ತಮ್ಮ ನಿವಾಸದ ಮೇಲಿನ ಇಡಿ ದಾಳಿಗೆ ಪ್ರತಿಕ್ರಿಯಿಸಿರುವ ಸಚಿವ ಸತೀಶ್ ಜಾರಕಿಹೊಳಿ, 40% ಷೇರು ದಾಖಲೆ ತೋರಿಸಲು ಸವಾಲು ಹಾಕಿದ್ದಾರೆ. ಇದೇ ವೇಳೆ, ಇಡಿ ಕಾರ್ಯವೈಖರಿ ಟೀಕಿಸಿದ್ದ ಉದ್ಯಮಿ ವಿಜಯ್ ಮಲ್ಯ ತಮ್ಮ ಫ್ಯಾನ್ಸ್ ಕ್ಲಬ್‌ಗೆ ಸೇರಿದ್ದಾರೆ ಎಂದು ಅವರು ಹಾಸ್ಯಮಯವಾಗಿ ಹೇಳಿದ್ದಾರೆ.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲಿನ ED ದಾಳಿ ಬಗ್ಗೆ ವಿದೇಶದಲ್ಲಿರುವ ಉದ್ಯಮಿ ವಿಜಯ್ ಮಲ್ಯ ಪ್ರತಿಕ್ರಿಯಿಸಿದ್ದರು. ಇದೀಗ ಈ ಬಗ್ಗೆ ಸತೀಶ್ ಜಾರಕಿಹೊಳಿ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಜಾರಿ ನಿರ್ದೇಶನಾಲಯದ ಪತ್ರಿಕಾ ಪ್ರಕಟನೆ ಬಗ್ಗೆ ಮಾತನಾಡಿದರು.
25
40% ಷೇರು ದಾಖಲೆ ತೋರಿಸಲಿ
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನೋಟಿಸ್ ಕೊಟ್ಟು ಹೇಳಿದ್ರೆ ಉತ್ತರ ಕೋಡುತ್ತೇವೆ. ಮೊದಲು ನಮ್ಮನ್ನು ಕರೆಯಲಿ ಅಲ್ಲಿ ಹೋಗಿ ಹೇಳುತ್ತೇವೆ. ಇದಕ್ಕೆ ಕಾನೂನಿಲ್ಲಿ ಅವಕಾಶವಿದೆ. ನೇರವಾಗಿ ನಾವು ಮಾಡಿದ್ದೇವೆ ಅಂತ ಹೇಳಿಲ್ಲ. ಪ್ರಶ್ನೆ ಉತ್ತರ ಅಲ್ಲೆ ಇದೆ, ಅಷ್ಟಕ್ಕೆ ಚರ್ಚೆ ಸಾಕು. ಮುಂದೆ ತಪ್ಪಿದ್ರೆ ಹೇಳಲಿ. 40% ಷೇರು ದಾಖಲೆ ತೋರಿಸಲಿ. ನಮ್ಮದಾಗಿದ್ರೆ ನಾವು ಒಪ್ಪಿಕೊಳ್ಳುತ್ತೇವೆ. ಹೂಡಿಕೆ ಬಗ್ಗೆ ನನಗೆ ಸ್ಪಷ್ಟತೆವಿದೆ. ಇಲ್ಲಿ ಅದನ್ನು ಸಾಬೀತು ಮಾಡಲು ಆಗಲ್ಲ. ಇಡಿ ಆಫೀಸ್ ಗೆ ಕರೆಯಿಸಲಿ, ಅಲ್ಲಿ ಸಾಬೀತು ಮಾಡುತ್ತೇವೆ ಎಂದು ಸಚಿವ ಜಾರಕಿಹೊಳಿ ಹೇಳಿದರು.
35
ನಮ್ಮ ಫ್ಯಾನ್ಸ್ ಕ್ಲಬ್
ಇದೇ ವೇಳೆ ವಿಜಯ್ ಮಲ್ಯ ಬೆಂಬಲಕ್ಕೆ ಪ್ರತಿಕ್ರಿಯಿಸಿದ ಸಚಿವರು, ಥ್ಯಾಂಕ್ಸ್ ಅಂತ ಹೇಳಿ ನಕ್ಕರು. ಅವರೂ ನಮ್ಮ ಫ್ಯಾನ್ಸ್ ಕ್ಲಬ್ ಗೆ ಸೇರಿದ್ರು ಹಾಗಿದ್ರೆ ಎಂದರು. ಮುಂದುವರಿದ ಮಾತನಾಡಿದ ಸತೀಶ್ ಜಾರಕಿಹೊಳಿ, ದೂರು ಕೊಟ್ಟವರ ಬಗ್ಗೆ ಗೊತ್ತಿದೆ, ಅದನ್ನು ಸಿಎಂಗೆ ಹೇಳಿದ್ದೇನೆ. ಯಾರು ಕೊಟ್ಟಿದ್ದಾರೆ ಅಂತ ಹೇಳಲ್ಲ. ದೂರು ಕೋಡೋದು ತಪ್ಪು ಅಂತ ಹೇಳಲ್ಲ ಮತ್ತು ಪಕ್ಷದವರು ಅಂತ ಹೇಳಲ್ಲ. ಇರಬಹುದು, ಇಲ್ಲದೆ ಇರಬಹುದು. ಅದನ್ನು ಮುಖ್ಯಮಂತ್ರಿಗಳು ನೋಡಿಕೊಳ್ಳುತ್ತಾರೆ.
ದೂರು ನೀಡಿರೋರು ಬಿಜೆಪಿಯ ಮತದಾರರಾಗಿದ್ದು, ಅವರ ಸಂಬಂಧ ಕಾಂಗ್ರೆಸ್‌ನಲ್ಲಿದೆ. ಈ ವಿಷಯವನ್ನು ಸಿಎಂ ಗಮನಕ್ಕೆ ತೆಗೆದುಕೊಂಡು ಬರಲಾಗಿದೆ. ಈಗ ಬಂದಿರುವುದು ಆರೋಪ, ಅದು ಸಾಬೀತು ಆಗಬೇಕು. ಇಡಿ ತನಿಖೆ ಮಾಡುತ್ತಿದೆ, ಫೈನಲ್ ರಿಪೋರ್ಟ್ ಬರಲಿ ಎಲ್ಲವೂ ಗೊತ್ತಾಗುತ್ತದೆ. ರಾಜಕೀಯ ಉದ್ದೇಶ ಇದ್ದೆ ಇರುತ್ತದೆ. ಅದನ್ನು ಮೀರಿ ಬೆಳೆಯಬೇಕು ಅಷ್ಟೇ ಎಂದರು.
55
ವಿಜಯ್ ಮಲ್ಯ ಹೇಳಿದ್ದೇನು?
ಇಡಿ ಕಾರ್ಯವೈಖರಿಯನ್ನು ಕಡುಭ್ರಷ್ಟ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಬಣ್ಣಿಸಿರುವ ಅವರು, ಯಾವುದೇ ಸೂಕ್ತ ಚಾರ್ಜ್‌ಶೀಟ್ ಸಲ್ಲಿಸದೆ ಹಾಗೂ ನ್ಯಾಯಯುತ ವಿಚಾರಣೆ ನಡೆಸದೆ, ಕೇವಲ ಸಾರ್ವಜನಿಕವಾಗಿ ವ್ಯಕ್ತಿಗಳ ಚಾರಿತ್ರ್ಯ ವಧೆ ಮಾಡುವುದರಲ್ಲಿ ಇಡಿ ಹೆಮ್ಮೆ ಪಟ್ಟುಕೊಳ್ಳುತ್ತಿದೆ. ವಿಶ್ವದ ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರದಲ್ಲೂ ಇಂತಹ ಜಾರಿ ಸಂಸ್ಥೆಗಳ ನಡವಳಿಕೆಯನ್ನು ಕಾಣಲು ಸಾಧ್ಯವಿಲ್ಲ. ನಾಗರಿಕರು ಈ ಬಗ್ಗೆ ಯೋಚಿಸಬೇಕು ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ