪ್ಪ ರೈ ಆಸ್ತಿ ವಿಚಾರಕ್ಕೆ ರಿಕ್ಕಿ ರೈ ಕೊಲೆಗೆ ಸಂಚು ರೂಪಿಸಿದ್ರಾ?
8.ಬೆಂಗಳೂರು ,ಗೋವಾ,ಸೇರಿದಂತೆ ಹಲವು ಕಡೆ ಸಾಕಷ್ಟು ಬ್ಯುಸಿನೆಸ್‌ ಹೊಂದಿದ್ದ ಮುತ್ತಪ್ಪ ರೈ. ಸದ್ಯ   ರಿಕ್ಕಿ ರೈ ನೋಡಿಕೊಳ್ಳುತ್ತಿದ್ದಾನೆ.

1112

ರಿಕ್ಕಿ ರೈಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ
ಜಯ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಜಗದೀಶ್ ಹೇಳಿಕೆ ನೀಡಿ ಮೂಗಿನ ಭಾಗದಲ್ಲಿ ಗಾಯ ಆಗಿತ್ತು.   ಆಪರೇಷನ್ ಮಾಡಿದ್ದಾರೆ. ಗುಂಡಿನ ಅಂಶ ಬಲಗೈಯಲ್ಲಿ ಇತ್ತು ಅದನ್ನು ತೆಗೆದಿದ್ದಾರೆ. ಇದನ್ನು ಜಯಕರ್ನಾಟಕ ಖಂಡಿಸುತ್ತೇವೆ. ತಮ್ಮ ತಂದೆ ಮಾಡಿಕೊಟ್ಟ ಸಂಘಟನೆಯಲ್ಲಿ ಸಾಕಷ್ಟು ಕೆಲಸ ಮಾಡಬೇಕು ಅಂತ ಹೇಳುತ್ತಿದ್ರು. ಅದೇ ರೀತಿ ಸಾಕಷ್ಟು ಬಡವರಿಗೆ ಹೆಲ್ಪ್ ಮಾಡುತ್ತಿದ್ರು. ಇವತ್ತು ಸಂಜೆಯೊಳಗೆ ಯಾರು ಅಂತ ಗೊತ್ತಾಗಬೇಕು. ರಾಜ್ಯದಲ್ಲಿರುವ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು, ಈಗಾಗಲೇ ಗೃಹಸಚಿವರು ಹಾಗೂ ಪೊಲೀಸರಿಗೆ ಮನವಿ ಸಲ್ಲಿಸಿದ್ದೇವೆ. ಸಂಪೂರ್ಣ ತನಿಖೆಯಾದ ಮೇಲೆ ಪೊಲೀಸರೇ ಯಾರು ತಪ್ಪಿತಸ್ಥರು ಅಂತ ತಿಳಿಸುತ್ತಾರೆ. ಸಾಕಷ್ಟು ಮಾಧ್ಯಮಗಳಲ್ಲಿ ಗುಂಡಿನ ದಾಳಿ ಬಗ್ಗೆ ವಿಮರ್ಶೆ ನಡೆಯುತ್ತಿದೆ. ಯಾರು ಇನ್ನೊಬ್ಬರನ್ನ ವಿಮರ್ಶೆ ಮಾಡಬಾರದು. ನಡೆದಿರುವ ಘಟನೆ ಆ ನೋವನ್ನ ನೋಡಿರುವ ವ್ಯಕ್ತಿಗೆ ಗೊತ್ತಿರುತ್ತೆ. ಪೊಲೀಸ್ ಇಲಾಖೆ ತನಿಖೆ ನಡೆಸಿ ಕ್ರಮಕೈಗೊಳ್ಳುತ್ತಾರೆ. ರಿಕ್ಕಿ ರೈಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ಮಾತಾಡಿದ್ರೆ ಬ್ಲಿಡಿಂಗ್ ಆಗುತ್ತೆ. ಆದ್ರಿಂದ ಅವರಿಗೆ ರೆಸ್ಟ್ ಅಗತ್ಯ ಇದೆ.

1212

70 ಎಂಎಂ ಬುಲೆಟ್ ಬಳಕೆ
ಘಟನೆ ಸ್ಥಳದಲ್ಲಿರುವ ರಿಕ್ಕಿ ರೈ ಕಾರನ್ನು ಪೊಲೀಸರು ಸಂಪೂರ್ಣ ತಪಾಸಣೆ  ಮಾಡಿದ್ದಾರೆ. ಕಾರ್ ವಿಡಿಯೋಗ್ರಫಿ  ತೆಗೆದುಕೊಂಡಿದ್ದು, ಬುಲೆಟ್ ಬಿದ್ದ ಜಾಗದ ಪರಿಶೀಲನೆ  ನಡೆಯುತ್ತಿದೆ. ಡ್ರೈವರ್ ಸೀಟ್ ಕಡೆಯಿಂದ ಹಿಂಬದಿಗೆ  ಬುಲೆಟ್  ಬಂದಿದೆ. 70 ಎಂಎಂ ಬುಲೆಟ್ ನಿಂದ ಫೈರಿಂಗ್ ಆಗಿದೆ. ಕಾರ್ ಇಂಚಿಂಚೂ ಸೋಂಕೋ ಟೀಮ್  ತಪಾಸಣೆ ನಡೆಸಿದೆ. ಬಿಎನ್ ಎಸ್ ಎಸ್ ಅಡಿ ಘಟನೆಯ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದು,ಕೋರ್ಟ್ ಗೆ  ಮಹಜರ್ ವಿಡಿಯೋ  ಕೊಡುವ ಹಿನ್ನಲೆ ಚಿತ್ರೀಕರಣ  ಮಾಡಿಕೊಂಡಿದೆ. ಎಫ್ ಎಸ್ ಎಲ್ ಟೀಮ್ ಮತ್ತು ಬಿಡದಿ ಪೊಲೀಸರು ಕೂಡ ಸ್ಥಳದಲ್ಲಿದ್ದರು. 

Read more Photos on
click me!

Recommended Stories