Southern Zonal Council Meeting| ಅಕ್ರಮ ಜಲಯೋಜನೆಗಳಿಗೆ ಬೊಮ್ಮಾಯಿ ಆಕ್ಷೇಪ

Kannadaprabha News   | Asianet News
Published : Nov 15, 2021, 07:48 AM IST

ಬೆಂಗಳೂರು(ನ.15):  ಜಲ ನ್ಯಾಯಮಂಡಳಿ(Water Tribunal) ತೀರ್ಪನ್ನು ಉಲ್ಲಂಘಿಸಿ ಹೆಚ್ಚುವರಿ ನೀರಿನ ಬಳಕೆಗೆ ಯೋಜಿಸಿರುವ ಬೃಹತ್‌ ಮಟ್ಟದ ಶಾಶ್ವತ ಯೋಜನೆಗಳಿಗೆ ಕೇಂದ್ರ ಸರ್ಕಾರ(Central Government) ಶಾಸನಬದ್ಧ ಅನುಮೋದನೆ ನೀಡಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಪುನರುಚ್ಚರಿಸಿದ್ದಾರೆ.

PREV
110
Southern Zonal Council Meeting| ಅಕ್ರಮ ಜಲಯೋಜನೆಗಳಿಗೆ ಬೊಮ್ಮಾಯಿ ಆಕ್ಷೇಪ

ಭಾನುವಾರ ಆಂಧ್ರಪ್ರದೇಶದ(Andhra Pradesh) ತಿರುಪತಿಯಲ್ಲಿ(Tirupati) ಕೇಂದ್ರ ಗೃಹ ಸಚಿವ ಅಮಿತ್‌ ಶಾ(Amit Shah) ನೇತೃತ್ವದಲ್ಲಿ ನಡೆದ ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳನ್ನು(Chief Ministers of the Southern States) ಒಳಗೊಂಡ ದಕ್ಷಿಣ ವಲಯ ಪರಿಷತ್ತಿನ 29ನೇ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದ ಸಿಎಂ ಬೊಮ್ಮಾಯಿ

210

ನಾವು ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡಿದರೆ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಹಲವಾರು ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಬಹುದು. ದಕ್ಷಿಣ ಭಾರತದ(South India) ರಾಜ್ಯಗಳೆಲ್ಲವೂ ಪ್ರಾಕೃತಿಕವಾಗಿ ಸಂಪರ್ಕಿತವಾಗಿರುವುದರಿಂದ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುವುದು ಅನಿವಾರ್ಯ. ದಕ್ಷಿಣದ ರಾಜ್ಯಗಳು ಸ್ವತಂತ್ರವಾಗಿ ಅಲ್ಲದೆ, ಪರಸ್ಪರ ಅವಲಂಬಿತರಾಗಿ ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ ಪರಿಸ್ಥಿತಿ ಇದೆ. ರಾಷ್ಟ್ರದ ಒಳಿತಿಗಾಗಿ ಒಮ್ಮತದಿಂದ ಕೆಲಸ ಮಾಡಿದಾಗ ಭಾರತದ ಅಭಿವೃದ್ಧಿ ಸಾಧ್ಯ. ಪ್ರಧಾನ ಮಂತ್ರಿಗಳ ಸಹಕಾರಿ ಸಂಯುಕ್ತ ತತ್ವ ನಮ್ಮ ಮೂಲಮಂತ್ರವಾಗಬೇಕು. ಒಟ್ಟಾಗಿ ಕೆಲಸ ಮಾಡುವ ಮೂಲಕ ಇದನ್ನು ಸಂಪೂರ್ಣವಾಗಿ ಅನುಷ್ಠಾನಕ್ಕೆ ತರುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಹೇಳಿದ ಸಿಎಂ

310

ಹಂಚಿಕೆಯ ಹೊರತಾಗಿ ಕೃಷ್ಣಾ ನೀರಿಗೆ ಸಂಬಂಧಿಸಿದಂತೆ ಆಂಧ್ರ ಪ್ರದೇಶ ಹಾಗೂ ತೆಲಂಗಾಣ(Telangana) ರಾಜ್ಯಗಳ ಯಾವುದೇ ಯೋಜನೆಗಳಿಗೆ ಅನುಮತಿಯಿಲ್ಲ. ಕೃಷ್ಣಾ ನದಿ(Krishna River) ಮೂಲಕ ಶ್ರೀಶೈಲಂ ಜಲಾಶಯದಲ್ಲಿ ಅಪಾರ ಮೊತ್ತದ ಹೆಚ್ಚುವರಿ ನೀರನ್ನು ಬಳಸಿಕೊಂಡು ಪಲಮುರು ರಂಗಾರೆಡ್ಡಿ ಮತ್ತು ನಕ್ಕಲಗಂಡಿಯಲ್ಲಿ ಏತನೀರಾವರಿ ಯೋಜನೆಗಳನ್ನು ಕೈಗೊಳ್ಳಲು ತೆಲಂಗಾಣ ಅಥವಾ ಅಪೆಕ್ಸ್ ಮಂಡಳಿಗೆ ಅಧಿಕಾರವಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದ ಸಿಎಂ ಬೊಮ್ಮಾಯಿ

410

2050ರಲ್ಲಿ ಪರಿಶೀಲನೆಗೆ ಒಳಪಡುವ ನೆಪದಲ್ಲಿ ಉಳಿಕೆ ನೀರನ್ನು ಬಳಸುವ ತೆಲಂಗಾಣ ರಾಜ್ಯದ ರಾಜೀವ್‌ಗಾಂಧಿ ಸಂಗಮ ಬಂಡಾ ಬ್ಯಾರೇಜ್‌ ನಿರ್ಮಾಣಕ್ಕೆ ಕರ್ನಾಟಕದ ವಿರೋಧವಿದೆ. ಶಾಶ್ವತ ಯೋಜನೆಗಳಿಂದಾಗಿ ಉಳಿಕೆ ನೀರನ್ನು ಬಳಸಲು ಅನುಮತಿ ನೀಡಿದರೆ ಕರ್ನಾಟಕ ತನಗೆ ದೊರೆಯಬೇಕಾದ ಸಮಪಾಲಿನಿಂದ ವಂಚಿತವಾಗಲಿದೆ. ಈ ಬಗ್ಗೆ ಜಂಟಿ ಸಮೀಕ್ಷೆಯಲ್ಲಿ ರಾಜ್ಯ ಕೈಜೋಡಿಸಲು ಸಿದ್ಧವಿದೆ ಎಂದು ತಿಳಿಸಿದರು 

510

ತುಂಗಭದ್ರಾ ನದಿಗೆ ಅಡ್ಡಲಾಗಿ ಆಂಧ್ರಪ್ರದೇಶ ನಿರ್ಮಿಸುತ್ತಿರುವ ಗುಂದ್ರವುಲು ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಮುಳುಗಡೆಯಾಗಲಿರುವ ಗ್ರಾಮಗಳು ಮತ್ತು ಭೂಪ್ರದೇಶದ ಕುರಿತು ಜಂಟಿ ಸಮೀಕ್ಷೆಯಾಗಬೇಕು. ನ್ಯಾಯಮಂಡಳಿಗೆ ಸಲ್ಲಿಸಿರುವಂತೆ ನೀರು ಹಂಚಿಕೆಯ ವಿವರಗಳನ್ನು ಹಾಗೂ ಕೇಂದ್ರ ಸರ್ಕಾರದಿಂದ ಪಡೆದಿರುವ ಅನುಮೋದನೆಗಳ ವಿವರಗಳನ್ನು ಸಲ್ಲಿಸುವಂತೆ ಮುಖ್ಯಮಂತ್ರಿಗಳು ಕೋರಿದರು.

610

ಕರ್ನಾಟಕವು(Karnataka) ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯವಾಗಿದ್ದು, ಕೇಂದ್ರ ಸರ್ಕಾರದ ನವೀಕರಿಸಬಹುದಾದ ಖರೀದಿ ಬದ್ಧತೆ ಗುರಿಗಳನ್ನು ಸಾಧಿಸಿರುವ ಏಕೈಕ ರಾಜ್ಯವಾಗಿದೆ. ಹೂಡಿಕೆದಾರರ ದೃಷ್ಟಿಯಿಂದ ಅಂತಾರಾಜ್ಯ ದರಪಟ್ಟಿಯಲ್ಲಿನ ವ್ಯತ್ಯಾಸವನ್ನು ತೆಗೆದುಹಾಕಬೇಕು ಎಂದು ಇದೇ ವೇಳೆ ಬೊಮ್ಮಾಯಿ ಮನವಿ ಮಾಡಿದರು.

710

ಬೊಮ್ಮಾಯಿ ಪ್ರಸ್ತಾಪಿಸಿದ ಇತರ ಪ್ರಮುಖ ಅಂಶಗಳು

1.ಗೋದಾವರಿ, ಕಾವೇರಿ ಮತ್ತು ಇತರೆ ನದಿಗಳ ಲಿಂಕ್‌ ಯೋಜನೆ ಬಗ್ಗೆ ರಾಜ್ಯ ತನ್ನ ಅಭಿಪ್ರಾಯವನ್ನು ಈಗಾಗಲೇ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಗೆ ತಿಳಿಸಿದೆ. ಕಾವೇರಿ, ಕೃಷ್ಣಾ ಮತ್ತು ಪೆನ್ನಾರ್‌ ಜಲಾನಯನ ಪ್ರದೇಶದಲ್ಲಿ ರಾಜ್ಯಕ್ಕೆ ತನ್ನ ಪಾಲಿನ ನೀರು ಹಂಚಿಕೆಯಾಗಬೇಕು.

810

2. ಸಹ ಜಲಾನಯನ ಪ್ರದೇಶಗಳನ್ನು ಹೊಂದಿರುವ ರಾಜ್ಯಗಳ ಪಾಲನ್ನು ನಿರ್ಧರಿಸಲಾಗಿಲ್ಲದಿದ್ದರೂ ತಮಿಳುನಾಡು ಕಾವೇರಿ-ವಗೈ-ಗುಂಡಾರ್‌ ಸಂಪರ್ಕ ಕಾಮಗಾರಿಯನ್ನು ಮುಂದುವರೆಸಿದೆ. ಇದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಹೀಗಾಗಿ, ಕಾವೇರಿ-ವಗೈ-ಗುಂಡಾರ್‌ ಸಂಪರ್ಕದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಅನುಮೋದಿಸಬಾರದು.

910

3. ಕರ್ನಾಟಕ ಹಾಗೂ ನೆರೆರಾಜ್ಯಗಳ ನಡುವೆ ಅಂತರ ರಾಜ್ಯ ಪರಸ್ಪರ ಸಾರಿಗೆ ಒಪ್ಪಂದಕ್ಕೆ ಸಂಬಂಧಿಸಿದಂತೆ ತೆಲಂಗಾಣ, ಪುದುಚೆರಿ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯಗಳ ಒಪ್ಪಿಗೆಯನ್ನು ನಿರೀಕ್ಷಿಸಲಾಗಿದ್ದು, ಈ ಬಗ್ಗೆ ತ್ವರಿತ ಕ್ರಮ ಕೈಗೊಳ್ಳಬೇಕು.

1010

4. ಅಂತಾರಾಜ್ಯ ಗೃಹ ಇಲಾಖೆಗಳ ಸಮನ್ವಯ ಹಲವು ಅಪರಾಧಗಳನ್ನು ತಡೆಗಟ್ಟಲು ಅಗತ್ಯವಾಗಿದೆ. ಗಡಿಗಳಲ್ಲಿ ಸಂಪರ್ಕ ಜಾಲಗಳನ್ನು ಬಲಪಡಿಸಬೇಕು.

Read more Photos on
click me!

Recommended Stories