'ಇದು ಬೊಂಬೆಯಾಟವಯ್ಯ..' ನಿಜವಾಯ್ತು ಬೊಂಬೆ ಭವಿಷ್ಯ! ಸಿಎಂ ಕುರ್ಚಿ ಬದಲಾವಣೆಗೆ ಮುಂಚೆಯೇ ನುಡಿ!

Published : May 29, 2026, 12:18 PM IST

ಧಾರವಾಡದ ಹನುಮನಕೊಪ್ಪ ಗ್ರಾಮದಲ್ಲಿ ಯುಗಾದಿ ದಿನ ಮಣ್ಣಿನ ಬೊಂಬೆ ನೀಡಿದ್ದ ಭವಿಷ್ಯ ಈಗ ನಿಜವಾಗ್ತಿದೆಯಾ? ಸಿಎಂ ಬದಲಾವಣೆ ಚರ್ಚೆ ನಡುವೆ ವೈರಲ್ ಆದ ಭಯಾನಕ ಸಂಪ್ರದಾಯದ ರೋಚಕ ಕಥೆ!

PREV
16
ಸಿಎಂ ರಾಜೀನಾಮೆ: ನಿಜವಾಯ್ತು ಬೊಂಬೆ ಭವಿಷ್ಯ..!

ಧಾರವಾಡ ಜಿಲ್ಲೆಯ ಉಪ್ಪಿನ ಬೆಟಗೇರಿ ಸಮೀಪದ ಹನುಮನಕೊಪ್ಪ ಗ್ರಾಮದಲ್ಲಿ ಪ್ರತಿವರ್ಷ ಯುಗಾದಿ ಅಮವಾಸ್ಯೆ ದಿನ ನಡೆಯುವ ವಿಚಿತ್ರ ಆಚರಣೆ ಇದೀಗ ಮತ್ತೆ ರಾಜ್ಯದ ಗಮನ ಸೆಳೆದಿದೆ. ಹಳ್ಳದ ಮಣ್ಣಿನಿಂದ ನಾಲ್ಕು ದಿಕ್ಕುಗಳಿಗೆ ನಾಲ್ಕು ಬೊಂಬೆಗಳನ್ನು ನಿರ್ಮಿಸಿ, ಮರುದಿನ ಬೆಳಿಗ್ಗೆ ಗ್ರಾಮಸ್ಥರು ಅವುಗಳ ಸ್ಥಿತಿಯನ್ನು ಪರಿಶೀಲಿಸುವ ಪದ್ಧತಿ ವರ್ಷಗಳಿಂದ ನಡೆದುಕೊಂಡು ಬಂದಿದೆ.ಸ

26
ಇದು ಬೊಂಬೆಯಾಟವಯ್ಯ ಅಂತ ನಿರ್ಲಕ್ಷ್ಯ ಮಾಡಂಗಿಲ್ಲ!

ಯಾವ ದಿಕ್ಕಿನ ಬೊಂಬೆಗೆ ಪೆಟ್ಟು ಬೀಳುತ್ತದೆಯೋ, ಆ ದಿಕ್ಕಿನ ನಾಯಕನಿಗೆ ದೊಡ್ಡ ಸಂಕಷ್ಟ ಅಥವಾ ರಾಜಕೀಯ ಬದಲಾವಣೆ ಕಾದಿದೆ ಎಂಬ ನಂಬಿಕೆ ಗ್ರಾಮಸ್ಥರದ್ದು. ಈ ಬಾರಿ ಕರ್ನಾಟಕ ದಿಕ್ಕಿನ ಬೊಂಬೆಗೆ ಪೆಟ್ಟಾಗಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಯ ಸೂಚನೆ ಎಂದು ಜನರು ಚರ್ಚೆ ಆರಂಭಿಸಿದ್ದರು.

36
ಕುರ್ಚಿ ಕಾದಾಟ ಶುರುವಾಗುತ್ತೆ ಎಂದಿದ್ದ ಗ್ರಾಮಸ್ಥರು!

ಬೊಂಬೆಗೆ ಪೆಟ್ಟಾದ ಕೆಲವೇ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಗರಿಗೆದರಿದ್ದು, ಹನುಮನಕೊಪ್ಪದ ಬೊಂಬೆ ಭವಿಷ್ಯ ಮತ್ತೆ ವೈರಲ್ ಆಗಿದೆ. 'ಈ ಬಾರಿ ದೊಡ್ಡ ನಾಯಕನ ಸ್ಥಾನ ಕದಿಯಲಿದೆ' ಎಂದು ಗ್ರಾಮಸ್ಥರು ಹೇಳಿದ್ದ ಮಾತು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವಿಶೇಷವಾಗಿ ಸಿಎಂ ಸಿದ್ದರಾಮಯ್ಯ ಬದಲಾವಣೆ ಕುರಿತ ರಾಜಕೀಯ ಚಟುವಟಿಕೆಗಳು ವೇಗ ಪಡೆದಿರುವ ಬೆನ್ನಲ್ಲೇ, 'ಬೊಂಬೆ ಹೇಳಿದ್ದು ನಿಜವಾಯ್ತಾ?' ಎಂಬ ಪ್ರಶ್ನೆ ಎಲ್ಲೆಡೆ ಕೇಳಿಬರುತ್ತಿದೆ.

46
ಇಂದಿರಾ ಗಾಂಧಿ ಹತ್ಯೆಗೂ ಮುನ್ನ ಪೆಟ್ಟಾಗಿತ್ತಂತೆ ಉತ್ತರದ ಬೊಂಬೆ!

ಗ್ರಾಮಸ್ಥರ ಪ್ರಕಾರ, ಈ ಆಚರಣೆಯ ಹಿಂದೆ ಹಲವು ದಶಕಗಳ ವಿಚಿತ್ರ ಘಟನೆಗಳ ಸರಮಾಲೆಯಿದೆ. ಹಿಂದೆ ಉತ್ತರ ದಿಕ್ಕಿನ ಬೊಂಬೆಗೆ ಪೆಟ್ಟಾಗಿದ್ದ ವರ್ಷದಲ್ಲೇ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ನಡೆದಿತ್ತು ಎನ್ನಲಾಗುತ್ತದೆ.

56
ಬಿಎಸ್‌ವೈ ಬಗ್ಗೆಯೂ ಭವಿಷ್ಯ ನುಡಿದಿದ್ದ ಬೊಂಬೆ!

ಅದೇ ರೀತಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅಧಿಕಾರ ಬದಲಾವಣೆಗೂ ಮುನ್ನ ಬೊಂಬೆ ಮುನ್ಸೂಚನೆ ನೀಡಿತ್ತು ಎಂಬ ನಂಬಿಕೆ ಸ್ಥಳೀಯರಲ್ಲಿ ಗಟ್ಟಿಯಾಗಿದೆ. ಹೀಗಾಗಿ ಈ ಆಚರಣೆಯನ್ನು ಕೇವಲ ಮೂಢನಂಬಿಕೆ ಎಂದು ತಳ್ಳಿ ಹಾಕದ ಜನರು, ಪ್ರತಿವರ್ಷವೂ ಭಕ್ತಿಭಾವದಿಂದ “ಫಲ ಹಾಕುವ” ಸಂಪ್ರದಾಯ ಮುಂದುವರಿಸುತ್ತಿದ್ದಾರೆ.

66
ಭಯ ಹುಟ್ಟಿಸಿದ ಬೊಂಬೆ ಭವಿಷ್ಯ;

ಈ ವರ್ಷದ ಬೊಂಬೆ ಭವಿಷ್ಯ ಈಗ ರಾಜ್ಯ ರಾಜಕೀಯದ ಹೈವೋಲ್ಟೇಜ್ ಚರ್ಚೆಯಾಗಿದೆ. ಕರ್ನಾಟಕ ನಾಯಕನ ಬೊಂಬೆಗೆ ಪೆಟ್ಟು ಎಂಬ ವಿಚಾರ ಹೊರಬಿದ್ದ ಬಳಿಕ, ಮುಖ್ಯಮಂತ್ರಿ ಕುರ್ಚಿ ಕಾದಾಟಕ್ಕೂ ಇದು ಸಂಬಂಧವಿದೆಯೇ ಎಂಬ ಕುತೂಹಲ ಹೆಚ್ಚಿದೆ. ಹನುಮನಕೊಪ್ಪದ ಮಣ್ಣಿನ ಬೊಂಬೆಗಳು ಹೇಳುವ ಭವಿಷ್ಯ ಕೇವಲ ಯಾದೃಚ್ಛಿಕವೇ? ಅಥವಾ ನಿಜವಾಗಿಯೂ ರಾಜಕೀಯ ಭೂಕಂಪದ ಮುನ್ಸೂಚನೆಯೇ? ಎಂಬ ಪ್ರಶ್ನೆ ಈಗ ಜನರನ್ನು ಕಾಡತೊಡಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories