Published : May 16, 2026, 07:13 AM ISTUpdated : May 16, 2026, 07:19 AM IST
ಬೆಳಗಾವಿಯಲ್ಲಿ ಸದ್ದಿಲ್ಲದೆ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿದ್ದ ಉದ್ಯಮಿ ಶಿವಾನಂದ ನೀಲಣ್ಣವರ ಬಂಧನ ಇಡೀ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಒಂದೆಡೆ ಕಾನೂನು ಉಲ್ಲಂಘನೆ, ಇನ್ನೊಂದೆಡೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ವಿಡಿಯೋಗಳ ಹವಾ! ಈ ಇಡೀ ಹೈಡ್ರಾಮಾದ ರೋಚಕ ಫೋಟೋ ಸ್ಟೋರಿ ಇಲ್ಲಿದೆ.
ಶಿವಾನಂದ ನೀಲಣ್ಣನವರ: ಒಂದೇ ಒಂದು ವಿಡಿಯೋದಿಂದ ಕೆಟ್ಟಿತು ಗ್ರಹಚಾರ!
ದಶಕಗಳಿಂದ ಬೆಳಗಾವಿಯಲ್ಲಿ ಸದ್ದಿಲ್ಲದೆ ವ್ಯವಹಾರ ನಡೆಸುತ್ತಿದ್ದ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ ಇತ್ತೀಚಿನವರೆಗೂ ಅಷ್ಟಾಗಿ ಯಾರಿಗೂ ಗೊತ್ತಿರಲಿಲ್ಲ. ಆದರೆ, ಕಡೂರಿನ ಕಾರ್ಯಕ್ರಮವೊಂದರಲ್ಲಿ ಅವರು ಆಡಿದ ಮಾತುಗಳು ಅವರ ಇಡೀ ಸಾಮ್ರಾಜ್ಯವೇ ಅಲುಗಾಡಿಸಿದೆ. ‘ನನ್ನ ಬಳಿ 15 ಸಾವಿರ ಬಂದೂಕುಗಳಿವೆ, ನಾವೂ ಯಾರಿಗೂ ಹೆದರಲ್ಲ’ ಎಂದಿದ್ದ ಇವರ ಭಾಷಣದ ವಿಡಿಯೋ ಭಾರಿ ವೈರಲ್ ಆಗಿತ್ತು. ಆ ಮಾತುಗಳೇ ಈಗ ಕಂಟಕವಾಗಿ ಪರಿಣಮಿಸಿವೆ.
26
ಬೃಹತ್ ಕಟೌಟ್‌ಗಳು ರಾರಾಜಿಸಿದ ಬೆನ್ನಲ್ಲೇ ಶುರುವಾಯ್ತು ಕಂಟಕ!
ವೈರಲ್ ವಿಡಿಯೋದಿಂದ ರಾಜ್ಯಮಟ್ಟದಲ್ಲಿ ಪ್ರಸಿದ್ಧಿ ಪಡೆದ ಬೆನ್ನಲ್ಲೇ, ಮೇ 17ರಂದು ಸುಮಾರು 20 ಸಾವಿರ ಜನರನ್ನು ಸೇರಿಸಿ ಬೆಳಗಾವಿ ನಗರ ಸ್ವಚ್ಛತೆ ಮಾಡಲು ನೀಲಣ್ಣವರ ಮುಂದಾಗಿದ್ದರು. ಇದಕ್ಕಾಗಿ ನಗರದಾದ್ಯಂತ ಅವರ ದೊಡ್ಡ ದೊಡ್ಡ ಕಟೌಟ್‌ಗಳು ರಾರಾಜಿಸಲು ಆರಂಭಿಸಿದವು. ಆದರೆ, ಈ ಅತಿಯಾದ ಪ್ರಚಾರವೇ ಅವರಿಗೆ ಒಂದೊಂದಾಗಿ ಕಂಟಕ ತರಲು ವೇದಿಕೆ ಸಿದ್ಧ ಮಾಡಿತು.
36
ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ್ ಕುಮಾರ್ ನೇತೃತ್ವದಲ್ಲಿ ದಾಳಿ
ನಿಯಮ ಬಾಹಿರವಾಗಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಠೇವಣಿ ಪಡೆದ ಆರೋಪ ಕೇಳಿಬರುತ್ತಿದ್ದಂತೆ, ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ್ ಕುಮಾರ್ ನೇತೃತ್ವದ ತಂಡ ಶಿವಾನಂದ ಅವರ ಕಚೇರಿ ಮತ್ತು ನಿವಾಸದ ಮೇಲೆ ಹಠಾತ್ ದಾಳಿ ನಡೆಸಿತು. ಬರೋಬ್ಬರಿ 20 ಗಂಟೆಗಳ ಕಾಲ ನಿರಂತರವಾಗಿ ನಡೆದ ಈ ತಪಾಸಣೆಯಲ್ಲಿ ಹಣದ ವಹಿವಾಟಿಗೆ ಸಂಬಂಧಿಸಿದ ನೂರಾರು ದಾಖಲೆಗಳನ್ನು ಜಾಲಾಡಲಾಯಿತು.
ಶಿವಂ ಅಸೋಸಿಯೇಟ್ಸ್‌ನಲ್ಲಿ ರಿಸರ್ವ್ ಬ್ಯಾಂಕ್ (RBI) ಗೈಡ್‌ಲೈನ್ಸ್ ಸಂಪೂರ್ಣ ಉಲ್ಲಂಘನೆ
ಜಿಲ್ಲಾಧಿಕಾರಿಗಳ (DC) ಆಜ್ಞೆಯಂತೆ ಪ್ರಾಥಮಿಕ ತನಿಖೆ ನಡೆಸಿದ ಅಧಿಕಾರಿಗಳಿಗೆ ದೊಡ್ಡ ಶಾಕ್ ಕಾದಿತ್ತು. ಶಿವಂ ಅಸೋಸಿಯೇಟ್ಸ್‌ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಗೈಡ್‌ಲೈನ್ಸ್ ಸಂಪೂರ್ಣ ಉಲ್ಲಂಘನೆಯಾಗಿರುವುದು ಕಂಡುಬಂದಿದೆ. ಸದ್ಯಕ್ಕೆ ಠೇವಣಿದಾರರಿಂದ ಯಾವುದೇ ಲಿಖಿತ ದೂರು ಬಂದಿಲ್ಲವಾದರೂ, ಮೌಖಿಕವಾಗಿ ಹೇಳಿಕೊಂಡಿದ್ದಾರೆ.
ಸಾರ್ವಜನಿಕರಿಂದ 'ಲೋನ್' ರೂಪದಲ್ಲಿ ಹಣ ಪಡೆದು ಆ್ಯಪ್ ಮೂಲಕ ವಹಿವಾಟು ನಡೆಸಿರುವುದು ಬೆಳಕಿಗೆ ಬಂದಿದ್ದು, ಮುಂದೆ ಆಗುವ ದೊಡ್ಡ ಅನಾಹುತ ತಡೆಯಲು ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.
56
ಜಡ್ಜ್ ಮನೆಗೆ ಕರೆದೊಯ್ಯುವಾಗಲೂ ಶಿವಾನಂದ 'ಶಿವನಾಮ' ಜಪ!
ಎಫ್‌ಐಆರ್ ದಾಖಲಾಗುತ್ತಿದ್ದಂತೆ ಆಕ್ಷನ್ ಮೂಡ್‌ಗೆ ಇಳಿದ ಮಾಳಮಾರುತಿ ಠಾಣೆ ಪೊಲೀಸರು ಅಕ್ರಮ ಹೂಡಿಕೆ ಆರೋಪದಡಿ ಶಿವಾನಂದ ನೀಲಣ್ಣವರನ್ನು ಶಿವಬಸವ ನಗರದ ನಿವಾಸದಲ್ಲಿ ಬಂಧಿಸಿದರು. ವಿಶೇಷ ಎಂದರೆ, ಪೊಲೀಸರು ತನ್ನನ್ನು ಬಂಧಿಸಿ ಜಡ್ಜ್ ನಿವಾಸಕ್ಕೆ ಕರೆದೊಯ್ಯುವ ಸನ್ನಿವೇಶದಲ್ಲೂ ಶಿವಾನಂದ ಧೃತಿಗೆಡದೆ ‘ಓಂ ನಮಃ ಶಿವಾಯ’ ಹೇಳಿ ನಮಸ್ಕರಿಸಿದರು. ಈ ವಿಡೀಯೋ ತುಣುಕು ಕೂಡ ವೈರಲ್ ಆಗಿದೆ.
66
ಇದು ಸತ್ಯನೋ ಸುಳ್ಳೋ ಗೊತ್ತಿಲ್ಲ; ಎಲ್ಲರಿಗೂ ಒಳ್ಳೆಯದಾಗಲಿ
‘ಕೋಟ್ಯಂತರ ರೂಪಾಯಿ ವಂಚನೆ ಆರೋಪ ಕೇಳಿಬರುತ್ತಿದೆಯಲ್ಲ? ಎಂದು ಮಾಧ್ಯಮಗಳು ಪ್ರಶ್ನಿಸಿದಾಗ, ಶಿವಾನಂದ ನೀಲಣ್ಣವರ್, ಯಾವುದೇ ಆತಂಕವಿಲ್ಲದೆ, ಅತ್ಯಂತ ಕೂಲ್ ಆಗಿಯೇ ’ಅದು ಸತ್ಯನೋ, ಸುಳ್ಳೋ ನನಗೆ ಗೊತ್ತಿಲ್ಲ. ಎಲ್ಲರಿಗೂ ಒಳ್ಳೆಯದಾಗಲಿ, ಎಲ್ಲರಿಗೂ ಖುಷಿ ಸಿಗಲಿ' ಭಾರತದ ಜನತೆಗೆ ಒಳ್ಳೆಯದಾಗಲಿ' ಎಂದು ಕೈಮುಗಿದು, ಮತ್ತೊಮ್ಮೆ 'ಓಂ ನಮಃ ಶಿವಾಯ' ಎನ್ನುತ್ತಾ ಸಾಗಿದರು. ಅಧಿಕಾರಿಗಳು ಸದ್ಯ ಇಡೀ ಪ್ರಕರಣವನ್ನ ಚುರುಕಾಗಿ ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ