Karnataka| ಬಂಡವಾಳ ಹೂಡಿಕೆಗೆ ‘ಅಕ್ಕ’ ಮೊರೆ ಹೋದ ಸಿಎಂ

First Published Nov 21, 2021, 7:32 AM IST

ಬೆಂಗಳೂರು(ನ.21):  ರಾಜ್ಯದಲ್ಲಿ(Karnataka) ಹೂಡಿಕೆಗೆ(Investment) ಪೂರಕವಾಗಿರುವ ಔದ್ಯೋಗಿಕ ವಾತಾವರಣದ ಬಗ್ಗೆ ಅಮೆರಿಕದಲ್ಲಿರುವವರಿಗೆ ತಿಳಿಸಿ ರಾಜ್ಯದಲ್ಲಿ ಹೂಡಿಕೆ ಮಾಡಲು ಉತ್ತೇಜಿಸಿ. ಇಲ್ಲಿ ಬಂಡವಾಳ ಹೂಡುವವರಿಗೆ ಎಲ್ಲಾ ರೀತಿಯ ನೆರವು ಹಾಗೂ ಸಹಕಾರ ನೀಡಲು ನಾವು ಬದ್ಧರಾಗಿದ್ದೇವೆ ಎಂದು ಅಮೆರಿಕದಲ್ಲಿ(America) ನೆಲೆಸಿರುವ ಕನ್ನಡಿಗರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಭರವಸೆ ನೀಡಿದ್ದಾರೆ.

ರಾಜ್ಯದ ಎಲ್ಲಾ ಉದ್ಯಮಗಳಲ್ಲಿ ಕನ್ನಡಿಗರಿಗೆ(Kannadigas) ಅತಿ ಹೆಚ್ಚು ಉದ್ಯೋಗ ಕೊಡಿಸಲು ನಾವು ಬದ್ಧವಾಗಿದ್ದೇವೆ. ಉದ್ಯೋಗದಲ್ಲಿ(Job) ಕನ್ನಡಿಗರಿಗೆ ಅವಕಾಶ ಕೊಡಿಸುವ ಪ್ರಯತ್ನ ಹಲವು ಬಾರಿ ಸಫಲತೆ ನೀಡಿಲ್ಲ. ಹಾಗಾಗಿ ಇದಕ್ಕೆ ವಿಶೇಷ ಕಾರ್ಯಕ್ರಮವನ್ನು ರೂಪಿಸಬೇಕಿದೆ. ಬರುವ ದಿನಗಳಲ್ಲಿ ಎಲ್ಲಾ ಉದ್ಯಮಗಳಲ್ಲಿ ಕನ್ನಡಿಗರಿಗೆ ಅತಿ ಹೆಚ್ಚು ಉದ್ಯೋಗ ಕೊಡಬೇಕು ಎಂದು ನಾವು ಈಗಾಗಲೇ ತಿಳಿಸಿದ್ದೇವೆ. ಕಾನೂನಿನಲ್ಲಿಯೂ ಅವಕಾಶ ಇದೆ. ಅದನ್ನು ಅಕ್ಷರಶಃ ಪಾಲಿಸಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ ಸಿಎಂ ಬೊಮ್ಮಾಯಿ

ಅಮೆರಿಕ ಕನ್ನಡ ಕೂಟಗಳ ಸಂಘ(Association of Kannada Kootas of America) (ಅಕ್ಕ) ವತಿಯಿಂದ ಶನಿವಾರ ಆಯೋಜಿಸಿದ್ದ ‘ಕನ್ನಡ ರಾಜ್ಯೋತ್ಸವ(Karnataka Rajyotsava) ಸಂಭ್ರಮ 2021’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ತಮ್ಮ ನಿವಾಸದಿಂದ ವರ್ಚುಯಲ್‌ ಆಗಿ ಭಾಗವಹಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಕನ್ನಡಿಗರಿಗೆ ಎಲ್ಲಾ ಅರ್ಹತೆಗಳಿದ್ದು ಅವಕಾಶ ಬೇಕಿದೆ. ಅಮೆರಿಕಕ್ಕೆ ಹೋಗಿರುವವರು ನೂರಕ್ಕೆ ನೂರರಷ್ಟು ಅಲ್ಲಿ ಯಶಸ್ವಿಯಾಗಿದ್ದಾರೆ. ನಮ್ಮವರು ವಿದೇಶಕ್ಕೆ ಹೋಗಿ ಅಲ್ಲಿನ ಪರಿಸರಕ್ಕೆ ಹೊಂದಿಕೊಂಡು ಅಲ್ಲಿ ಯಶಸ್ವಿಯಾಗಲು ಸಾಧ್ಯವಿದ್ದರೆ, ನಮ್ಮ ಕನ್ನಡನಾಡಿನಲ್ಲಿ ಆಗುವುದು ಕಷ್ಟವೇನಲ್ಲ. ಅದಕ್ಕೆ ಅವರಿಗೆ ಅವಕಾಶಗಳನ್ನು ಕಲ್ಪಿಸಬೇಕಿದೆ ಎಂದ ಬೊಮ್ಮಾಯಿ

ಅಮೆರಿಕದಲ್ಲಿ ನೆಲೆಸಿರುವ ನೀವು ರಾಜ್ಯದ ಅಭಿವೃದ್ಧಿ ಹಾಗೂ ಬೆಳವಣಿಗೆಗೆ ಒಂದು ರೀತಿಯಲ್ಲಿ ರಾಯಭಾರಿಗಳು. ಹೀಗಾಗಿ ರಾಜ್ಯದಲ್ಲಿರುವ ಅತ್ಯುತ್ತಮ ಔದ್ಯೋಗಿಕ ವಾತಾವರಣದ ಬಗ್ಗೆ ಅವರಿಗೆ ತಿಳಿಸಿ. ಇಲ್ಲಿ ಬಂಡವಾಳ ಹೂಡಿಕೆ ಮಾಡುವಂತೆ ಪ್ರಯತ್ನ ಮಾಡಿ. ಇದಕ್ಕಾಗಿ ರಾಜ್ಯ ಸರ್ಕಾರ(Government of Karnataka) ತನ್ನ ಎಲ್ಲಾ ಸಹಕಾರ ನೀಡಲಿದ್ದು, ತಮ್ಮ ಎಲ್ಲ ಕಾರ್ಯಕ್ರಮಗಳಿಗೆ ಸಂಪೂರ್ಣ ಜತೆಗೆ ನಿಲ್ಲಲಿದೆ ಎಂದು ಭರವಸೆ ನೀಡಿದ ಮುಖ್ಯಮಂತ್ರಿಗಳು

ಕಡು ಬಡ ಕನ್ನಡಿಗನಿಗೆ ಆರ್ಥಿಕ ಸಬಲತೆ ಕೊಡುವ ಅವಶ್ಯಕತೆ ಇದೆ. ಇದಕ್ಕೆ ಪೂರಕವಾಗಿ ನಮಗೆ ಶಿಕ್ಷಣ(Education) ಕ್ಷೇತ್ರದ ಬೆಂಬಲ ಬೇಕು. ಕೌಶಲ್ಯ ತರಬೇತಿ, ಉನ್ನತ ಶಿಕ್ಷಣದಲ್ಲಿ ಕನ್ನಡ ಬಳಕೆ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸಬೇಕಿದೆ. ಅದಕ್ಕೆ ನಾವು ಸಿದ್ಧವಾಗಿದ್ದೇವೆ ಎಂದರು. ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್‌ಕುಮಾರ್‌, ಅಕ್ಕ ಸಂಘಟನೆಯ ಅಧ್ಯಕ್ಷ ತುಮಕೂರು ದಯಾನಂದ ಸೇರಿ ಹಲವರು ಹಾಜರಿದ್ದರು.

ನನ್ನ ಸರ್ಕಾರ ಕನ್ನಡದಿಂದ ಹುಟ್ಟಿರುವ ಸರ್ಕಾರ. ಕನ್ನಡಕ್ಕಾಗಿ ಹುಟ್ಟಿರುವ ಸರ್ಕಾರ. ಕನ್ನಡ ಪರ ಸರ್ಕಾರ ನಿರಂತರವಾಗಿ ಇರಲಿದೆ. ಜಾಗತೀಕರಣ, ಉದಾರೀಕರಣದ, ಖಾಸಗೀಕರಣದ ಹಿನ್ನೆಲೆಯಲ್ಲಿ ಅಂತಃಕರಣವನ್ನು ಮರೆತಿದ್ದೇವೆ. ಆದರೆ, ಅಂತಹ ಅಂತಃಕರಣವನ್ನು ಈಗ ಅಕ್ಕ ಸಂಘಟನೆ ಮೂಲಕ ನೋಡುತ್ತಿದ್ದೇವೆ. ಈ ಅಂತಃಕರಣ ಸದಾಕಾಲ ಇರಲಿ ಎಂದು ಸಿಎಂ ಬೊಮ್ಮಾಯಿ ಹಾರೈಸಿದರು.

click me!