ತಾಜಾ ಮಾವಿನ ಹಣ್ಣು ನೇರವಾಗಿ ರೈತರಿಂದ ನಿಮ್ಮ ಮನೆಗೆ! ಹಾಪ್‌ಕಾಮ್ಸ್-ಅಂಚೆ ಇಲಾಖೆ ಹೊಸ ಸೇವೆ ಆರಂಭ, ಆರ್ಡರ್ ಮಾಡುವ ಲಿಂಕ್ ಇಲ್ಲಿದೆ!

Kannadaprabha News   | Kannada Prabha
Published : May 30, 2026, 07:08 AM IST

ಹಾಪ್‌ಕಾಮ್ಸ್ ಮತ್ತು ಅಂಚೆ ಇಲಾಖೆಯ ಸಹಯೋಗದಲ್ಲಿ ಇಂದಿನಿಂದ ತಾಜಾ ಮಾವಿನ ಹಣ್ಣುಗಳ ಡೋರ್‌ಡೆಲಿವರಿ ಸೇವೆ ಆರಂಭವಾಗಿದೆ. ಆರ್ಡರ್ ಮಾಡಿದ 24 ಗಂಟೆಯೊಳಗೆ ಮನೆ ಬಾಗಿಲಿಗೆ ಹಣ್ಣು ತಲುಪಲಿದ್ದು, ಆನ್‌ಲೈನ್ ಮೂಲಕ ಸುಲಭವಾಗಿ ಬುಕ್ ಮಾಡಬಹುದು. ಲಿಂಕ್ ಇಲ್ಲಿದೆ.

PREV
16
ಹಾಪ್‌ಕಾಮ್ಸ್‌ : ಇಂದಿನಿಂದ ಮನೆ ಬಾಗಿಲಿಗೆ ಮಾವಿನ ಹಣ್ಣು!

ತಾಜಾ ಮಾವಿನ ಹಣ್ಣುಗಳನ್ನು ಮನೆ ಬಾಗಿಲಿಗೆ ತರಿಸಿಕೊಂಡು ಸವಿಯುವ ಆಸೆ ಈಡೇರಿಸಲು ಹಾಪ್‌ಕಾಮ್ಸ್‌ ಅಂಚೆ ಇಲಾಖೆಯ ಸಹಯೋಗದಲ್ಲಿ ಮೇ 30ರಿಂದ ನೂತನ ಸೇವೆ ಆರಂಭಿಸುತ್ತಿದೆ.

26
ರೈತರ ಅಂಚೆ ಆನ್‌ಲೈನ್ ವ್ಯಾಪಾರ

ತಾಜಾ ಹಣ್ಣುಗಳನ್ನು ನಿಗದಿತ ದರಗಳಲ್ಲಿ ತಲುಪಿಸಲು ಹಾಪ್‌ಕಾಮ್ಸ್‌ ಭಾರತೀಯ ಅಂಚೆ ಇಲಾಖೆ ಸಹಯೋಗದಲ್ಲಿ ‘ರೈತರ ಅಂಚೆ’ ಆನ್‌ಲೈನ್‌ ವ್ಯಾಪಾರ ಪ್ರಾರಂಭಿಸಿದ್ದು, ಗ್ರಾಹಕರು ಆನ್‌ಲೈನ್‌ನಲ್ಲಿ ಹಣಪಾವತಿಸಿ ಆರ್ಡರ್‌ ಮಾಡಿದ 24 ಗಂಟೆಯೊಳಗೆ ಮನೆ ಬಾಗಿಲಿಗೆ ಮಾವಿನ ಹಣ್ಣುಗಳು ತಲುಪಲಿದೆ.

36
ಹಾಪ್‌ಕಾಮ್ಸ್‌ ಮಳಿಗೆಯಲ್ಲಿ ಯಾವ್ಯಾವ ತಳಿಯ ಹಣ್ಣುಗಳು ಸಿಗಲಿವೆ?

ಪ್ರಸ್ತುತ ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಮಾವು ಮೇಳ ಚಾಲ್ತಿಯಲ್ಲಿದ್ದು ನೈಸರ್ಗಿಕವಾಗಿ ಮಾಗಿಸಿದ ಆಲ್ಫಾನ್ಸ್‌, ಬನೇಶನ್‌, ದಶೇರಿ, ಇಮಾಮ್‌ ಪಸಂದ್‌, ಕೇಸರ್‌, ಮಲ್ಲಿಕಾ ಸೇರಿ 11ಕ್ಕೂ ಹೆಚ್ಚು ತಳಿಯ ಮಾವಿನ ಹಣ್ಣುಗಳು ಆನ್‌ಲೈನ್‌ನಲ್ಲಿ ಲಭ್ಯವಿದೆ. ಗ್ರಾಹಕರು ಕನಿಷ್ಠ 3 ಕೆಜಿ ಮಾವಿನ ಹಣ್ಣನ್ನು ಖರೀದಿಸಬೇಕಿದೆ. ಪ್ರಸ್ತುತ ವಿವಿಧ ತಳಿಯ ಉತ್ಕೃಷ್ಟ ಮಾವಿನ ಹಣ್ಣುಗಳು 3 ಕೆಜಿ ಮತ್ತು 5 ಕೆಜಿ ಬಾಕ್ಸ್‌ಗಳಲ್ಲಿ ಲಭ್ಯವಿದ್ದು ಗ್ರಾಹಕರು ಆನ್‌ಲೈನ್‌ನಲ್ಲಿ ಖರೀದಿಸಬಹುದು.

46
ಹಾಪ್‌ಕಾಮ್ಸ್‌ನಲ್ಲಿ ಮಾವಿನ ಹಣ್ಣು ಆರ್ಡರ್ ಮಾಡುವುದು ಹೇಗೆ?

ವೆಬ್‌ಸೈಟ್‌ನಲ್ಲಿ ನೋಂದಣಿ

ಗ್ರಾಹಕರು ಹಾಪ್‌ಕಾಮ್ಸ್‌ನ ಅಧಿಕೃತ ವೆಬ್‌ಸೈಟ್‌: https://hopcomsbengaluru.com ನಲ್ಲಿ ನೋಂದಣಿ ಮಾಡಿಕೊಂಡು ಹಣ ಪಾವತಿಸಿ, ಖರೀದಿ ಆರಂಭಿಸಬಹುದು. ಪ್ರಸ್ತುತ ಹಾಪ್‌ಕಾಮ್ಸ್‌ ವೆಬ್‌ಸೈಟ್‌ನಲ್ಲಿ 11 ತಳಿಯ ಮಾವಿನಹಣ್ಣುಗಳು ಲಭ್ಯ ಇವೆ. 3 ಮತ್ತು 5 ಕೆಜಿಯ ಬಾಕ್ಸ್‌ಗಳನ್ನು ಖರೀದಿಸಲು ಅವಕಾಶ ನೀಡಲಾಗಿದೆ.

56
ವಿವಿಧ ತಳಿಯ ಮಾವಿನ ಹಣ್ಣಿನ ಕೆಜಿಗೆ ಎಷ್ಟು ದರ?

ಮೂರು ಕೆಜಿಯ ಅಲ್ಫಾನ್ಸ್‌ 396 ರು.(ಅಂಚೆ ಶುಲ್ಕ ಸೇರಿ), ಬನೇಶನ್‌ 336 ರು., ದಶೇರಿ 378 ರು., ಇಮಾಮ್‌ಪಸಂದ್‌ 765 ರು., ಕೇಸರ್‌ 564 ರು., ಮಲ್ಲಿಕಾ 330 ರು., ಮಲಗೋವ 651 ರು., ರಸಪುರಿ 321 ರು., ಸೆಂಧೂರ 222 ರು., ತೋತಾಪುರಿ 177 ರು.ನಂತೆ ನಿಗದಿಪಡಿಸಲಾಗಿದೆ. 5 ಕೆಜಿ ಮಾವಿನ ಹಣ್ಣಿನ ಬಾಕ್ಸ್‌ಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ.

66
ರೈತರ ಅಂಚೆ ಯೋಜನೆಗೆ ಚಾಲನೆ

ರಾಜಭವನ ರಸ್ತೆಯಲ್ಲಿರುವ ಅಂಚೆ ಇಲಾಖೆಯ ಸಭಾಂಗಣದಲ್ಲಿ ಮೇ 30 11ಕ್ಕೆ ಚೀಫ್‌ ಪೋಸ್ಟ್‌ಮಾಸ್ಟರ್‌ ಜನರಲ್‌ ಕೆ.ಪ್ರಕಾಶ್‌ ಅವರು ‘ರೈತರ ಅಂಚೆ ಯೋಜನೆ’ಗೆ ಚಾಲನೆ ನೀಡಲಿದ್ದಾರೆ. ಮೊದಲ ಹಂತದಲ್ಲಿ ಮಾವಿನ ಹಣ್ಣನ್ನು ಅಂಚೆ ಮೂಲಕ ಗ್ರಾಹಕರಿಗೆ ಆನ್‌ಲೈನ್‌ ಮೂಲಕ ತಲುಪಿಸಲಾಗುವುದು. ನಂತರ ತಾಜಾ ತರಕಾರಿಯನ್ನು ಸಹ ಮನೆಬಾಗಿಲಿಗೆ ತಲುಪಿಸುವ ಸೌಲಭ್ಯ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ಹಾಪ್‌ಕಾಮ್ಸ್‌ ಮಾರುಕಟ್ಟೆ ವ್ಯವಸ್ಥಾಪಕ ವಿನಾಯಕ್‌ ಅವರು ತಿಳಿಸಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories