IndiGO bengaluru-chennai flight: ರನ್‌ವೇಗೆ ಬರ್ತಿದ್ದಂತೆ ಇಂಡಿಗೋ ವಿಮಾನದಲ್ಲಿ ಹೊಗೆ, ಎಮರ್ಜೆನ್ಸಿ ಡೋರ್‌ನಿಂದ ಓಡಿ ಬಂದ ಪ್ರಯಾಣಿಕರು!

Published : May 27, 2026, 06:34 AM IST

ಬೆಂಗಳೂರಿನಿಂದ ಚೆನ್ನೈಗೆ ತೆರಳುವುದಕ್ಕೆ ಅಣಿಯಾಗಿದ್ದ ಇಂಡಿಗೋ ವಿಮಾನವು ರನ್‌ ವೇ ಕಡೆಗೆ ಪ್ರಯಾಣಿಸುತ್ತಿದ್ದಾಗ ಹೊಗೆ ಕಾಣಿಸಿಕೊಂಡಿದೆ. ಈ ವೇಳೆ ಕೂಡಲೇ ಪ್ರಯಾಣಿಕರನ್ನು ಮತ್ತು ಸಿಬ್ಬಂದಿಯನ್ನು ಟರ್ಮಿನಲ್‌ಗೆ ಸ್ಥಳಾಂತರಿಸಲಾಯಿತು.

PREV
16
Bengaluru-Chennai IndiGo Flight smoke: ಇಂಡಿಗೋ ವಿಮಾನದಲ್ಲಿ ಹೊಗೆ!

ಬೆಂಗಳೂರಿನಿಂದ ಚೆನ್ನೈಗೆ ತೆರಳಲು ಅಣಿಯಾಗಿದ್ದ ಇಂಡಿಗೋ 6E6017 ವಿಮಾನದಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡ ಘಟನೆ ಪ್ರಯಾಣಿಕರಲ್ಲಿ ಭಾರೀ ಆತಂಕ ಹುಟ್ಟಿಸಿತು. ರನ್‌ವೇ ಕಡೆಗೆ ಸಾಗುತ್ತಿದ್ದ ವೇಳೆ ಹೊಗೆ ಕಾಣಿಸಿಕೊಂಡ ಹಿನ್ನೆಲೆ ವಿಮಾನ ಸಿಬ್ಬಂದಿ ತಕ್ಷಣ ಎಚ್ಚರಿಕೆ ಪ್ರಯಾಣಿಕರನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು.

26
IndiGo Fligh Smoke: ಎಮರ್ಜೆನ್ಸಿ ಡೋರ್‌ನಿಂದ ಹಾರಿದ ಪ್ರಯಾಣಿಕರು

ವಿಮಾನದಲ್ಲಿ ಹೊಗೆ ಕಾಣಿಸುತ್ತಿದ್ದಂತೆಯೇ ಕೆಲ ಪ್ರಯಾಣಿಕರು ಭಯದಿಂದ ಎಮರ್ಜೆನ್ಸಿ ಡೋರ್ ಮೂಲಕ ಹೊರಬಂದರು. ಕೆಲವರು ಗಾಬರಿಯಿಂದ ಓಡಿಬಂದು ಟರ್ಮಿನಲ್‌ನತ್ತ ಓಡಿದರು. ಈ ಘಟನೆಯಿಂದ ಏರ್ಪೋರ್ಟ್‌ನಲ್ಲಿ ಕೆಲಕಾಲ ಆತಂಕ ಸೃಷ್ಟಿಸಿತು.

36
IndiGo Fligh Smoke: ತಕ್ಷಣ ಪ್ರಯಾಣಿಕರ ಸ್ಥಳಾಂತರಿಸಿದ ಸಿಬ್ಬಂದಿ

ಸುರಕ್ಷತೆ ದೃಷ್ಟಿಯಿಂದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಕೂಡಲೇ ಟರ್ಮಿನಲ್‌ಗೆ ಸ್ಥಳಾಂತರಿಸಲಾಯಿತು. ಘಟನೆ ಬಳಿಕ ವಿಮಾನ ಸಂಚಾರದಲ್ಲಿ ಕೆಲಕಾಲ ಗೊಂದಲ ಉಂಟಾದರೂ, ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

46
ಬೆಂಗಳೂರು-ಚೆನ್ನೈ ಇಂಡಿಗೋ ವಿಮಾನದಲ್ಲಿ ಹೊಗೆ ತುರ್ತು ಭೂಸ್ಪರ್ಶ

ಘಟನೆ ನಿನ್ನೆ ಸಂಜೆ ಬೆಂಗಳೂರಿನ ಏರ್ಪೋರ್ಟ್‌ನಲ್ಲಿ ನಡೆದಿದ್ದು, ವಿಮಾನದಲ್ಲಿನ ಹೊಗೆ ಕಾಣಿಸಿಕೊಂಡ ನಿಖರ ಕಾರಣ ಕುರಿತು ತಾಂತ್ರಿಕ ಪರಿಶೀಲನೆ ಮುಂದುವರಿದಿದೆ. ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

56
ಆತಂಕದಿಂದ ಹೊರಗೆ ಓಡಿ ಬಂದ ಪ್ರಯಾಣಿಕರು

ಹೊಗೆ ಕಾಣಿಸುತ್ತಿದ್ದಂತೆ ಪ್ರಯಾಣಿಕರು ಆತಂಕದಿಂದ ಹೊರಗೆ ಓಡಿಬಂದರು, ಕೆಲವರು ಒಂದು ಕ್ಷಣ ಯೋಚಿಸದೇ ತುರ್ತು ಬಾಗಿಲು ಮೂಲಕ ಹೊರಗೆ ಹಾರಿದರು. ಮಕ್ಕಳ ವೃದ್ಧರು ಆತಂಕದಲ್ಲಿರುವುದು ವಿಡಿಯೋದಲ್ಲಿ ಕಾಣಬಹುದು.

66
Bengaluru-Chennai Indigo flight: ಇಂಡಿಗೋದಿಂದ ಅಧಿಕೃತ ಸ್ಪಷ್ಟನೆ

ಈ ಬಗ್ಗೆ ಇಂಡಿಗೋ ಸಂಸ್ಥೆ ಪ್ರಕಟಣೆ ಹೊರಡಿಸಿದ್ದು, 'ಬೆಂಗಳೂರು-ಚೆನ್ನೈ 6E6017 ವಿಮಾನವು ಹಾರಾಟಕ್ಕೆ ಸಿದ್ಧವಾಗುತ್ತಿದ್ದ ವೇಳೆ ಹೊಗೆ ಕಾಣಿಸಿಕೊಂಡ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಪ್ರಯಾಣಿಕರಿಗೆ ಪರ್ಯಾಯ ವಿಮಾನ ವ್ಯವಸ್ಥೆ ಮಾಡಲಾಗಿದೆ' ಎಂದು ತಿಳಿಸಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories