ಇಂದು ಮುಂಜನಾಎ 5.30ರ ಸುಮಾರಿಗೆ ತಿರುಪತಿಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಮ್ಮಪ್ಪನ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಟಿಟಿಡಿ ವತಿಯಿಂದ ಸನ್ಮಾನ ಮಾಡಲಾಯಿತು . ಇನ್ನು ಇದಾದ ಬಳಿ ಸಿಎಂ ಬೊಮ್ಮಾಯಿ ತಿರುಪತಿಯ ವೆಂಕಟೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ನಿರ್ಮಾಣವಾಗುತ್ತಿರುವ ಕರ್ನಾಟಕ ಭವನ ನಿರ್ಮಾಣದ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದರು.
ಇಂದು ಬೆಳಗ್ಗೆ 5.30 ಯಲ್ಲಿ ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನ ಪಡೆದ ಸಿಎಂ ಬಸವರಾಜ ಬೊಮ್ಮಾಯಿ. ಈ ಸಂದರ್ಭದಲ್ಲಿ ಟಿಟಿಡಿ ವತಿಯಿಂದ ಸಿಎಂಗೆ ಬೊಮ್ಮಾಯಿಗೆ ಸನ್ಮಾನ ಮಾಡಲಾಯಿತು.
210
CM Bommai
ತಿಮ್ಮಪ್ಪನ ದರ್ಶನ ಪಡೆದ ನಂತರ ಟಿಟಿಡಿ ವತಿಯಿಂದ ಸಿಎಂಗೆ ಸನ್ಮಾನ ನಡೆದಿದ್ದು ಈ ವೇಳೆ ಸಚಿವರಾದ ಡಾ. ಸುಧಾಕರ್, ಮುನಿರತ್ನ, ಶಾಸಕ ಎಸ್ ಆರ್ ವಿಶ್ವನಾಥ್ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಮತ್ತು ಇತರರು ಉಪಸ್ಥಿತರಿದ್ದರು
310
CM Bommai
ತಿರುಪತಿಗೆ ಭೇಟಿ ನಿಡಿದ್ದ ಸಂದರ್ಭದಲ್ಲಿ ಸಿಎಂ ತಿರುಪತಿಯ ವೆಂಕಟೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ನಿರ್ಮಾಣವಾಗುತ್ತಿರುವ ಕರ್ನಾಟಕ ಭವನ ನಿರ್ಮಾಣದ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದರು.
410
CM Bommai
ತಿರುಪತಿಯ ವೆಂಕಟೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ನಿರ್ಮಾಣವಾಗುತ್ತಿರುವ ಕರ್ನಾಟಕ ಭವನ ನಿರ್ಮಾಣದ ಕಟ್ಟಡ ಕಾಮಗಾರಿಯನ್ನು 200 ಕೋಟಿ ರೂಪಾಯಿ ವೆಚ್ಚದಲ್ಲಿ ಆಗುತ್ತಿದೆ.
510
CM Bommai
ಕಾಮಗಾರಿಯನ್ನು ಶೀಘ್ರವಾಗಿ ಮುಕ್ತಗೊಳಿಸಿ ಕರ್ನಾಟಕ ಭವನವನ್ನು ಲೋಕಾರ್ಪಣೆ ಮಾಡುವಂತೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸಿಎಂ ಸೂಚನೆ ನೀಡಿದರು
610
CM Bommai
ಈ ಸಂದರ್ಭದಲ್ಲಿ ಸಚಿವರಾದ ಡಾ. ಕೆ ಸುಧಾಕರ್, ಮುನಿರತ್ನ, ಬಿಡಿಎ ಅಧ್ಯಕ್ಷ ಎಸ್ಆರ್ ವಿಶ್ವನಾಥ್ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ, ಗುಪ್ತ ವಾರ್ತೆ ಇಲಾಖೆಯ ಎಡಿಜಿಪಿ ದಯಾನಂದ್, ಟಿಟಿಡಿ ನಿರ್ದೇಶಕ ಎಂಎನ್ ಶಶಿಧರ ಮತ್ತಿತರರು ಉಪಸ್ಥಿತರಿದ್ದರು..
710
CM Bommai
ಆಂಧ್ರ ಪ್ರದೇಶದಲ್ಲಿರುವ ತಿರುಪತಿ ತಿಮ್ಮಪ್ಪನ ದೇಗುಲದ ಸಮೀಪದಲ್ಲಿ ಕರ್ನಾಟಕದ ಭವನ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ಕಾಮಗಾರಿ ಪ್ರಕ್ರಿಯೆಗೆ ಚಾಲನೆಯೂ ಸಿಕ್ಕಿದೆ.
810
CM Bommai
ರಾಜ್ಯ ಮುಜರಾಯಿ ಇಲಾಖೆಯು ಪ್ರಸಿದ್ಧ ತೀರ್ಥಕ್ಷೇತ್ರಗಳಾದ ಪಂಢರಪುರ, ಗುಡ್ಡಾಪುರ ಹಾಗೂ ಶ್ರೀಶೈಲಗಳಲ್ಲಿ ಕರ್ನಾಟಕ ಭವನ ನಿರ್ಮಿಸಲು ಪ್ರಯತ್ನಿಸುತ್ತಿದ್ದು, ಶೀಘ್ರವೇ ಭೂಮಿ ಪೂಜೆ ನೆರವೇರಿಸಲಾಗುತ್ತದೆ
910
CM Bommai
ಪ್ರಸಿದ್ಧ ಕ್ಷೇತ್ರವಾದ ಲಕ್ಷಾಂತರ ಭಕ್ತರು ಭೇಟಿ ನೀಡುವ ತಿರುಪತಿ ವೆಂಕಟರಮಣನ ದೇಗುಲದ ಬಳಿಯಲ್ಲಿ ಇದೀಗ ಕರ್ನಾಟಕ ಭವನ ನಿರ್ಮಾನ ಮಾಡಲಾಗುತ್ತಿದೆ.
1010
CM Bommai
ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಅವರು ದೇಗುಲದ ದರ್ಶನದೊಂದಿಗೆ ಕರ್ನಾಟಕ ಭವನದ ಕಾಮಗಾರಿಯನ್ನು ವೀಕ್ಷಿಸಿ ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು.