ಅಪ್ಪ ಇಲ್ಲದ ಕಂದನಿಗೆ ಅಮ್ಮನ ಆಸೆಯಂತೆ ಹೆಸರಿಟ್ಟ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ

Published : Mar 13, 2026, 10:30 AM ISTUpdated : Mar 13, 2026, 10:57 AM IST

ತುಮಕೂರಿನಲ್ಲಿ ನಡೆದ ಅಹವಾಲು ಸ್ವೀಕಾರ ಸಭೆಯಲ್ಲಿ, ತಾಯಿಯೊಬ್ಬರ ಮನವಿಯಂತೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಅಪ್ಪನಿಲ್ಲದ ಮಗುವಿಗೆ 'ಚಿರಾಗ್' ಎಂದು ನಾಮಕರಣ ಮಾಡಿದರು.

PREV
15
ತಾಯಿಯ ಆಸೆಯಂತೆ ಮಗುವಿಗೆ ಹೆಸರಿಟ್ಟ ಮಹಿಳಾ ಆಯೋಗದ ಅಧ್ಯಕ್ಷೆ

ತುಮಕೂರು: ತಾಯಿಯೊಬ್ಬರ ಆಸೆಯಂತೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಅಪ್ಪನಿಲ್ಲದ ಪುಟ್ಟ ಮಗುವಿಗೆ ಅಹವಾಲು ಸ್ವೀಕಾರ ಸಭೆಯಲ್ಲೇ ನಾಮಕರಣ ಮಾಡಿದರು.

ಇದನ್ನೂ ಓದಿ: ಅಸ್ಸಾಂನಲ್ಲಿ ಆಪರೇಷನ್ ಕಮಲ ಭೀತಿ: ಬೆಂಗಳೂರಿನಲ್ಲಿ ಬೀಡು ಬಿಟ್ಟ ಅಸ್ಸಾಂನ 12 ಕಾಂಗ್ರೆಸ್ ಶಾಸಕರು

25
ತುಮಕೂರಿನ ಬಾಲ ಭವನದಲ್ಲಿ ನಡೆದಿದ್ದ ಅಹವಾಲು ಸ್ವೀಕಾರ ಸಭೆ

ತುಮಕೂರಿನ ಎಂಜಿರಸ್ತೆಯಲ್ಲಿ ಇರುವ ಬಾಲ ಭವನದಲ್ಲಿ ನಡೆದಿದ್ದ ಅಹವಾಲು ಸ್ವೀಕಾರ ಸಭೆ ಈ ಅಪರೂಪದ ಘಟನೆಗೆ ಸಾಕ್ಷಿಯಾಯ್ತು. ತಾಯಿಯ ಆಸೆಯಂತೆ ಪುಟ್ಟ ಕಂದಮ್ಮನಿಗೆ ಮಹಿಳಾ ಆಯೋಗದ ಅಧ್ಯಕ್ಷರು ಚಿರಾಗ್ ಎಂದು ಹೆಸರಿಟ್ಟರು.

ಇದನ್ನೂ ಓದಿ: ಮೊನಾಲಿಸಾ ಜೊತೆ ಮದುವೆಗೆ ಫರ್ಮಾನ್ ಖಾನ್ ಪೋಷಕರಿಂದಲೂ ತೀವ್ರ ವಿರೋಧ: ಅವರು ಹೇಳಿದ್ದೇನು?

35
3 ತಿಂಗಳ ಮಗುವಿನೊಂದಿಗೆ ಬಂದಿದ್ದ ತಾಯಿ

ನಿನ್ನೆ ಬಾಲ ಭವನದಲ್ಲಿ ನಡೆದ ಅಹವಾಲು ಸ್ವೀಕಾರ ಸಭೆಯಲ್ಲಿ ಜನ ಕಿಕ್ಕಿರಿದು ತುಂಬಿದ್ದು, ನೂರಾರು ಮಹಿಳೆಯರು ಸಮಸ್ಯೆ ಹೊತ್ತು ಸಭೆಗೆ ಬಂದಿದ್ರು. ಹಾಗೆಯೇ ನಾಗಮಣಿ ಎಂಬ ಮಹಿಳೆ ತನ್ನ 3 ತಿಂಗಳ ಮಗುವಿನೊಂದಿಗೆ ಅಹವಾಲು ಸಲ್ಲಿಸಲು ಅಲ್ಲಿಗೆ ಬಂದಿದ್ದರು.

ಇದನ್ನೂ ಓದಿ:  ಇರಾನ್‌ನಲ್ಲಿ 2.6 ರೂ.ಗೆ ಪೆಟ್ರೋಲ್: ತೈಲ ಸಂಪದ್ಭರಿತ ವೆನೆಜುವೆಲಾದಲ್ಲಿಯೂ ಪೆಟ್ರೋಲ್‌ಗೆ 5 ರೂ.ಗಿಂತ ಕಡಿಮೆ

45
ಡಾ. ನಾಗಲಕ್ಷ್ಮಿ ಚೌಧರಿಗೆ ತಾಯಿಯ ಮನವಿ

ತುಮಕೂರು ನಗರದ ಹನುಮಂತಪುರದ ನಿವಾಸಿಯಾದ ನಾಗಮಣಿ ಅವರ ಪತಿ, ನಾಗಮಣಿ ಗರ್ಭಿಣಿ ಇದ್ದಾಗಲೇ ಸಾವನ್ನಪ್ಪಿದ್ದರು. ಹೀಗಾಗಿ ಯಾರ ಬೆಂಬಲವಿಲ್ಲದ ತನ್ನ ಮಗುವಿಗೆ ನಿಮ್ಮಿಂದಲೇ ನಾಮಕರಣ ಮಾಡಬೇಕು ಎಂದು ಮಹಿಳೆ ನಾಗಲಕ್ಷ್ಮಿ ಅವರಿಗೆ ಮನವಿ ಮಾಡಿದ್ದರು.

ಇದನ್ನೂ ಓದಿ: 683 ಕೋಟಿ ವೆಚ್ಚದಲ್ಲಿ 76 ಮೌಲಾನಾ, 41 ಉರ್ದು ಶಾಲೆ ಪಬ್ಲಿಕ್ ಶಾಲೆಗಳ ಉನ್ನತೀಕರಣಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ

55
ಗರ್ಭಿಣಿಯಾಗಿದ್ದಾಗಲೇ ಗಂಡನ ಕಳೆದುಕೊಂಡಿದ್ದ ಮಹಿಳೆ

ನನಗೆ ಗಂಡನೂ ಇಲ್ಲ, ಯಾರ ಸಪೋರ್ಟ್ ಕೂಡ ಇಲ್ಲ. ನಿಮ್ಮ ಹಾಗೆಯೇ ನನ್ನ ಮಗು ಕೂಡ ಬಹಳ ಎತ್ತರಕ್ಕೆ ಬೆಳೆಯಬೇಕು. ಹೀಗಂತ ತಾಯಿ ನಾಗಮಣಿ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿಗೆ ಮನವಿ ಮಾಡಿದ್ರು.

ತಾಯಿ ಆಸೆಯಂತೆ ಮಗುವಿಗೆ ಚಿರಾಗ್ ಎಂದು ಹೆಸರಿಟ್ಟ ಅಧ್ಯಕ್ಷರು

ಹೀಗಾಗಿ ತಾಯಿಯ ಕೋರಿಕೆಗೆ ತಕ್ಷಣವೇ ಸ್ಪಂದಿಸಿದ ಅಧ್ಯಕ್ಷರು ​ತಾಯಿಯ ಆಸೆಯಂತೆ ಪುಟ್ಟ ಕಂದಮ್ಮನಿಗೆ ಚಿರಾಗ್ ಎಂದು ಹೆಸರಿಟ್ಟರು. ಹೀಗಾಗಿ ಅನೇಕರ ಸಂಕಷ್ಟ ಪರಿಹರಿಸುವ ಅಹವಾಲು ಸಭೆ ಅಪರೂಪದ ಘಟನೆಗೆ ಸಾಕ್ಷಿಯಾಯ್ತು.

ಇದನ್ನೂ ಓದಿ: ನ್ಯಾಯೋಚಿತವಲ್ಲದ ವ್ಯಾಪಾರ: ಭಾರತ ಸೇರಿ 16 ದೇಶಗಳ ವಿರುದ್ಧ ತನಿಖೆಗೆ ಟ್ರಂಪ್ ನಿರ್ಧಾರ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories