ಹುಟ್ಟುಹಬ್ಬಕ್ಕೆ ಗಿಫ್ಟ್ ಸಿಕ್ಕ ಹೊಸ ಯೆಜ್ಡಿ ಬೈಕ್ ಏರಿ ಸಂಭ್ರಮಿಸಿದ ಡಿಸಿಎಂ ಡಿಕೆ ಶಿವಕುಮಾರ್

Published : May 16, 2026, 10:24 AM IST

ಡಿಕೆ ಶಿವಕುಮಾರ್ ಹುಟ್ಟುಹಬ್ಬಕ್ಕೆ ಹೊಚ್ಚ ಹೊಸ ಯೆಜ್ಡಿ ಬೈಕ್ ಉಡುಗೊರೆಯಾಗಿ ನೀಡಲಾಗಿತ್ತು. ಇದೀಗ ಡಿಕೆಶಿ ಹೊಸ ಬೈಕ್ ಏರಿ ಸಂಭ್ರಮಿಸಿದ್ದಾರೆ. ಡಿಕೆಶಿ ಮೊದಲ ಬೈಕ್ ಕೂಡ ಯೆಜ್ಡಿ ಆಗಿದ್ದು, ಇದೀಗ 2ನೇ ಅವರನ್ನು ಬಾಲ್ಯದ ದಿನಗಳಿಗೆ ಕೊಂಡೊಯ್ದಿದೆ.

PREV
16
ಡಿಕೆ ಶಿವಕುಮಾರ್‌ಗೆ ಯೆಜ್ಡಿ ಬೈಕ್ ಗಿಫ್ಟ್

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಈ ಬಾರಿ ಹುಟ್ಟುಹಬ್ಬದಂದು ವಿಶೇಷ ಉಡುಗೊರೆಯೊಂದು ಬಂದಿದೆ. ಭಾರತೀಯ ಕ್ಲಾಸಿಕ್ ಬೈಕ್‌ಗಳ, ಅದರಲ್ಲೂ 'ಯೆಜ್ಡಿ' ಬೈಕ್‌ಗಳ ಅಪ್ಪಟ ಅಭಿಮಾನಿಯಾಗಿರುವ ಡಿಸಿಎಂ ಅವರಿಗೆ ಜನ್ಮದಿನದ ಪ್ರಯುಕ್ತ ಹೊಚ್ಚಹೊಸ 'ರೆಡ್ ಅಂಡ್ ಬ್ಲಾಕ್' ಬಣ್ಣದ ಯೆಜ್ಡಿ ರೋಡ್‌ಸ್ಟರ್ ಬೈಕ್ ಅನ್ನು ಉಡುಗೊರೆಯಾಗಿ ನೀಡಲಾಗಿದೆ.

26
ಕಾಲೇಜು ದಿನಗಳ ನೆನೆದ ಡಿಕೆ ಶಿವಕುಮಾರ್

ಡಿ.ಕೆ. ಶಿವಕುಮಾರ್ ಅವರಿಗೆ ಮೊದಲಿನಿಂದಲೂ ಯೆಜ್ಡಿ ಬೈಕ್‌ಗಳೆಂದರೆ ಎಲ್ಲಿಲ್ಲದ ಕ್ರೇಜ್‌. ಅದೇ ಬೈಕ್‌ ಅನ್ನು ಹುಟ್ಟುಹಬ್ಬದಂದು ವಿಶೇಷ ಉಡುಗೊರೆಯನ್ನು ಸ್ವೀಕರಿಸಿದ ಅವರು, ತಮ್ಮ ಯೌವನದ ದಿನಗಳನ್ನು ನೆನಪಿಸಿಕೊಂಡರು. ಯುವಕನಾಗಿದ್ದಾಗ ಕಾಲೇಜು ದಿನಗಳಲ್ಲಿ ಫಸ್ಟ್ ಜನರೇಷನ್ ಯೆಜ್ಡಿ ಬೈಕ್‌ನಲ್ಲಿ ತಾವು ಮಾಡಿದ ಲಾಂಗ್ ರೈಡ್‌ಗಳನ್ನು ಹಾಗೂ ಆ ದಿನಗಳ ಮಧುರ ನೆನಪುಗಳನ್ನು ಅವರು ಮೆಲುಕು ಹಾಕಿದರು.

36
ಬೆಂಗಳೂರಿನ ಬೈಕ್ ರೈಡಿಂಗ್ ಕಲ್ಚರ್

ಬೆಂಗಳೂರು ನಗರ ಕೇವಲ ಐಟಿ-ಬಿಟಿ, ಎಐ ಮತ್ತು ತಂತ್ರಜ್ಞಾನಕ್ಕೆ ಮಾತ್ರವಲ್ಲದೆ, ತನ್ನದೇ ಆದ ವಿಶಿಷ್ಟ 'ಬೈಕ್-ರೈಡಿಂಗ್ ಕಲ್ಚರ್'ಗೂ ಜಗತ್ಪ್ರಸಿದ್ಧವಾಗಿದೆ. ಇಂದಿಗೂ ಉದ್ಯಾನ ನಗರಿಯ ಯುವಕರು ಮತ್ತು ಬೈಕ್ ಪ್ರೇಮಿಗಳ ಮನಸ್ಸಿನಲ್ಲಿ ಯೆಜ್ಡಿ ಬ್ರ್ಯಾಂಡ್ ತನ್ನದೇ ಆದ ವಿಶೇಷ ಸ್ಥಾನವನ್ನು ಉಳಿಸಿಕೊಂಡಿದೆ. ಇದು ಯುವ ಜನರ ಸ್ವಾತಂತ್ರ್ಯ ಮತ್ತು ಆಕಾಂಕ್ಷೆಯ ಸಂಕೇತವಾಗಿಯೂ ಗುರುತಿಸಿಕೊಂಡಿದೆ.

46
ಸಂತಸ ಹಂಚಿಕೊಂಡ ಡಿಕೆ ಶಿವುಕಮಾರ್

ಬೆಂಗಳೂರಿನ ಸಫೀನಾ ಮೋಟಾರ್ಸ್‌ನ ಮುಖ್ಯಸ್ಥರಾದ ಫಿರೋಜ್ ಸತ್ತಾರ್ ಸೇಠ್‌ ಅವರು ಡಿಸಿಎಂ ಸ್ವಗೃಹದಲ್ಲಿ ಈ ಬೈಕ್ ಅನ್ನು ಡಿ.ಕೆ. ಶಿವಕುಮಾರ್ ಅವರಿಗೆ ಜನ್ಮದಿನದ ಉಡುಗೊರೆಯಾಗಿ ಹಸ್ತಾಂತರಿಸಿದರು. ತಮ್ಮ ನೆಚ್ಚಿನ ಬೈಕ್ ಅನ್ನು ಹುಟ್ಟುಹಬ್ಬದ ಉಡುಗೊರೆಯಾಗಿ ಪಡೆದು ಮಾತನಾಡಿದ ಉಪಮುಖ್ಯಮಂತ್ರಿಗಳು, "ನನ್ನ ವಾಹನಗಳ ಕಲೆಕ್ಷನ್‌ಗೆ ಹೊಸ ಯೆಜ್ಡಿ ರೋಡ್‌ಸ್ಟರ್ ಸೇರ್ಪಡೆಯಾಗುತ್ತಿರುವುದು ನನಗೆ ಬಹಳ ಖುಷಿ ತಂದಿದೆ. ಶೀಘ್ರದಲ್ಲೇ ಈ ಬೈಕ್‌ನಲ್ಲಿ ರೈಡ್ ಹೋಗಲು ನಾನು ಕಾಯುತ್ತಿದ್ದೇನೆ. ಪ್ರತಿಯೊಬ್ಬ ನಿಜವಾದ ಬೈಕ್ ರೈಡರ್‌ನ ಆಕಾಂಕ್ಷೆ ಮತ್ತು ಸಾಧನೆಯನ್ನು ಪ್ರತಿನಿಧಿಸುವ ಇಂತಹ ಬ್ರ್ಯಾಂಡ್ ಅನ್ನು ನೋಡುವುದೇ ಒಂದು ಅದ್ಭುತ ಅನುಭವ," ಎಂದು ತಮ್ಮ ಸಂತಸ ಹಂಚಿಕೊಂಡರು.

56
ಈ ಬೈಕ್‌ನ ವಿಶೇಷತೆ ಏನು?

ಡಿಸಿಎಂ ಅವರಿಗೆ ಉಡುಗೊರೆಯಾಗಿ ನೀಡಲಾಗಿರುವ 'ರೆಡ್ ಅಂಡ್ ಬ್ಲಾಕ್' ಬಣ್ಣದ ಯೆಜ್ಡಿ ರೋಡ್‌ಸ್ಟರ್, ನೋಡುಗರಿಗೊಂದು ರಾಯಲ್ ಹಾಗೂ ಕ್ಲಾಸಿಕ್ ಲುಕ್ ನೀಡುತ್ತದೆ. ಇದು ಹಿಂದಿನ ಕಾಲದ ಸಾಂಪ್ರದಾಯಿಕ ವಿನ್ಯಾಸದೊಂದಿಗೆ, ಇಂದಿನ ಅತ್ಯಾಧುನಿಕ ಎಂಜಿನಿಯರಿಂಗ್ ತಂತ್ರಜ್ಞಾನವನ್ನು ಒಳಗೊಂಡಿದೆ. ಇಂದಿನ ಯುವ ಬೈಕ್ ಪ್ರೇಮಿಗಳನ್ನು ಸೆಳೆಯುವ ಎಲ್ಲಾ ಹೊಸ ಫೀಚರ್‌ಗಳೂ ಈ ಬೈಕ್‌ನಲ್ಲಿವೆ.

66
ಡಿಕೆ ಶಿವಕುಮಾರ್‌ಗೆ ಶುಭಾಶಯ

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರಿಗೆ ಯಜ್ಡಿ ಸಂಸ್ಥೆಯು ಆತ್ಮೀಯ ಶುಭಾಶಯಗಳನ್ನು ತಿಳಿಸಿದ್ದು, ಮುಂಬರುವ ದಿನಗಳಲ್ಲಿ ಈ ಹೊಸ ಬೈಕ್‌ನೊಂದಿಗೆ ಅವರು ಮತ್ತಷ್ಟು ಸ್ಮರಣೀಯ ರೈಡ್‌ಗಳನ್ನು ಮಾಡಲಿ ಎಂದು ಶುಭ ಹಾರೈಸಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories